Advertisement

ಅಮೆರಿಕ ಗುಪ್ತಚರ ಸಂಸ್ಥೆ CIAನ 17 ಮಂದಿಯನ್ನು ಸೆರೆಹಿಡಿದ ಇರಾನ್, ಕೆಲವರಿಗೆ ಗಲ್ಲುಶಿಕ್ಷೆ?

09:02 AM Jul 23, 2019 | Nagendra Trasi |

ದುಬೈ:ಜಗತ್ತಿನ ದೊಡ್ಡಣ್ಣ ಎನಿಸಿಕೊಂಡಿರುವ ಅಮೆರಿಕದ ಬೇಹುಗಾರಿಕೆ ಸಂಸ್ಥೆಯಾದ ಸಿಐಎನ ಹದಿನೇಳು ಅಧಿಕಾರಿಗಳನ್ನು ಇರಾನ್ ಸೆರೆಹಿಡಿದಿದ್ದು, ಅದರಲ್ಲಿ ಕೆಲವರಿಗೆ ಮರಣದಂಡನೆ ವಿಧಿಸಿರುವುದಾಗಿ ಇರಾನ್ ಮಾಧ್ಯಮ ಸೋಮವಾರ ವರದಿ ಮಾಡಿದೆ.

Advertisement

ಶಂಕಿತ ಗುಪ್ತಚರ ಇಲಾಖೆ ಜೊತೆ ಸಂಪರ್ಕದಲ್ಲಿದ್ದ ಹಲವು ಸಿಐಎ ಅಧಿಕಾರಿಗಳ ಚಿತ್ರಗಳನ್ನು ಇರಾನ್ ಸ್ಟೇಟ್ ಟೆಲಿವಿಷನ್ ಸುದ್ದಿಯನ್ನು ಬಿತ್ತರಿಸಿದೆ ಎಂದು ವರದಿ ವಿವರಿಸಿದೆ.

ಇರಾನ್ 17 ಸಿಐಎ ಅಧಿಕಾರಿಗಳನ್ನು ಸೆರೆ ಹಿಡಿದಿರುವ ಬಗ್ಗೆ ಅಮೆರಿಕದ ಅಧಿಕಾರಿಗಳಾಗಲಿ ಅಥವಾ ಸಿಐಎ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಕಳೆದ ಜೂನ್ ನಲ್ಲಿ ಸಿಐಎ ಗುಪ್ತಚರ ಜಾಲವನ್ನು ಪತ್ತೆ ಹಚ್ಚಿರುವುದಾಗಿ ಇರಾನ್ ಘೋಷಿಸಿತ್ತು.

2019ರ ಮಾರ್ಚ್ ಅಂತ್ಯದಲ್ಲಿ ಇರಾನ್ 17 ಸಿಐಎ ಅಧಿಕಾರಿಗಳನ್ನು ಬಂಧಿಸಿರುವುದಾಗಿ ಗುಪ್ತಚರ ಸಚಿವಾಲಯ ತಿಳಿಸಿರುವುದಾಗಿ ಇರಾನ್ ಟೆಲಿವಿಷನ್ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next