Advertisement

ಅಮೆರಿಕದ ನಿಷೇಧವನ್ನು ಅಣಕವಾಡಿದ ಇರಾನ್‌

02:40 AM Jun 27, 2019 | Team Udayavani |

ಟೆಹ್ರಾನ್‌: ಇರಾನ್‌ನ ಧಾರ್ಮಿಕ ಮುಖಂಡ ಅಯಾತುಲ್ಲಾ ಖೊಮೆನೈನಿ ಹಾಗೂ ಇತರರ ಮೇಲೆ ಅಮೆರಿಕ ಹೇರಿರುವ ನಿಷೇಧವನ್ನು ಇರಾನ್‌ ಅಣಕವಾಡಿದೆ. ಇದೊಂದು ಗೊಂದಲಕರ ನಿರ್ಧಾರ ಎಂದಿರುವ ಇರಾನ್‌ ಅಧ್ಯಕ್ಷ ಹಸನ್‌ ರೌಹಾನಿ, ಅಮೆರಿಕದ ಅಧಿಕಾರಿಗಳು ಸುಳ್ಳುಬುರುಕರು ಎಂದಿದ್ದಾರೆ. ಈ ನಿಷೇಧ ವಿಧಿಸುವ ಮೂಲಕ ತಾವು ಏನು ಮಾಡುತ್ತಿದ್ದೇವೆ ಎಂಬುದೇ ಅಮೆರಿಕಕ್ಕೆ ತಿಳಿದಿಲ್ಲ. ಅಮೆರಿಕ ನಿರ್ಬಂಧದ ರಾಜತಾಂತ್ರಿಕತೆಯನ್ನು ಅಳವಡಿಸಿಕೊಂಡಂತಿದೆ. ಮಾತುಕತೆಗೆ ಸಿದ್ಧವಿದ್ದೇವೆ ಎಂದು ಹೇಳುತ್ತಲೇ ಅವರು ಹೇಗೆ ನಿಷೇಧವನ್ನೂ ಹೇರುತ್ತಾರೆ ಎಂದಿದ್ದಾರೆ.

Advertisement

ಈ ಮಧ್ಯೆ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌, ಇರಾನ್‌ ಜೊತೆಗೆ ಯುದ್ಧ ಮಾಡುವ ಉದ್ದೇಶವನ್ನು ನಾವು ಹೊಂದಿಲ್ಲ. ಆದರೆ ಯುದ್ಧ ಶುರುವಾದರೆ ತುಂಬ ದಿನಗಳ ಕಾಲ ನಡೆಯವುದಿಲ್ಲ. ಅಮೆರಿಕ ಅಷ್ಟು ಬಲಿಷ್ಠವಾಗಿದೆ ಎಂದಿದ್ದಾರೆ. ಇರಾನ್‌ಗೆ ನಿಷೇಧ ವಾಸ್ತವಾಂಶ ಅರಿವಿಗೆ ಬಂದಿಲ್ಲ. ಅಮೆರಿಕದ ಮೇಲೆ ಇರಾನ್‌ ನಡೆಸುವ ಯಾವುದೇ ದಾಳಿಗೆ ತಕ್ಕ ಪ್ರತಿಕ್ರಿಯೆ ನೀಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next