Advertisement

ತೈಲ ಹಡಗಿನ ಮೇಲೆ ರಾಕೆಟ್‌ ದಾಳಿ

10:00 AM Oct 13, 2019 | mahesh |

ಟೆಹರಾನ್‌: ಸೌದಿ ಅರೇಬಿಯಾ ಕರಾವಳಿಯಾಚೆಯ ಕೆಂಪು ಸಮುದ್ರದಲ್ಲಿ ತೆರಳುತ್ತಿದ್ದ ಇರಾನ್‌ನ ತೈಲ ಹಡಗನ್ನು ಗುರಿಯಾಗಿಸಿ ಎರಡು ರಾಕೆಟ್‌ಗಳನ್ನು ಉಡಾಯಿಸಲಾಗಿದ್ದು, ರಾಕೆಟ್‌ ಬಡಿದ ರಭಸಕ್ಕೆ ಹಡಗಿನ ಎರಡು ಉಗ್ರಾಣಗಳು ಧ್ವಂಸಗೊಂಡಿವೆ ಮತ್ತು ತೈಲ ಸೋರಿಕೆಯೂ ಆರಂಭವಾಗಿದೆ.

Advertisement

ಈ ವಿಚಾರವನ್ನು ಇರಾನ್‌ ಸರ್ಕಾರ ಖಚಿತಪಡಿಸಿದೆ. ಈ ಬೆಳವಣಿಗೆಯಿಂದಾಗಿ ಅಮೆರಿಕ ಮತ್ತು ಇರಾನ್‌
ನಡುವಿನ ಉದ್ವಿಗ್ನತೆ ಮತ್ತಷ್ಟು ಹೆಚ್ಚಲು ಕಾರಣವಾಗಿದೆ. ಆದರೆ ಘಟನೆ ಬಗ್ಗೆ ಸೌದಿ ಅರೇಬಿಯಾ ಸರ್ಕಾರದ ವತಿಯಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಇರಾನ್‌ ಸರ್ಕಾರ ನೀಡಿದ ಮಾಹಿತಿ ಪ್ರಕಾರ, ಸಬಿಟಿ ಎಂಬ ಹಡಗಿನ ಮೇಲೆ ರಾಕೆಟ್‌ ದಾಳಿಯಾಗಿದೆ. ಸೌದಿ ಅರೇಬಿಯಾದ ಬಂದರು ನಗರ ಜೆಡ್ಡಾಗೆ ಸಮೀಪದಲ್ಲೇ ಈ ಘಟನೆ ನಡೆದಿದೆ. ಸ್ಟೈಟ್‌ ಆಫ್ ಹೊಂಬುಜ್‌ನಲ್ಲಿ ಇತ್ತೀಚೆಗೆ ಇರಾನ್‌ ಕೆಲ  ತೈಲ ಹಡಗುಗಳ ಮೇಲೆ ದಾಳಿ ನಡೆಸಿದೆ ಎಂದು ಅಮೆರಿಕ ಆರೋಪ ಮಾಡಿತ್ತು. ಅದರ ಬೆನ್ನಲ್ಲೇ ಈ ಘಟನೆ ನಡೆದಿದೆ. ಇತ್ತೀಚೆಗಷ್ಟೇ ಹುತಿ ಬಂಡುಕೋರರು ಸೌದಿ ಅರೇಬಿಯಾದ ತೈಲ ಕಂಪನಿ ಅರ್ಮ್ಕೋದ 2 ಘಟಕಗಳ ಮೇಲೆ ದಾಳಿ ನಡೆಸಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next