Advertisement

ಇರಾನ್‌ ಮಸೀದಿಗಳ ಆರಂಭಕ್ಕೆ ಅನುಮತಿ

03:36 PM May 04, 2020 | sudhir |

ಟೆಹರಾನ್‌: ದೇಶದ ಬಹುಭಾಗಗಳಲ್ಲಿ ಮಸೀದಿಗಳು ಸೋಮವಾರದಿಂದ ತೆರೆಯಲಿವೆ ಎಂದು ಸರಕಾರ ತಿಳಿಸಿದೆ.
ಇರಾನಿನಲ್ಲಿ ಕೋವಿಡ್ ಸೋಂಕಿನಿಂದ ಸಾಯುವವರ ಸಂಖ್ಯೆ ಕಡಿಮೆಯಾದ ಹಿನ್ನೆಲೆಯಲ್ಲಿ ಈ ಪ್ರಕಟನೆ ಹೊರಡಿಸಲಾಗಿದೆ.

Advertisement

ಸರಕಾರದ ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ, ಕಳೆದ 24 ಗಂಟೆಗಳಲ್ಲಿ 47 ಮಂದಿ ಮಾತ್ರ ಬಲಿಯಾಗಿದ್ದಾರೆ. ಇದು ಕಳೆದ 55 ದಿನಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ. ಮುಂದಿನ ದಿನಗಳಲ್ಲೂ ಇದೇ ಟ್ರೆಂಡ್‌ ಪುನರಾವರ್ತನೆಯಾಗಲಿದೆ ಎಂದು ಇರಾನ್‌ ಅಧ್ಯಕ್ಷ ಹಸನ್‌ ರೂಹಾನಿ ಆಶಾವಾದ ವ್ಯಕ್ತಪಡಿಸಿದ್ದಾರೆ.

ದೇಶದ ಮೂರನೇ ಒಂದು ಭಾಗದಷ್ಟು ಆಡಳಿತ ವಿಭಾಗಗಳಲ್ಲಿ ಮಸೀದಿಗಳು ತೆರೆಯಲು ಅವಕಾಶ ನೀಡಲಾಗಿದೆ. ಪ್ರಾರ್ಥನೆ ಸಲ್ಲಿಸುವಾಗಲೂ ಸಾಮಾಜಿಕ ಅಂತರ ಪಾಲನೆ ಅಗತ್ಯ ಎಂದು ಸರಕಾರ ಸೂಚಿಸಿದೆ. ಮಾಚ್‌ ತಿಂಗಳಿನಿಂದಲೇ ಮಸೀದಿಗಳಲ್ಲಿ ಪ್ರಾರ್ಥನೆಗೆ ಅವಕಾಶವನ್ನು ನಿರಾಕರಿಸಲಾಗಿತ್ತು. ಇದುವರೆಗೆ ಇರಾನಿನಲ್ಲಿ 97 ಸಾವಿರಕ್ಕೂ ಹೆಚ್ಚು ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, 6, 203 ಮಂದಿ ಮೃತರಾಗಿದ್ದಾರೆ.

ಇತರೆ ದೇಶಗಳೊಂದಿಗೆ ಹಂಚಿಕೆ
ಕೋವಿಡ್ ವಿರುದ್ಧದ ಹೋರಾಟದ ಅನುಭವವನ್ನು ತನ್ನ ಸ್ನೇಹಿತ ರಾಷ್ಟ್ರಗಳಾದ ಅಫ್ಘಾನಿಸ್ತಾನ, ಪಾಕಿಸ್ತಾನ, ಒಮನ್‌, ಖತಾರ್‌, ಕುವೈತ್‌, ಸಿರಿಯಾ ಹಾಗೂ ಲೆಬನಾನ್‌ ದೇಶಗಳೊಂದಿಗೆ ಹಂಚಿಕೊಳ್ಳಲು ಸಿದ್ಧವಿದೆ ಎಂದು ಜನರಲ್‌ ಬಗೇರಿ ತಿಳಿಸಿರುವುದಾಗಿ ಟೆಹರಾನ್‌ ಟೈಮ್ಸ್‌ ವರದಿ ಮಾಡಿದೆ.

ಸಮರ್ಥ ಅಧ್ಯಕ್ಷರ ಯೋಜನೆ ಹಾಗೂ ಮಾರ್ಗದರ್ಶನದ ಜತೆಗೆ ಸಂಘಟಿತ ಪ್ರಯತ್ನದಿಂದ ಕೋವಿಡ್ ಸೋಂಕನ್ನು ನಿಯಂತ್ರಿಸಲು ಸಾಧ್ಯವಾಗಿದೆ. ಆದ್ದರಿಂದ ಈ ಅನುಭವವನ್ನು ಹಂಚಿಕೊಳ್ಳಲು ಇರಾನಿನ ಸೇನೆ ಉತ್ಸುಕವಾಗಿದೆ ಎಂದು ಹೇಳಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next