Advertisement
ಇಸ್ರೇಲ್‌ನ ಟೆಲ್ ಅವಿವ್ ಹಾಗೂ ಜೆರುಸಲೇಮ್ ಅನ್ನು ಗುರಿಯಾಗಿಸಿಕೊಂಡು ಇರಾನ್‌ನ ನಗರ ಗಳಾದ ಇಸ್ಫಹಾನ್, ತಬ್ರಿಜ್, ಖೋರಮಾ ಬಾದ್, ಕರಾಜ್ ಮತ್ತು ಅರಾಕ್ನಿಗಳಿಂದ ಕ್ಷಿಪಣಿಗಳನ್ನು ಉಡಾಯಿಸಲಾಗಿದೆ. ಈ ದಿಢೀರ್ ಬೆಳವಣಿಗೆಯು ಇಡೀ ಜಗತ್ತಲ್ಲೇ ಆತಂಕ ಸೃಷ್ಟಿಸಿದ್ದು, ವಿಶ್ವಸಂಸ್ಥೆ ಸೇರಿದಂತೆ ಹಲವು ರಾಷ್ಟ್ರಗಳು ಕಳವಳ ವ್ಯಕ್ತಪಡಿಸಿವೆ.ದಾಳಿ ಬೆನ್ನಲ್ಲೇ ಅಮೆರಿಕವು ಇಸ್ರೇಲ್ ನೆರವಿಗೆ ಧಾವಿಸಿದೆ. ಇರಾನ್‌ನ ಕ್ಷಿಪಣಿಗಳನ್ನು ಹೊಡೆದುರುಳಿ ಸಲು ನೆರವಾಗಿ ಎಂದು ತನ್ನ ಸೇನೆಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಸೂಚಿಸಿದ್ದಾರೆ.
ಟೆಹ್ರಾನ್ ಟೈಮ್ಸ ವರದಿಯ ಪ್ರಕಾರ, ಇಸ್ರೇಲ್ ವಿರುದ್ಧ ಪ್ರತೀಕಾರ ಕೈಗೊಳ್ಳುವ ನಿರ್ಧಾರವನ್ನು ಇರಾನ್‌ನ ಪ್ರಮುಖ ರಾಷ್ಟ್ರೀಯ ಭದ್ರತಾ ಮಂಡಳಿ (ಎಸ್‌ಎನ್‌ಎಸಿ) ಕೈಗೊಂಡಿತ್ತು. ಇಸ್ರೇಲ್ ದಾಳಿಯಲ್ಲಿ ಹೆಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ, ಬ್ರಿಗೇಡಿಯರ್ ಜನರಲ್ ಅಬ್ಟಾಸ್ ನಿಲೊ#àರುಷನ್ ಸೇರಿದಂತೆ ಹಲವು ಉಗ್ರ ಕಮಾಂಡರ್‌ಗಳು ಸಾವಿಗೀಡಾಗಿದ್ದರು. ಪ್ರತೀಕಾರವಾಗಿ ಇರಾನ್ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ಆರಂಭಿಸಿದೆ. ಅಲ್ಲದೇ ಈ ದಾಳಿ ಬಳಿಕ ಮತ್ತೆ ಪ್ರತಿದಾಳಿಗೆ ಮುಂದಾದರೆ ಇಸ್ರೇಲ್ ಅನ್ನು ಹೊಸಕಿ ಹಾಕುವುದಾಗಿ ಇರಾನ್ ಎಚ್ಚರಿಸಿದೆ.
Related Articles
ಇರಾನ್ ಕ್ಷಿಪಣಿ ದಾಳಿಯನ್ನು ಇಸ್ರೇಲ್ ಕ್ಷಿಪಣಿ ನಿಗ್ರಹ ವ್ಯವಸ್ಥೆ (ಐರನ್ ಡೋಮ್) ಸಮರ್ಥವಾಗಿ ಹಿಮ್ಮೆಟ್ಟಿಸಿದೆ. ಟೆಲ್ ಅವಿವ್, ಜೆರುಸಲೇಮ್ ಮೇಲೆ ದಾಳಿ ಆರಂಭವಾಗು ತ್ತಿದ್ದಂತೆ ಬಂಕರ್‌ಗಳಲ್ಲಿ ಆಶ್ರಯ ಪಡೆಯು ವಂತೆ ಅಲ್ಲಿನ ಸರಕಾರ ಸೂಚಿಸಿತ್ತು. ಮಂಗಳ ವಾರ ರಾತ್ರಿ 11 ಗಂಟೆ ಬಳಿಕ ಮತ್ತೆ ಮಾಹಿತಿ ನೀಡಿದ ಇಸ್ರೇಲ್ ಸೇನೆ, ಈಗ ದಾಳಿಯ ಭೀತಿಯಿಲ್ಲ, ಆದರೆ ಆಶ್ರಯದಿಂದ ಹೊರಗೆ ಬರಬಾರದು ಎಂದು ತಿಳಿಸಿತು. ಈ ಮಧ್ಯೆ ಕ್ಷಿಪಣಿ ದಾಳಿಗೆ ಇರಾನ್ ಗಂಭೀರ ಪರಿಣಾಮ ಗಳನ್ನು ಎದುರಿಸಲಿದೆ ಎಂದು ಹೇಳಿದೆ.
Advertisement
ಈವರೆಗೆ 180 ಕ್ಷಿಪಣಿಗಳ ದಾಳಿ ನಡೆದಿದೆ. ಇದು ಆರಂಭಿಕ ಲೆಕ್ಕಾಚಾರ. ಈ ಸಂಖ್ಯೆ ಇನ್ನೂ ಹೆಚ್ಚಿರಬಹುದು ಎಂದು ಇಸ್ರೇಲ್ ಸೇನೆ ಹೇಳಿದೆ.
ಟೆಲ್ ಅವಿವ್ ಶೂಟೌಟ್6 ಮಂದಿ ಸಾವು ಮಂಗಳವಾರ ಸಂಜೆ ಇಸ್ರೇಲ್ ರಾಜಧಾನಿ ಟೆಲ್ ಅವಿವ್‌ನಲ್ಲಿ ನಡೆದ ಶೂಟೌಟ್‌ನಲ್ಲಿ 6 ಮಂದಿ ಮೃತಪಟ್ಟಿದ್ದಾರೆಂದು ಇಸ್ರೇಲ್ ಪೊಲೀಸ್ ತಿಳಿಸಿದ್ದಾರೆ. ಶಂಕಿತರಿಬ್ಬರು ದಕ್ಷಿಣ ಟೆಲ್ ಅವಿವ್‌ನ ಜಾಫಾ ನೆರೆ ಹೊರೆಯಲ್ಲಿ ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಅವರೂ ಸತ್ತಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಇರಾನ್ ಇಸ್ರೇಲ್ ಮೇಲೆ ಭೀಕರ ಕ್ಷಿಪಣಿ ದಾಳಿ ನಡೆಸುವ ಗಂಟೆಗಳ ಮೊದಲು ಈ ಗುಂಡಿನ ದಾಳಿ ನಡೆದಿದೆ ಎಂದು ಅವರು ತಿಳಿಸಿದ್ದಾರೆ. ಇಸ್ರೇಲ್ ಮೇಲೆ ಇರಾನ್ ದಾಳಿಗೆ ಅಮೆರಿಕ ಕೆಂಡ ಇರಾನ್ ಕ್ಷಿಪಣಿ ದಾಳಿ ಆರಂಭಿಸುತ್ತಿದ್ದಂತೆ ಇಸ್ರೇಲ್‌ಗೆ ನೆರವು ನೀಡಲು ಅಮೆರಿಕದ ಸೇನೆಗೆ ಅಧ್ಯಕ್ಷ ಜೋ ಬೈಡೆನ್ ಆದೇಶಿಸಿದ್ದಾರೆ. ಇರಾನ್ ಕ್ಷಿಪಣಿ ಗಳನ್ನು ಹೊಡೆದುರುಳಿಸುವಂತೆ ಸೂಚಿಸಿ ದ್ದಾರೆ. ಅಲ್ಲದೇ ಇರಾನ್ ನಡೆಸಿದ ದಾಳಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ, ಬೈಡೆನ್ ಸೇನೆಗೆ ಸನ್ನದ್ಧ ಸ್ಥಿತಿಯಲ್ಲಿರುವಂತೆ ಸೂಚಿಸಿ ದ್ದಾರೆ. ಅಮೆರಿಕ ಮಾತ್ರವಲ್ಲದೇ ಇತರಪಶ್ಚಿಮರಾಷ್ಟ್ರಗಳು ಇಸ್ರೇಲ್ ನೆರವಿಗೆ ಧಾವಿಸಿವೆ. ವಿಶ್ವಸಂಸ್ಥೆ ಕಳವಳ
ಇಂದು ಸಭೆ ಇಸ್ರೇಲ್ ಮೇಲೆ ಇರಾನ್ ದಾಳಿ ನಡೆಸುತ್ತಿದ್ದಂತೆ ವಿಶ್ವ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ಅಲ್ಲದೇ, ಬುಧವಾರ ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಇರಾನ್ ದಾಳಿ ಕುರಿತು ಚರ್ಚೆ ನಡೆಸುವ ಸಾಧ್ಯತೆಗಳಿವ ಎಂದು ಹೇಳಲಾಗುತ್ತಿದೆ. ಹಲವು ರಾಷ್ಟ್ರಗಳ ಯುದ್ಧ ವಿರಾಮಕ್ಕೆ ಒತ್ತಾಯಿಸಿವೆ. ಏನೇನಾಯ್ತು?
-ಹೆಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ಹತ್ಯೆಗೆ ಇರಾನ್ ಪ್ರತೀಕಾರ
-ಇಸ್ರೇಲ್ ಮೇಲೆ ಏಕಾಏಕಿ 180ಕ್ಕೂ ಹೆಚ್ಚು ರಾಕೆಟ್‌ಗಳ ಮಳೆ ಸುರಿಸಿದ ಇರಾನ್
-ಇರಾನ್ ಕ್ಷಿಪಣಿಗಳನ್ನು ಹೊಡೆದುರುಳಿಸಿದ ಇಸ್ರೇಲ್‌ನ ಐರನ್ ಡೋಮ್
-ಮತ್ತೆ ಪ್ರತಿದಾಳಿ ಮಾಡಿದ್ರೆ ಹೊಸಕಿ ಹಾಕುತ್ತೇವೆ: ಇಸ್ರೇಲ್‌ಗೆ ಇರಾನ್
-ಗಂಭೀರ ಪರಿಣಾಮ ಎದುರಿಸಲು ಸಜ್ಜಾಗಿ: ಇರಾನ್‌ಗೆ ಇಸ್ರೇಲ್ ಎಚ್ಚರಿಕೆ
-ಪ್ರತೀಕಾರದ ಸಮಯ, ಸ್ಥಳ ನಾವು ನಿರ್ಧರಿಸುತ್ತೇವೆ: ಇಸ್ರೇಲ್
-ಇಸ್ರೇಲ್ ನೆರವಿಗೆ ಧಾವಿಸಿದ ಅಮೆರಿಕ, ಪಾಶ್ಚಿಮಾತ್ಯ ರಾಷ್ಟ್ರಗಳು ಇರಾನ್ ಗುಪ್ತಚರ ಮುಖ್ಯಸ್ಥ ಇಸ್ರೇಲ್ ಸ್ಪೈ : ಮಾಜಿ ಅಧ್ಯಕ್ಷ
ಮೊಸಾದ್‌ನ ಕಾರ್ಯತಂತ್ರಗಳಿಗೆ ಠಕ್ಕರ್ ನೀಡಲು ಇರಾನ್ ಮೊಸಾದ್ ವಿರೋಧಿ ಗುಪ್ತಚರ ಸಂಸ್ಥೆ ಸ್ಥಾಪಿಸಿದ್ದು, ಅದರ ಮುಖ್ಯಸ್ಥನೇ ಮೊಸಾದ್‌ನ ಏಜೆಂಟ್ ಆಗಿದ್ದ ಎಂಬ ಸ್ಫೋಟಕ ಮಾಹಿತಿಯನ್ನು ಇರಾನ್ ಮಾಜಿ ಅಧ್ಯಕ್ಷ ಮಹಮೂದ್ ಅಹ್ಮ ದಿನೆ ಜಾದ್ ಹೊರಹಾಕಿದ್ದಾರೆ. 20 ಏಜೆಂಟರ್ ಮೊಸಾದ್ ವಿರೋಧಿ ಗುಪ್ತಚರ ಸಂಸ್ಥೆ ಮುಖ್ಯಸ್ಥನೇ ಇಸ್ರೇಲ್ ಗೂಢಚರ್ಯ ನಾಗಿದ್ದ. ಇರಾನ್‌ನಲ್ಲಿ ಇಸ್ರೇಲ್ ನಡೆ ಸಿದ ಕಾರ್ಯಾಚಣೆಗಳಿಗೆ ಮಾಹಿತಿ ರವಾನೆಯಾಗುತ್ತಿತ್ತು ಎಂದಿದ್ದಾರೆ.