Advertisement

ರಷ್ಯಾ ದಾಳಿಗೆ ನ್ಯಾಟೊ ಪಡೆಗಳೇ ಕಾರಣ: ಇರಾನ್‌

07:55 PM Feb 24, 2022 | Team Udayavani |

ಇರಾನ್‌: ಇರಾನ್‌ ದೇಶ ರಷ್ಯಾದ ಸೇನಾ ಕಾರ್ಯಾಚರಣೆಯನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡಿದೆ.

Advertisement

ಆ ದೇಶದ ವಿದೇಶಾಂಗ ಸಚಿವ ಹೊಸೇನ್‌ ಅಮಿರಾಬ್ದೊಲ್ಲಾಹಿಯನ್‌ ಮಾತನಾಡಿ, ಉಕ್ರೇನ್‌ ಮೇಲೆ ರಷ್ಯಾ ದಾಳಿ ಮಾಡಲು ನ್ಯಾಟೊ ಪಡೆಗಳೇ ಕಾರಣ. ನ್ಯಾಟೊ ಪಡೆಗಳು ಪದೇಪದೇ ಉಕ್ರೇನ್‌ಗೆ ಕುಮ್ಮಕ್ಕು ನೀಡಿದ್ದರಿಂದಲೇ ರಷ್ಯಾ ರೊಚ್ಚಿಗೆದ್ದಿದೆ.

ಇದನ್ನು ರಾಜತಾಂತ್ರಿಕ, ರಾಜಕೀಯ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕು ಎಂದಿದ್ದಾರೆ. ಇದೇ ವೇಳೆ ಉಕ್ರೇನ್‌ನಲ್ಲಿರುವ ಇರಾನ್‌ ನಾಗರಿಕರನ್ನು ಮರಳಿ ಕರೆಸಿಕೊಳ್ಳಲು ಸುರಕ್ಷಿತ ಮಾರ್ಗವನ್ನು ಇರಾನ್‌ ಹುಡುಕುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next