Advertisement

ಬಾಯ್ ಫ್ರೆಂಡ್ ಜೊತೆಗಿನ ರೊಮ್ಯಾಂಟಿಕ್ ಫೋಟೊ ಹಂಚಿಕೊಂಡ ಅಮೀರ್ ಖಾನ್ ಪುತ್ರಿ  

02:36 PM Jul 17, 2021 | Team Udayavani |

ಮುಂಬೈ : ಬಾಲಿವುಡ್ ಖ್ಯಾತ ನಟ ಆಮೀರ್ ಖಾನ್ ಅವರ ಮೊದಲ ಪತ್ನಿ ಮಗಳು ಇರಾ ಖಾನ್ ತನ್ನ ಬಾಯ್ ಫ್ರೆಂಡ್ ಜೊತೆಗಿನ ಫೋಟೋ ಶೇರ್ ಮಾಡಿದ್ದಾರೆ.

Advertisement

ಇರಾ ಖಾನ್ ತನ್ನ ಬಾಯ್ ಫ್ರೆಂಡ್ ನೂಪುರ್ ಶಿಖಾರೆ ಜೊತೆಗಿನ ರೊಮ್ಯಾಂಟಿಕ್ ಸಮಯದ ಫೋಟೋವನ್ನು ಶೇರ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ನೂಪುರ್ ಜೊತೆ ಆಪ್ತವಾಗಿರುವ ಇರಾ ತನ್ನ ಕೈಯಿಂದ ನೂಪುರ್ ಕತ್ತನ್ನು ಒತ್ತಿ ಹಿಡಿದಿರುವ ಫೋಟೋ ಸೇರಿದಂತೆ ಇಬ್ಬರು ನಗುತ್ತಾ, ಸಂತೋಷವಾಗಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಇಬ್ಬರ ಫೋಟೋಗೆ ನೆಟ್ಟಿಗರಿಂದ ಸಿಕ್ಕಾಪಟ್ಟೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ‘ಇಬ್ಬರು ವಿಶೇಷ ಕಪಲ್’, ‘ಅದ್ಭುತವಾದ ಫೋಟೋ’ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಇರಾ ಖಾನ್ ತನ್ನ ಹುಡುಗನ ಜೊತೆಗಿನ ಫೋಟೊಗಳನ್ನು ಹಂಚಿಕೊಳ್ಳುತ್ತಿರುವುದು ಇದೆ ಮೊದಲೆನಲ್ಲ. ಈ ಮೊದಲು ಸಾಕಷ್ಟು ಫೋಟೊಗಳನ್ನು ತಮ್ಮ ಇನ್ ‍ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಇರಾ ಖಾನ್ ಹಾಗೂ ನೂಪುರ್ ಶಿಖಾರೆ ಪ್ರೀತಿಯಲ್ಲಿರುವುದು ರಹಸ್ಯವಾಗಿ ಉಳಿದಿತ್ತು. ಈ ವರ್ಷದ ಪ್ರೇಮಿಗಳ ದಿನದಂದು ಇರಾ ಖಾನ್ ಲವ್ ಬಗ್ಗೆ ಬಾಯಿ ಬಿಟ್ಟಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next