ಬೆಂಗಳೂರು: ಚುನಾವಣಾ ಆಯೋಗದ ಅನುಮತಿ ಪಡೆದು ಐವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಎನ್. ಶಿವಕುಮಾರ್-ಎಡಿಜಿಪಿ, ಸಾರ್ವಜನಿಕ ಕುಂದುಕೊರತೆ ಮತ್ತು ಮಾನವಹಕ್ಕು.ಸುನಿಲ್ ಅಗರವಾಲ್-ಎಡಿಜಿಪಿ, ಕೆಎಸ್‌ಆರ್‌ಪಿ, ಡಾ. ಕೆ.ರಾಮಚಂದ್ರರಾವ್-ಎಡಿಜಿಪಿ, ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ. ಅಣ್ಣಿಗೇರಿ ಮಂಜುನಾಥ್-ಎಡಿಜಿಪಿ ಮತ್ತು ಪೊಲೀಸ್ ಆಯುಕ್ತರು, ಬೆಳಗಾವಿ ನಗರ, ಡಾ.ಡಿ.ಸಿ. ರಾಜಪ್ಪ-ಎಡಿಜಿಪಿ, ರೈಲ್ವೇಸ್.
53 ತಹಶೀಲ್ದಾರರ ವರ್ಗಾವಣೆ: ಚುನಾವಣಾ ಮಾರ್ಗಸೂಚಿಗಳ ಪ್ರಕಾರ ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣಕ್ಕೆ ಜಾರಿಗೆ ಬರುವಂತೆ 53 ತಹಶೀಲ್ದಾರರನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ.
ವರ್ಗಾವಣೆಗೊಂಡಿರುವ ಎಲ್ಲ 53 ಮಂದಿ ತಹಶೀಲ್ದಾರರನ್ನು ಅವರು ಈಗಿರುವ ಸ್ಥಳಗಳಿಂದ ಕೂಡಲೇ ಬಿಡುಗಡೆಗೊಳಿಸಬೇಕು ಎಂದು ಎಲ್ಲ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದ್ದು, ಏಪ್ರಿಲ್ 1ರೊಳಗೆ ವರ್ಗಾವಣೆಗೊಂಡ ಸ್ಥಳಗಳಲ್ಲಿ ಕರ್ತವ್ಯಕ್ಕೆ
ಹಾಜರಾಗಬೇಕು ಎಂದು ಸರ್ಕಾರದ ಅಧಿಸೂಚನೆಯಲ್ಲಿ ತಹಶೀಲ್ದಾರರಿಗೆ ಸೂಚಿಸಲಾಗಿದೆ. ಇದೇ ವೇಳೆ ಇಬ್ಬರು ತಹಶೀಲ್ದಾರರು ಕರ್ತವ್ಯ ನಿರ್ವಹಿಸುತ್ತಿದ್ದ ಸ್ಥಳಗಳನ್ನು ಮಾರ್ಪಡಿಸಲಾಗಿದೆ.