Advertisement

ಡೆಲ್ಲಿ – ಹೈದರಾಬಾದ್ ಮುಖಾಮುಖಿ : ಟಾಸ್ ಗೆದ್ದ ಶ್ರೇಯಸ್ ಪಡೆ ಬೌಲಿಂಗ್ ಆಯ್ಕೆ

07:10 PM Oct 27, 2020 | Suhan S |

ದುಬೈ: ಐಪಿಎಲ್ ನ 47 ನೇ ಪಂದ್ಯದಲ್ಲಿ ಟಾಸ್ ಗೆದ್ದ  ಶ್ರೇಯಸ್ ಪಡೆ ಬೌಲಿಂಗ್ ಆಯ್ದುಕೊಂಡಿದೆ.

Advertisement

ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ಮಂಗಳವಾರ ನಡೆಯಲಿರುವ ಪಂದ್ಯ ವಾರ್ನರ್ ನೇತೃತ್ವದ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಮಾಡು ಇಲ್ಲವೇ ಮಡಿ ಪಂದ್ಯವಾಗಲಿದೆ. ಹೈದರಾಬಾದ್ ಇದುವರೆಗೆ ಆಡಿದ 11 ಪಂದ್ಯದಲ್ಲಿ 4 ರಲ್ಲಿ ಗೆಲುವು ಸಾಧಿಸಿದ್ದು, 7 ಪಂದ್ಯದಲ್ಲಿ ಮುಗ್ಗರಿಸಿಕೊಂಡಿದೆ. ಸದ್ಯ ಅಂಕಪಟ್ಟಿಯಲ್ಲಿ 8 ಅಂಕದೊಂದಿಗೆ 7 ನೇ ಸ್ಥಾನದಲ್ಲಿದ್ದು, ಇಂದಿನ ಪಂದ್ಯ ಸೇರಿ, ಮುಂಬರುವ ಎರಡು ಪಂದ್ಯದಲ್ಲಿ ದೊಡ್ಡ ಅಂತರದ ಗೆಲುವು ಸಾಧಿಸಲೇ ಬೇಕಾದ ಒತ್ತಡ ತಂಡದ ಮೇಲಿದೆ. ಒಂದು ವೇಳೆ ಹೈದರಾಬಾದ್ ಸೋತರೆ ಮುಂದಿನ ಲೆಕ್ಕಚಾರ ಬಹುತೇಕ ಕಷ್ಟಸಾಧ್ಯವಾಗಲಿದೆ.

ಇತ್ತ ಶ್ರೇಯಸ್ ಅಯ್ಯರ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ಗೆ ಈ ಬಾರಿ  ಆದೃಷ್ಟದ ಬಾಗಿಲು ತೆರೆದಿದೆ. ಡೆಲ್ಲಿ ಇದುವರೆಗೆ ಆಡಿದ 11 ಪಂದ್ಯದಲ್ಲಿ  7 ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿದ್ದು, 4 ರಲ್ಲಿ ಸೋತು ಅಂಕಪಟ್ಟಿಯಲ್ಲಿ 14 ಅಂಕದೊಂದಿಗೆ ಎರಡನೇ ಸ್ಥಾನದಲ್ಲಿದೆ. ಡೆಲ್ಲಿ ಇಂದಿನ ಪಂದ್ಯ ಗೆದ್ದರೆ ಫ್ಲೇ ಆಫ್ ಹಂತಕ್ಕೆ ಅಧಿಕೃತವಾಗಿ ದಾಪುಗಾಲು ಇಡಲಿದೆ.

ಸನ್‌ರೈಸರ್ಸ್ ಹೈದರಾಬಾದ್ (ಪ್ಲೇಯಿಂಗ್ ಇಲೆವೆನ್): ಡೇವಿಡ್ ವಾರ್ನರ್ (ನಾಯಕ), ಕೇನ್ ವಿಲಿಯಮ್ಸನ್, ಮನೀಶ್ ಪಾಂಡೆ, ವಿಜಯ್ ಶಂಕರ್, ವೃದ್ಧಿಮಾನ್ ಸಹಾ (ಕೀಪರ್), ಜೇಸನ್ ಹೋಲ್ಡರ್, ಅಬ್ದುಲ್ ಸಮದ್, ರಶೀದ್ ಖಾನ್, ಶಹಬಾಜ್ ನದೀಮ್, ಸಂದೀಪ್ ಶರ್ಮಾ, ಟಿ ನಟರಾಜನ್

ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ ಇಲೆವೆನ್): ಅಜಿಂಕ್ಯ ರಹಾನೆ, ಶಿಖರ್ ಧವನ್, ಶ್ರೇಯಸ್ ಅಯ್ಯರ್ (ನಾಯಕ), ರಿಷಭ್ ಪಂತ್ (ಕೀಪರ್), ಶಿಮ್ರಾನ್ ಹೆಟ್ಮಿಯರ್, ಮಾರ್ಕಸ್ ಸ್ಟೊಯಿನಿಸ್, ಆಕ್ಸಾರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕಗಿಸೊ ರಬಡಾ, ಅನ್ರಿಕ್ ನಾರ್ತ್ಜೆ, ತುಷಾರ್ ದೇಶಪಾಂಡೆ

Advertisement

 

Advertisement

Udayavani is now on Telegram. Click here to join our channel and stay updated with the latest news.

Next