Advertisement
ಯಾಕಿಷ್ಟೊಂದು ಜನಪ್ರಿಯತೆ?ಭಾರತ ವಿಶ್ವದಲ್ಲೇ 2ನೇ ಗರಿಷ್ಠ ಜನಸಂಖ್ಯೆ (140 ಕೋಟಿ) ಹೊಂದಿರುವ ದೇಶ. ಹೀಗೆಯೇ ಹೋದರೆ ಇನ್ನು ಕೆಲವೇ ವರ್ಷಗಳಲ್ಲಿ ಚೀನವನ್ನು ಹಿಂದಿಕ್ಕಿ ಅಗ್ರಸ್ಥಾನ ಪಡೆಯಲಿದೆ. ಇಲ್ಲಿನ ಜನಪ್ರಿಯ ಕ್ರೀಡೆಗಳ ಪೈಕಿ ಕ್ರಿಕೆಟ್‌ನದ್ದು ಏಕಸ್ವಾಮ್ಯ!
Related Articles
Advertisement
ವಿಶ್ವದ ಬೃಹತ್ ಮಾರುಕಟ್ಟೆಯಲ್ಲಿ ಕ್ರಿಕೆಟ್‌ಗೆ ಅಗ್ರಸ್ಥಾನ!ಜಾಗತಿಕವಾಗಿ ಅತ್ಯಂತ ಜನಪ್ರಿಯ ಕ್ರೀಡೆಯೆಂದರೆ ಫುಟ್‌ಬಾಲ್. ಇನ್ನು ಟೆನಿಸ್ ಬಹಳ ಶ್ರೀಮಂತ ಕ್ರೀಡೆ. ತಂಡ ಕ್ರೀಡೆಗಳ ಪೈಕಿ ಫುಟ್‌ಬಾಲ್ ಬಿಟ್ಟರೆ ಕ್ರಿಕೆಟ್‌ಗೆ ಗರಿಷ್ಠ ಜನಪ್ರಿಯತೆ, ಶ್ರೀಮಂತಿಕೆಯಿರುವುದು! ಇದಕ್ಕೆ ಕಾರಣವಿದೆ. ಕ್ರಿಕೆಟ್ ಆಡುವುದು ಕೆಲವೇ ರಾಷ್ಟ್ರಗಳಲ್ಲಾದರೂ, ಅದರಲ್ಲೊಂದು ದೇಶ ಭಾರತ ಎನ್ನುವುದು ಅತ್ಯಂತ ಮಹತ್ವದ ಸಂಗತಿ. ಇಲ್ಲಿನ 140 ಕೋಟಿ ಜನಸಂಖ್ಯೆಯಲ್ಲಿ ಕ್ರಿಕೆಟ್ ಗೊತ್ತಿಲ್ಲ ಅನ್ನುವ ವ್ಯಕ್ತಿಗಳು ಬಹಳ ವಿರಳ. ಭಾರತದಲ್ಲಿರುವ ಬೃಹತ್ ಮಾರುಕಟ್ಟೆಗೆ ಕ್ರಿಕೆಟ್ ಮೂಲಕ ಲಗ್ಗೆ ಹಾಕಲು ಎಲ್ಲರೂ ಬಯಸುತ್ತಾರೆ. ಇದು ಫುಟ್‌ಬಾಲ್, ಟೆನಿಸ್‌ಗಿಲ್ಲದ ಸೌಲಭ್ಯವನ್ನು, ಕ್ರಿಕೆಟ್‌ಗೆ ತಂದುಕೊಟ್ಟಿದೆ. ಅಮೆಜಾನ್, ಗೂಗಲ್, ಆ್ಯಪಲ್‌ಗೂ ಆಸಕ್ತಿ
ಅಮೆರಿಕದ ದೈತ್ಯ ತಾಂತ್ರಿಕ ಸಂಸ್ಥೆಗಳಾದ ಆಲ್ಫಾಬೆಟ್ (ಗೂಗಲ್), ಆ್ಯಪಲ್ ಮತ್ತು ಆನ್‌ಲೈನ್ ಮಾರಾಟ ದಿಗ್ಗಜ ಅಮೆಜಾನ್‌ಗೂ ಐಪಿಎಲ್ ನೇರಪ್ರಸಾರದ ಹಕ್ಕನ್ನು ಖರೀದಿಸಲು ಆಸಕ್ತಿಯಿತ್ತು. ಕಡೆಯಕ್ಷಣದಲ್ಲಿ ಈ ಸಂಸ್ಥೆಗಳು ಹಿಂದೆ ಸರಿದವು. ಐಪಿಎಲ್ ಪ್ರಸಾರದಿಂದ ಆ ಮಟ್ಟದಲ್ಲಿ ಲಾಭವಿರುವುದೇ, ಈ ಸಂಸ್ಥೆಗಳೂ ಪ್ರಸಾರಕ್ಕೆ ಕೈಹಾಕಬಹುದಾ ಎಂದು ಚಿಂತಿಸಲು ಕಾರಣ. ಸಹಜವಾಗಿ ಐಪಿಎಲ್ ಅನ್ನು ನೇರಪ್ರಸಾರ ಮಾಡುವ ಸಂಸ್ಥೆ ಜನಪ್ರಿಯವೂ ಆಗುತ್ತದೆ, ಶ್ರೀಮಂತವೂ ಆಗುತ್ತದೆ. ಆ ಸಂಸ್ಥೆಗೆ ಇನ್ನಿತರೆ ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದರೆ ಅವಕ್ಕೂ ಸಹಜವಾಗಿ ಪ್ರಚಾರ ಸಿಗುತ್ತದೆ. ಏಕಸ್ವಾಮ್ಯ ಮುಗಿಯಿತು!
ಈ ಬಾರಿ ಐಪಿಎಲ್ ನೇರಪ್ರಸಾರದಲ್ಲಿ ಒಂದು ಸಂಸ್ಥೆಯ ಏಕಸ್ವಾಮ್ಯ ಮುಗಿದಿದೆ. 2008ರಿಂದ 2017ರವರೆಗೆ ಸೋನಿ ಪಿಕ್ಚರ್ಸ್ 8,200 ಕೋಟಿ ರೂ. ನೀಡಿ 10 ವರ್ಷಗಳ ಅವಧಿಗೆ ನೇರಪ್ರಸಾರದ ಹಕ್ಕನ್ನು ಹೊಂದಿತ್ತು. 2018-22ರ ಐದು ವರ್ಷದ ಅವಧಿಗೆ 16,348 ಕೋಟಿ ರೂ.ಗಳನ್ನು ನೀಡಿ ಸ್ಟಾರ್ ಸಂಸ್ಥೆಯು ಟೀವಿ ಮತ್ತು ಡಿಜಿಟಲ್ ಹಕ್ಕನ್ನು ಪಡೆದಿತ್ತು. ಈ ಎರಡೂ ಅವಧಿಯಲ್ಲಿ ನೇರಪ್ರಸಾರದ ಹಕ್ಕು ಒಂದೇ ಸಂಸ್ಥೆಗೇ ಸಿಕ್ಕಿ ಏಕಸ್ವಾಮ್ಯ ಸಾಧ್ಯವಾಗಿತ್ತು. ಆದರೆ ಈ ಬಾರಿ ಟೀವಿ ನೇರಪ್ರಸಾರ ಸ್ಟಾರ್‌ಗೆ, ಡಿಜಿಟಲ್ ಪ್ರಸಾರ ವಯಾಕಾಮ್18ಗೆ ಲಭಿಸಿದೆ. ಇನ್ನು ಬೇರೆ ಬೇರೆ ಹಕ್ಕುಗಳು ಬೇರೆಬೇರೆ ಸಂಸ್ಥೆಗಳಿಗೆ ಸಿಕ್ಕಿ ಏಕಸ್ವಾಮ್ಯ ಮುಗಿದು ಹೋಗಿದೆ. ಆದಾಯದ ಮೂಲಗಳು
1. ನೇರಪ್ರಸಾರ: ಈ ಹಕ್ಕುಗಳ ಮಾರಾಟವೇ ಐಪಿಎಲ್‌ನ ಬೃಹತ್ ಮತ್ತು ಯಾವುದೇ ಆತಂಕಗಳಿಲ್ಲದ ಆದಾಯದ ಮೂಲ. ನೇರಪ್ರಸಾರ ಮಾಡುವ ಸಂಸ್ಥೆ ಪ್ರತೀ ಓವರ್‌ಗಳ ನಡುವೆ ಜಾಹೀರಾತು ಪ್ರದರ್ಶಿಸಿ, ಕಂಪನಿಗಳಿಂದ ಧಾರಾಳವಾಗಿ ಹಣ ಗಳಿಸುತ್ತದೆ.
2. ಪ್ರಾಯೋಜಕತ್ವ: ಐಪಿಎಲ್‌ನ ಶೀರ್ಷಿಕೆ, ಸ್ಟ್ರಾಟೆಜಿಕ್ ಟೈಮ್‌ಔಟ್, ಅಂಪೈರ್‌ಗಳು, ಬೌಂಡರಿ ಗೆರೆಗಳ ಪ್ರಾಯೋಜಕತ್ವವನ್ನು ಬೇರೆ ಬೇರೆ ಕಂಪನಿಗಳು ಭಾರೀ ಮೊತ್ತ ನೀಡಿ ಪಡೆದಿವೆ. ಇನ್ನು ಆಟಗಾರರ ಜೆರ್ಸಿ, ಹೆಲ್ಮೆಟ್, ಬ್ಯಾಟ್, ಟೂಲ್‌ಕಿಟ್‌ಗಳ ಪ್ರಾಯೋಜಕತ್ವವನ್ನೂ ಬಹಳ ಕಂಪನಿಗಳು ಪಡೆದಿವೆ.
3. ಉತ್ಪನ್ನಗಳ ಮಾರಾಟ: ಐಪಿಎಲ್‌ನದ್ದೇ ಆದ ಜೆರ್ಸಿ, ಇತರೆ ಉಡುಪುಗಳು, ಉಪಕರಣಗಳ ಮಾರಾಟದಿಂದಲೂ ಬಿಸಿಸಿಐ ಹಣ ಗಳಿಸಬಹುದು.
4. ಟಿಕೆಟ್ ಮಾರಾಟ: ಐಪಿಎಲ್‌ನಲ್ಲಿ ದೊಡ್ಡ ಆದಾಯದ ಮೂಲಗಳಲ್ಲಿ ಟಿಕೆಟ್ ಮಾರಾಟವೂ ಒಂದು. ಅಹ್ಮದಾಬಾದ್ ಮೈದಾನದ ಪ್ರೇಕ್ಷಕ ಸಾಮರ್ಥ್ಯ 1.32 ಲಕ್ಷ. ಈ ಮೈದಾನ ತುಂಬಿದರೆ ಬರುವ ಆದಾಯವನ್ನು ನೀವೇ ಅಂದಾಜು ಮಾಡಿ! ವಿಶ್ವದ ಶ್ರೀಮಂತ ಲೀಗ್‌ಗಳು
ನೇರಪ್ರಸಾರದಿಂದ ಬಂದ ಆದಾಯದ ಲೆಕ್ಕಾಚಾರದಲ್ಲಿ ಪ್ರಸ್ತುತ ಐಪಿಎಲ್, ವಿಶ್ವದ ಶ್ರೀಮಂತ ಲೀಗ್‌ಗಳಲ್ಲಿ 2ನೇ ಸ್ಥಾನ ಪಡೆದಿದೆ. ಐದು ಶ್ರೀಮಂತ ಲೀಗ್‌ಗಳ ಪಟ್ಟಿ ಇಲ್ಲಿದೆ.
1. ಎನ್‌ಎಫ್ಎಲ್: ಅಮೆರಿಕದ ನ್ಯಾಷನಲ್ ಫುಟ್‌ಬಾಲ್ ಲೀಗ್, ಒಂದು ಪಂದ್ಯದ ಪ್ರಸಾರದಿಂದ 132 ಕೋಟಿ ರೂ. ಗಳಿಸುತ್ತದೆ. ಇದಕ್ಕೆ ಅಗ್ರಸ್ಥಾನ.
2. ಐಪಿಎಲ್: ಇಲ್ಲಿನ ಒಂದು ಪಂದ್ಯದ ಪ್ರಸಾರದಿಂದ ಬಿಸಿಸಿಐ 114 ಕೋಟಿ ರೂ. ಗಳಿಸುತ್ತದೆ.
3. ಇಪಿಎಲ್: ಇಂಗ್ಲೆಂಡ್‌ನ ವಿಶ್ವಪ್ರಸಿದ್ಧ ಫುಟ್‌ಬಾಲ್ ಲೀಗ್ ಇಪಿಎಲ್ (ಇಂಗ್ಲಿಷ್ ಪ್ರೀಮಿಯರ್ ಲೀಗ್), ತನ್ನ ಒಂದು ಪಂದ್ಯದ ಪ್ರಸಾರದಿಂದ 82 ಕೋಟಿ ರೂ. ಗಳಿಸುತ್ತದೆ.
4. ಎಂಎಲ್‌ಬಿ: ಅಮೆರಿಕದ ಮೇಜರ್ ಲೀಗ್ ಬೇಸ್‌ಬಾಲ್ ತನ್ನ ಒಂದು ಪಂದ್ಯದ ಪ್ರಸಾರದಿಂದ 75 ಕೋಟಿ ರೂ. ಗಳಿಸುತ್ತದೆ.
5. ಬುಂಡೆಸ್ಲಿಗಾ: ಇದು ಜರ್ಮನಿಯ ಅತ್ಯಂತ ಜನಪ್ರಿಯ ಫುಟ್‌ಬಾಲ್ ಲೀಗ್. ಇದರ ಒಂದು ಪಂದ್ಯದ ಪ್ರಸಾರದಿಂದ 30 ಕೋಟಿ ರೂ. ಲಭಿಸುತ್ತದೆ.