Advertisement

ಎಪ್ರಿಲ್‌ 2ರಿಂದ ಐಪಿಎಲ್‌ ಆರಂಭ?

11:41 PM Nov 24, 2021 | Team Udayavani |

ಹೊಸದಿಲ್ಲಿ: ಮುಂದಿನ ವರ್ಷದ 15ನೇ ಐಪಿಎಲ್‌ ಎಪ್ರಿಲ್‌ 2ರಂದು ಚೆನ್ನೈಯಲ್ಲಿ ಆರಂಭಗೊಳ್ಳುವ ಸಾಧ್ಯತೆ ಇದೆ.

Advertisement

ಈ ಕುರಿತು ಬಿಸಿಸಿಐ ಈಗಾಗಲೇ ಪಾಲುದಾರರಿಗೆ ಮಾಹಿತಿ ನೀಡಿರುವುದಾಗಿ ತಿಳಿದು ಬಂದಿದೆ.ಹಾಗೆಯೇ ಜನವರಿಯಲ್ಲಿ ಮೆಗಾ ಹರಾಜು ನಡೆಯುವ ಬಗ್ಗೆಯೂ ವರದಿಯಾಗಿದೆ.

2022ರ ಐಪಿಎಲ್‌ನಲ್ಲಿ 10 ತಂಡಗಳು ಆಡಲಿದ್ದು, ಒಟ್ಟು 74 ಪಂದ್ಯಗಳು ನಡೆಯಲಿವೆ. 60 ದಿನಗಳ ಕಾಲ ಪಂದ್ಯಗಳನ್ನು ಆಯೋಜಿಸಲು ಬಿಸಿಸಿಐ ಆಂತರಿಕ ಸಭೆಯಲ್ಲಿ ಚರ್ಚಿಸಿದೆ. ಈ ಲೆಕ್ಕಾಚಾರದ ಪ್ರಕಾರ ಜೂನ್‌ ಮೊದಲ ವಾರಾಂತ್ಯದಲ್ಲಿ ಫೈನಲ್‌ ಪಂದ್ಯ ನಡೆಯಬೇಕಿದೆ.

ಈಗಿನ ನಿಯಮದ ಪ್ರಕಾರ ಪ್ರತೀ ತಂಡ ಲೀಗ್‌ ಹಂತದಲ್ಲಿ 14 ಪಂದ್ಯಗಳನ್ನು ಆಡುತ್ತಿತ್ತು. ಇದರಲ್ಲಿ 7 ಪಂದ್ಯಗಳನ್ನು ತವರಿನ ಅಂಗಳದಲ್ಲಿ, 7 ಪಂದ್ಯಗಳನ್ನು ತವರಿನಾಚೆಯ ಸ್ಟೇಡಿಯಂನಲ್ಲಿ ನಡೆಯುತ್ತಿದ್ದವು. ಮುಂದಿನ ವರ್ಷವೂ ಇದೇ ಮಾದರಿಯಲ್ಲಿ ಪಂದ್ಯಗಳು ನಡೆಯಬಹುದು.

ಇದನ್ನೂ ಓದಿ:ಸ್ವೀಡನ್‌ನ ಮೊದಲ ಮಹಿಳಾ ಪ್ರಧಾನಿ ಮ್ಯಾಗ್ಡಲೀನಾ

Advertisement

ಸುಳಿವು ನೀಡಿದ ಜಯ್‌ ಶಾ
ಇತ್ತೀಚೆಗಷ್ಟೇ ಚೆನ್ನೈಯಲ್ಲಿ ನಡೆದ ಸಿಎಸ್‌ಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ, ಮುಂದಿನ ವರ್ಷದ ಐಪಿಎಲ್‌ ಸಂಪೂರ್ಣವಾಗಿ ಭಾರತದಲ್ಲೇ ನಡೆಯಲಿದೆ ಎಂದಿದ್ದರು.

“ಚಿಪಾಕ್‌ನಲ್ಲಿ ಸಿಎಸ್‌ಕೆ ಪಂದ್ಯವನ್ನು ನೋಡಲು ನೀವೆಲ್ಲರೂ ಕಾತರರಾಗಿದ್ದೀರಿ ಎಂದು ನನಗೆ ತಿಳಿದಿದೆ. ಆ ಕ್ಷಣಕ್ಕೆ ಹೆಚ್ಚು ಕಾಯಬೇಕಿಲ್ಲ. ಐಪಿಎಲ್‌ನ 15ನೇ ಸೀಸನ್‌ ಭಾರತದಲ್ಲೇ ನಡೆಯಲಿದೆ ಮತ್ತು ಎರಡು ಹೊಸ ತಂಡಗಳ ಸೇರ್ಪಡೆಯೊಂದಿಗೆ ಇದು ಹಿಂದೆಂದಿಗಿಂತಲೂ ಹೆಚ್ಚು ರೋಚಕವಾಗಿರಲಿದೆ.

ಮುಂದಿನ ದಿನಗಳಲ್ಲಿ ಮೆಗಾ ಹರಾಜು ನಡೆಯಲಿದೆ. ಹೊಸ ಸಂಯೋಜನೆ ಹೇಗಿರುತ್ತದೆ ಎಂಬ ಕುತೂಹಲ ಎಲ್ಲರದೂ’ ಎಂದು ಜಯ್‌ ಶಾ ಹೇಳಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next