Advertisement

IPL; ಎಸ್‌ಆರ್‌ಎಚ್‌ನಿಂದ ಬ್ರೇಕ್‌ ಪಡೆದ  ಸ್ಟೇನ್‌: ಲಕ್ನೋಗೆ ಕ್ಲೂಸ್ನರ್‌ ಸಹಾಯಕ ಕೋಚ್‌

11:18 PM Mar 02, 2024 | Team Udayavani |

ಹೈದರಾಬಾದ್‌: ಈ ಬಾರಿಯ ಐಪಿಎಲ್‌ನಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಡೇಲ್‌ ಸ್ಟೇನ್‌ ಸನ್‌ರೈಸರ್ ಹೈದರಾಬಾದ್‌ನ ಕೋಚಿಂಗ್‌ ತಂಡದ ಸದಸ್ಯರಾಗಿರುವುದಿಲ್ಲ. ಒಂದು ವರ್ಷದ ಮಟ್ಟಿಗೆ ಬ್ರೇಕ್‌ ಪಡೆದಿದ್ದು, 2025ರ ಐಪಿಎಲ್‌ಗೆ ಮರಳುವ ಯೋಜನೆ ಹಾಕಿಕೊಂಡಿದ್ದಾರೆ.

Advertisement

ಎರಡೂ ಹೈದರಾಬಾದ್‌ ತಂಡಗಳ ಪರ ಆಡಿದ್ದ (ಡೆಕ್ಕನ್‌ ಚಾರ್ಜರ್, ಎಸ್‌ಆರ್‌ಎಚ್‌) ಡೇಲ್‌ ಸ್ಟೇನ್‌, ಬಳಿಕ ಆರ್‌ಸಿಬಿ ತಂಡವನ್ನು ಪ್ರತಿನಿಧಿಸಿದ್ದರು. 2022ರಲ್ಲಿ ಎಸ್‌ಆರ್‌ಎಚ್‌ ಬೌಲಿಂಗ್‌ ಕೋಚ್‌ ಆಗಿ ನೇಮಕಗೊಂಡರು.

ಲಕ್ನೋಗೆ ಕ್ಲೂಸ್ನರ್‌ ಸಹಾಯಕ ಕೋಚ್‌
ದಕ್ಷಿಣ ಆಫ್ರಿಕಾದ ಮಾಜಿ ಆಲ್‌ರೌಂಡರ್‌ ಲ್ಯಾನ್ಸ್‌ ಕ್ಲೂಸ್ನರ್‌ 2024ರ ಐಪಿಎಲ್‌ನಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ಸಹಾಯಕ ಕೋಚ್‌ ಆಗಿ ನೇಮಿಸಲ್ಪಟ್ಟಿದ್ದಾರೆ. ಆಸ್ಟ್ರೇಲಿಯದ ಜಸ್ಟಿನ್‌ ಲ್ಯಾಂಗರ್‌ ಈ ತಂಡದ ಪ್ರಧಾನ ಕೋಚ್‌ ಆಗಿದ್ದಾರೆ.

“ಸೌತ್‌ ಆಫ್ರಿಕಾ 20′ ಲೀಗ್‌ನಲ್ಲಿ ಲಕ್ನೋ ಫ್ರಾಂಚೈಸಿ ಆಗಿದ್ದ “ಡರ್ಬನ್‌ ಸೂಪರ್‌ ಜೈಂಟ್ಸ್‌’ ತಂಡಕ್ಕೆ ಕ್ಲೂಸ್ನರ್‌ ಹೆಡ್‌ ಕೋಚ್‌ ಆಗಿದ್ದರು.

ಲ್ಯಾನ್ಸ್‌ ಕ್ಲೂಸ್ನರ್‌ ಇದಕ್ಕೂ ಮೊದಲು ಮುಂಬೈ ಇಂಡಿಯನ್ಸ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳಿಗೂ ಕೋಚಿಂಗ್‌ ನೀಡಿದ್ದರು. 2023ರ ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ ವೇಳೆ ಗಯಾನಾ ಅಮೆಜಾನ್‌ ವಾರಿಯರ್ ತಂಡದ ಕೋಚ್‌ ಕೂಡ ಆಗಿದ್ದರು. ಅಂದು ಗಯಾನ ಮೊದಲ ಬಾರಿಗೆ ಸಿಪಿಎಲ್‌ ಚಾಂಪಿಯನ್‌ ಆಗಿ ಮೂಡಿಬಂದಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next