Advertisement
ಸ್ಮಿತ್ ಮತ್ತು ವಾರ್ನರ್ ಐಪಿಎಲ್‌ನಿಂದ ಉಚ್ಚಾಟಿಸಲ್ಪಟ್ಟಿರುವುದರಿಂದ ರಾಜಸ್ಥಾನ್ ಮತ್ತು ಹೈದರಾಬಾದ್ ಫ್ರಾಂಚೈಸಿಗಳಿಗೆ ಬದಲಿ ಆಟಗಾರರನ್ನು ಆಯ್ದುಕೊಳ್ಳಲು ಐಪಿಎಲ್ ಆಡಳಿತ ಸಂಸ್ಥೆ ಅನುಮತಿ ನೀಡಿದೆ. ಕಳೆದ ಹರಾಜಿನಲ್ಲಿ ಆಯ್ಕೆಯಾಗದೆ ಉಳಿದ ಬಹಳಷ್ಟು ಆಟಗಾರರು ರೇಸ್‌ನಲ್ಲಿದ್ದು, ಇವರಲ್ಲಿ ಯಾರಿಗೆ ಐಪಿಎಲ್ ಅದೃಷ್ಟ ಒಲಿಯಬಹುದು ಎಂಬುದೊಂದು ಕೌತುಕ.
ತಂಡದ ನಾಯಕನೂ ಆಗಿದ್ದ ಡೇವಿಡ್ ವಾರ್ನರ್ ಸ್ಫೋಟಕ ಆರಂಭಿಕನಾಗಿ ಎದುರಾಳಿಯನ್ನು ಬೆಚ್ಚಿಬೀಳಿಸುತ್ತಿದ್ದ ಬ್ಯಾಟ್ಸ್‌ಮನ್. ಇದೇ ಛಾತಿಯ, ಪವರ್-ಪ್ಲೇ ಅವಧಿಯ ಮೊದಲ 6 ಓವರ್‌ಗಳಲ್ಲಿ ಸಿಡಿದು ನಿಲ್ಲಬಲ್ಲ ಓಪನರ್ ಹೈದರಾಬಾದ್ ತಂಡಕ್ಕೆ ಅನಿವಾರ್ಯ. ನ್ಯೂಜಿಲ್ಯಾಂಡಿನ ಲ್ಯೂಕ್ ರಾಂಚಿ, ಮಾರ್ಟಿನ್ ಗಪ್ಟಿಲ್; ದಕ್ಷಿಣ ಆಫ್ರಿಕಾದ ಹಾಶಿಮ್ ಆಮ್ಲ, ಆಸ್ಟ್ರೇಲಿಯದ ಶಾನ್ ಮಾರ್ಷ್, ಇಂಗ್ಲೆಂಡಿನ ಅಲೆಕ್ಸ್ ಹೇಲ್ಸ್, ಅಫ್ಘಾನಿಸ್ಥಾನದ ಅಹ್ಮದ್ ಶೆಹಜಾದ್ ಅವರಲ್ಲೊಬ್ಬರು ಹೈದರಾಬಾದ್ ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ.
Related Articles
ಸ್ಟೀವನ್ ಸ್ಮಿತ್ ಮಧ್ಯಮ ಕ್ರಮಾಂಕದ ಬಲಿಷ್ಠ ಆಟಗಾರ. ಆದರೆ ರಾಜಸ್ಥಾನ್ ರಾಯಲ್ಸ್ ಮಿಡ್ಲ್ ಆರ್ಡರ್ ಬ್ಯಾಟ್ಸ್‌ಮನ್ ಒಬ್ಬನನ್ನು ಆಯ್ದುಕೊಳ್ಳುತ್ತದೋ ಅಥವಾ ದುರ್ಬಲವಾಗಿರುವ ಸ್ಪಿನ್ ವಿಭಾಗಕ್ಕೆ ಹೆಚ್ಚಿನ ಶಕ್ತಿ ತುಂಬಲು ಮುಂದಾಗುತ್ತದೋ ಎಂಬುದೊಂದು ಪ್ರಶ್ನೆ.
Advertisement
ಲ್ಯೂಕ್ ರಾಂಚಿ, ಜೋ ರೂಟ್, ಸಾಮ್ಯುಯೆಲ್ ಬದ್ರಿ, ಆ್ಯಡಂ ಜಂಪ, ಆದಿಲ್ ರಶೀದ್, ಹಾಶಿಮ್ ಆಮ್ಲ, ಟ್ರ್ಯಾವಿಸ್ ಹೆಡ್ ಮತ್ತು ಐಶ್ ಸೋಧಿ ಆಯ್ಕೆ ರೇಸ್‌ನಲ್ಲಿರುವ ಪ್ರಮುಖರು.