ದುಬೈ: ಐಪಿಎಲ್ 13ನೇ ಆವೃತ್ತಿಯ 6ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದೆ.
ಕರ್ನಾಟಕದ ಆರ್ ಸಿಬಿ ಮತ್ತು ಕನ್ನಡಿಗರಿಂದಲೇ ಕೂಡಿರುವ ಪಂಜಾಬ್ ನಡುವೆ ಕದನ ನಡೆಯುತ್ತಿದ್ದು, ಇತ್ತಂಡಗಳೂ 24 ಬಾರಿ ಮುಖಾಮುಖಿಯಾಗಿದೆ. ಇದರಲ್ಲಿ ಎರಡು ತಂಡಗಳು ಸಮಬಲ ಪ್ರದರ್ಶಿಸಿಸಿದ್ದು 12ರಲ್ಲಿ ಗೆದ್ದಿವೆ.
ಇಂದಿನ ಪಂದ್ಯ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿದ್ದು, ಈಗಾಗಲೇ ಹೈದಾರಾಬಾದ್ ವಿರುದ್ಧ ಗೆದ್ದು ಕೊಹ್ಲಿ ಪಡೆ ಭಾರೀ ವಿಶ್ವಾಸದಲ್ಲಿದೆ. ಮೊದಲ ಪಂದ್ಯದಲ್ಲಿ ಆರಂಭಿಕರು ಉತ್ತಮವಾಗಿ ಆಡಿದ್ದು ಭರವಸೆ ಮೂಡಿಸಿದ್ದಾರೆ. ಮತ್ತೊಂದೆಡೆ ಕ್ಯಾಪ್ಟನ್ ಕೊಹ್ಲಿ ಮತ್ತು ರನ್ ಮಷೀನ್ ಎಬಿಡಿ ಈ ಪಂದ್ಯದಲ್ಲಿ ಆರ್ಭಟಿಸುವ ಉತ್ಸಾಹದಲ್ಲಿದ್ದಾರೆ.
ಇನ್ನು ಡೆಲ್ಲಿ ವಿರುದ್ಧ ತನ್ನ ಮೊದಲ ಪಂದ್ಯದಲ್ಲಿ ಅಲ್ಪದರಲ್ಲೇ ಸೋತಿರುವ ಕನ್ನಡಿಗ ಕೆ. ರಾಹುಲ್ ನಾಯಕತ್ವದ ಪಂಜಾಬ್, ಇಂದು ಗೆಲುವಿನ ಟ್ರ್ಯಾಕ್ ಗೆ ಮರಳುವ ಯೋಜನೆ ರೂಪಿಸಿದೆ. ರಾಹುಲ್, ಮ್ಯಾಕ್ಸ್ ವೆಲ್, ಪೂರಣ್ ಸಿಡಿದರೇ ಪಂಜಾಬ್ ತಂಡ ಗೆಲ್ಲುವ ಎಲ್ಲಾ ಸಾಧ್ಯತೆಗಳಿವೆ.
ಆಡುವ ಹನ್ನೊಂದರ ಬಳಗ:
Related Articles
ಕಿಂಗ್ಸ್ ಇಲೆವೆನ್ ಪಂಜಾಬ್: ಲೋಕೇಶ್ ರಾಹುಲ್ (ನಾಯಕ), ಮಾಯಾಂಕ್ ಅಗರ್ವಾಲ್, ಕರುಣ್ ನಾಯರ್, ನಿಕೋಲಸ್ ಪೂರನ್, ಗ್ಲೆನ್ ಮ್ಯಾಕ್ಸ್ ವೆಲ್, ಸರ್ಫರಾಜ್ ಖಾನ್, ಜೇಮ್ಸ್ ನೀಶಮ್, ಮೊಹಮ್ಮದ್ ಶಮಿ, ಮುರುಗನ್ ಅಶ್ವಿನ್, ಶೆಲ್ಡನ್ ಕಾಟ್ರೆಲ್, ರವಿ ಬಿಶ್ನೊಯ್
ರಾಯಲ್ ಚಾಲೆಂಜರ್ಸ್ ಬೆಂಗಳೂರು: ದೇವದತ್ತ್ ಪಡಿಕ್ಕಲ್, ಆ್ಯರನ್ ಫಿಂಚ್, ವಿರಾಟ್ ಕೊಹ್ಲಿ (ನಾಯಕ), ಎಬಿ ಡಿವಿಲಿಯರ್ಸ್, ಶಿವಮ್ ದುಬೆ, ಜೋಶ್ ಫಿಲಿಪ್, ವಾಷಿಂಗ್ಟನ್ ಸುಂದರ್, ನವದೀಪ್ ಸೈನಿ, ಉಮೇಶ್ ಯಾದವ್, ಡೇಲ್ ಸ್ಟೇನ್, ಯುಜುವೇಂದ್ರ ಚಹಲ್