Advertisement

ಐಪಿಎಲ್‌: ಆರ್‌ಸಿಬಿ ಖರೀದಿ;ವಿರಾಟ್‌ ಕೊಹ್ಲಿ ಖುಷ್‌

09:55 AM Dec 21, 2019 | Sriram |

ಹೊಸದಿಲ್ಲಿ: ಈ ಬಾರಿಯ ಐಪಿಎಲ್‌ ಹರಾಜಿನಲ್ಲಿ ಆರ್‌ಸಿಬಿ ಸಮರ್ಥ ಆಟಗಾರರನ್ನೇ ಖರೀದಿಸಿದೆ ಎಂದು ನಾಯಕ ವಿರಾಟ್‌ ಕೊಹ್ಲಿ ಸಂತಸ ವ್ಯಕ್ತಪಡಿಸಿದ್ದಾರೆ. ಮುಂದಿನ ಐಪಿಎಲ್‌ನಲ್ಲಿ “ಬೋಲ್ಡ್‌ ಗೇಮ್‌’ ಆಡುವುದು ತಂಡದ ಗುರಿ ಎಂದಿದ್ದಾರೆ.

Advertisement

ಗುರುವಾರ ಕೋಲ್ಕತಾದಲ್ಲಿ ನಡೆದ ಹರಾಜಿನಲ್ಲಿ ಸ್ಫೋಟಕ ಬ್ಯಾಟ್ಸ್‌ ಮನ್‌ಗಳಾದ ಆರನ್‌ ಫಿಂಚ್‌, ಕ್ರಿಸ್‌ ಮಾರಿಸ್‌, ವೇಗಿಗಳಾದ ಡೇಲ್‌ ಸ್ಟೇನ್‌, ಕೇನ್‌ ರಿಚರ್ಡ್‌ಸನ್‌ ಮೊದ ಲಾದವರಿಗೆ ಬಲೆ ಬೀಸುವಲ್ಲಿ ಆರ್‌ಸಿಬಿ ಯಶಸ್ವಿಯಾಗಿತ್ತು.

“ನಾವು ಆರಿಸಿದ ಆಟಗಾರರ ಬಗ್ಗೆ ಬಹಳ ಖುಷಿಯಾಗಿದೆ. ಇವರೆಲ್ಲರೂ ಟಿ20ಗೆ ಸಮರ್ಥರಿದ್ದಾರೆ. ಮುಂದಿನ ಐಪಿಎಲ್‌ ಋತುವನ್ನು ಕುತೂಹಲದಿಂದ ಎದುರು ನೋಡುವಂತಾಗಿದೆ. ಹರಾಜಿಗೂ ಮುನ್ನ ತಂಡದ ಸಮತೋಲನದ ಬಗ್ಗೆ ನಾವು ಬಹಳಷ್ಟು ಚರ್ಚೆ ನಡೆಸಿದ್ದೆವು. ಈಗಿನ ತಂಡ ಸಾಕಷ್ಟು ಬಲಿಷ್ಠವಾಗಿದೆ’ ಎಂದು ಕೊಹ್ಲಿ ಅಭಿಪ್ರಾಯಪಟ್ಟರು.

“ಎಲ್ಲರೂ ವೈಯಕ್ತಿಕವಾಗಿ ಶ್ರೇಷ್ಠ ಪ್ರದರ್ಶನ ನೀಡುವುದರ ಜತೆಗೆ ದಿಟ್ಟ ಕ್ರಿಕೆಟ್‌ ಆಡಬೇಕು’ ಎಂದು ಕೊಹ್ಲಿ ಸೂಚಿಸಿದರು. ಆರ್‌ಸಿಬಿ ಅಧಿಕಾರಿ ಮೈಕ್‌ ಹೆಸನ್‌ ಕೂಡ ಆಯ್ಕೆ ಬಗ್ಗೆ ಸಂತಸ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next