Advertisement
ರಾಜಸ್ಥಾನ್ ರಾಯಲ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.ಆವೇಶ್ ಖಾನ್ ಮತ್ತು ಕೇಶವ ಮಹಾರಾಜ್ ಅವರ ನಿಖರ ದಾಳಿಯಿಂದಾಗಿ ರನ್ ಗಳಿಸಲು ಒದ್ದಾಡಿದ ಪಂಜಾಬ್ ಕಿಂಗ್ಸ್ ಎಂಟು ವಿಕೆಟಿಗೆ 147 ರನ್ ಗಳಿಸಲಷ್ಟೇ ಶಕ್ತವಾಯಿತು. ಗುರಿ ಬೆನ್ನಟ್ಟಿದ ರಾಜಸ್ಥಾನ್ 19.5 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಿ ಜಯಭೇರಿ ಬಾರಿಸಿತು. ಶಿಮ್ರಾನ್ ಹೆಟ್ಮೆಯರ್ ಔಟಾಗದೆ 27 ರನ್ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಯಶಸ್ವಿ ಜೈಸ್ವಾಲ್ 39, ತನುಷ್ ಕೋಟ್ಯಾನ್ 24, ನಾಯಕ ಸಂಜು ಸ್ಯಾಮ್ಸನ್ 18, ರಿಯಾನ್ ಪರಾಗ್ 23, ರೋವ್ಮನ್ ಪೊವೆಲ್ 11 ರನ್ ಕೊಡುಗೆ ನೀಡಿದರು.
Related Articles
Advertisement
ಕೊನೆ ಹಂತದಲ್ಲಿ ಲಿಯಮ್ ಲಿವಿಂಗ್‌ಸ್ಟೋನ್ ಮತ್ತು ಅಶುತೋಷ್ ಸಿಡಿದ ಕಾರಣ ತಂಡದ ಮೊತ್ತ 147ರ ವರೆಗೆ ತಲುಪಿತು.ಬಿಗು ದಾಳಿ ಸಂಘಟಿಸಿದ ವೇಗಿ ಆವೇಶ್ ಖಾನ್ ತನ್ನ 4 ಓವರ್‌ಗಳ ದಾಳಿಯಲ್ಲಿ 34 ರನ್ನಿಗೆ ಎರಡು ವಿಕೆಟ್ ಪಡೆದರೆ ಕೇಶವ ಮಹಾರಾಜ್ ಕೇವಲ 23 ರನ್ ನೀಡಿ ಎರಡು ವಿಕೆಟ್ ಪಡೆದರು. ದಾಳಿ ನಡೆಸಿದ ಬೌಲ್ಟ್, ಕುಲದೀಪ್ ಸೆನ್ ಮತ್ತು ಚಹಲ್ ತಲಾ ಒಂದು ವಿಕೆಟ್ ಕಿತ್ತರು.
ಧವನ್‌ಗೆ ವಿಶ್ರಾಂತಿಗಾಯದ ಸಮಸ್ಯೆಯಿಂದಾಗಿ ಶಿಖನ್ ಧವನ್ ಅವರಿಗೆ ವಿಶ್ರಾಂತಿ ನೀಡಲಾಗಿದ್ದು ಇಂಗ್ಲೆಂಡಿನ ಆಲ್‌ರೌಂಡರ್ ಸ್ಯಾಮ್ ಕರನ್ ತಂಡವನ್ನು ಮುನ್ನಡೆಸಲಿದ್ದಾರೆ. ಧವನ್ ಅವರ ಬದಲಿಗೆ ಅಥರ್ವ ಟೈಡ್ ಮತ್ತು ಲಿಯಮ್ ಲಿವಿಂಗ್‌ಸ್ಟೋನ್ ತಂಡಕ್ಕೆ ಮರಳಿದ್ದಾರೆ. ರಾಜಸ್ಥಾನ್ ರಾಯಲ್ಸ್ ಜಾಸ್ ಬಟ್ಲರ್ ಮತ್ತು ಆರ್. ಅಶ್ವಿನ್ ಅವರ ಸೇವೆಯಿಂದ ವಂಚಿತವಾಗಿದ್ದರೆ ಪೊವೆಲ್ ಮತ್ತು ತನುಷ್ ಕೋಟ್ಯಾನ್ ಆಡಲಿದ್ದಾರೆ.