Advertisement

ಐಪಿಎಲ್‌ ಉತ್ಪನ್ನ ಮೌಲ್ಯ 43 ಸಾವಿರ ಕೋ. ರೂ.ಗೆ ಏರಿಕೆ

07:00 AM Aug 09, 2018 | Team Udayavani |

ಮುಂಬಯಿ: ವಿಶ್ವ ಕ್ರಿಕೆಟ್‌ನಲ್ಲೇ ಐಪಿಎಲ್‌ ಅತ್ಯಂತ ಶ್ರೀಮಂತ ಸಂಸ್ಥೆ. ಪ್ರತೀ ಬಾರೀ ಅದರ ಶ್ರೀಮಂತಿಕೆ, ಜನಪ್ರಿಯತೆ ಏರುತ್ತಲೇ ಇದೆ. ಈ ಬಾರಿ ಮತ್ತೆ ಐಪಿಎಲ್‌ ಉತ್ಪನ್ನ ಮೌಲ್ಯ ಬೃಹತ್‌ ಪ್ರಮಾಣದಲ್ಲಿ ಏರಿಕೆ ಕಂಡಿದೆ. 2016ರಲ್ಲಿ 30000 ಸಾವಿರ ಕೋಟಿ ರೂ.ಗಳಿದ್ದ ಉತ್ಪನ್ನ ಮೌಲ್ಯ 2018ರ 11ನೇ ಐಪಿಎಲ್‌ ಹೊತ್ತಿಗೆ 43,000 ಕೋಟಿ ರೂ.ಗೇರಿದೆ. ಅಂದರೆ 13 ಸಾವಿರ ಕೋಟಿ ರೂ. ಏರಿಕೆಯಾಗಿದೆ.

Advertisement

ಐಪಿಎಲ್‌ನಲ್ಲಿ ವಿಪರೀತ ಹಣವಿರುವ ಕಾರಣ ವಿಶ್ವದ ಎಲ್ಲ ದೇಶಗಳ ಆಟಗಾರರೂ ಇಲ್ಲಿ ಆಡಲು ತುದಿಗಾಲಲ್ಲಿ ನಿಂತಿರುತ್ತಾರೆ. ಕ್ರಿಕೆಟ್‌ನಲ್ಲಿ ಈಗಷ್ಟೇ ಕಣ್ಣು ಬಿಡುತ್ತಿರುವ ದೇಶಗಳ ಆಟಗಾರರು ಇಲ್ಲಿನ ತಂಡಗಳಿಗೆ ಆಯ್ಕೆಯಾಗಿ ವಿಶ್ವಕ್ಕೆ ಪರಿಚಯಗೊಂಡಿದ್ದಾರೆ. ಇಲ್ಲಿ ಆಡಿ ಮಿಂಚಿದರೆ ಏಕಾಏಕಿ ವಿಶ್ವದಲ್ಲೇ ಜನಪ್ರಿಯರಾಗುತ್ತಾರೆ. ಆಟಗಾರರಿಗೂ ವಿಪರೀತ ಹಣ ಸಿಗುತ್ತದೆ. ಮಿಂಚಿದ ಆಟಗಾರನ ಭವಿಷ್ಯವೇ ಬದಲಾಗುತ್ತದೆ. ಸ್ವದೇಶಿ ಮತ್ತು ವಿದೇಶಿ ಮಹಾನ್‌ ಪ್ರತಿಭೆಗಳ ಆಟ ಪ್ರೇಕ್ಷಕರನ್ನು ಸೆಳೆಯಲು ಯಶಸ್ವಿಯಾಗಿದೆ. ಇದು ಉತ್ಪನ್ನ ಮೌಲ್ಯವನ್ನೂ ಏರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next