Advertisement
ಲಕ್ನೋ ನೀಡಿದ್ದ 162 ರನ್ಗಳ ಸಾಧಾರಣ ಗುರಿ ಬೆನ್ನತ್ತಿದ್ದ ಕೋಲ್ಕತ, ಆರಂಭಿಕ ಬ್ಯಾಟರ್ ಸುನೀಲ್ ನಾರಾಯಣ್ ವಿಕೆಟನ್ನು ಬೇಗನೆ ಕಳೆದುಕೊಂಡಿತು. ಆದರೆ ಮತ್ತೂಬ್ಬ ಓಪನರ್ ಸಾಲ್ಟ್ , ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. 47 ಎಸೆತಗಳಲ್ಲಿ ಬರೋಬ್ಬರಿ 14 ಬೌಂಡರಿ, 3 ಸಿಕ್ಸರ್ ಸಹಿತ ಅಜೇಯ 89 ರನ್ ಸಿಡಿಸಿದ ಸಾಲ್ಟ್, ತಂಡವನ್ನು ಗೆಲುವಿನ ದಡ ಸೇರಿಸಿದರು. ಇದರ ಜತೆಗೆ ಅಯ್ಯರ್ (38) ಜವಾಬ್ದಾರಿಯುತ ಅಜೇಯ ಆಟ ಗೆಲುವಿನ ನೆಲೆಯಲ್ಲಿ ನೆರವಾಯಿತು. ಸಾಲ್ಟ್-ಅಯ್ಯರ್ 120 ರನ್ಗಳ ಜತೆಯಾಟ ತಂಡವನ್ನು ಮೇಲೆತ್ತಿತು. ಹೀಗಾಗಿ ಕೇವಲ 15.4 ಓವರ್ನಲ್ಲೇ ಗುರಿ ತಲುಪಿದ ಕೆಕೆಆರ್, ಗೆಲುವಿನ ಕೇಕೆ ಹಾಕಿತು.
ಲಕ್ನೋ ಪರ ಕಣಕ್ಕಿಳಿದ ವೆಸ್ಟ್ ಇಂಡೀಸ್ನ ಯುವ ವೇಗಿ ಶಮಾರ್ ಜೋಸೆಫ್, ಕೆಟ್ಟ ದಾಖಲೆಯೊಂದಕ್ಕೆ ಕಾರಣರಾಗಿದ್ದಾರೆ. ಕೋಲ್ಕತ ಇನ್ನಿಂಗ್ಸ್ನ ಮೊದಲ ಒಂದೇ ಓವರ್ನಲ್ಲೇ ಶಮಾರ್, 2 ನೋ ಬಾಲ್, 2 ವೈಡ್ ಸಹಿತ ಒಟ್ಟ 10 ಎಸೆಗಳನ್ನು ಎಸೆದು 22 ರನ್ ನೀಡಿದರು. ಇದು ಐಪಿಎಲ್ನಲ್ಲಿ ಬೌಲರ್ ಒಬ್ಬ ಎಸೆದ ದೀರ್ಘ ಓವರ್ ಆಗಿದೆ.
Related Articles
Advertisement
ಸ್ಕೋರ್ಪಟ್ಟಿ
ಲಕ್ನೋ ಸೂಪರ್ ಜೈಂಟ್ಸ್ಕ್ವಿಂಟನ್ ಡಿ ಕಾಕ್ ಸಿ ನಾರಾಯಣ್ ಬಿ ಅರೋರ 10
ಕೆ.ಎಲ್. ರಾಹುಲ್ ಸಿ ರಮಣ್ದೀಪ್ ಬಿ ರಸೆಲ್ 39
ದೀಪಕ್ ಹೂಡಾ ಸಿ ರಮಣ್ದೀಪ್ ಬಿ ಸ್ಟಾರ್ಕ್ 8
ಆಯುಷ್ ಬದೋನಿ ಸಿ ರಘುವಂಶಿ ಬಿ ನಾರಾಯಣ್ 29
ಮಾರ್ಕಸ್ ಸ್ಟೋಯಿನಿಸ್ ಸಿ ಸಾಲ್ಟ್ ಬಿ ಚಕ್ರವರ್ತಿ 10
ನಿಕೋಲಸ್ ಪೂರಣ್ ಸಿ ಸಾಲ್ಟ್ ಬಿ ಸ್ಟಾರ್ಕ್ 45
ಕೃಣಾಲ್ ಪಾಂಡ್ಯ ಔಟಾಗದೆ 7
ಅರ್ಷದ್ ಖಾನ್ ಬಿ ಸ್ಟಾರ್ಕ್ 5
ಇತರ 8
ಒಟ್ಟು (20 ಓವರ್ಗಳಲ್ಲಿ 7 ವಿಕೆಟಿಗೆ) 161 ವಿಕೆಟ್ ಪತನ: 1-19, 2-39. 3-78, 4-95, 5-111, 6-155, 7-161.
ಬೌಲಿಂಗ್:
ಮಿಚೆಲ್ ಸ್ಟಾರ್ಕ್ 4-0-28-3
ವೈಭವ್ ಅರೋರ 3-0-34-1
ಹರ್ಷಿತ್ ರಾಣಾ 4-0-35-0
ಸುನೀಲ್ ನಾರಾಯಣ್ 4-0-17-1
ವರುಣ್ ಚಕ್ರವರ್ತಿ 4-0-30-1
ಆ್ಯಂಡ್ರೆ ರಸೆಲ್ 1-0-16-1 ಕೋಲ್ಕತಾ ನೈಟ್ರೈಡರ್
ಫಿಲಿಪ್ ಸಾಲ್ಟ್ ಔಟಾಗದೆ 89
ಸುನೀಲ್ ನಾರಾಯಣ್ ಸಿ ಸ್ಟೋಯಿನಿಸ್ ಬಿ ಮೊಹಿªನ್ 6
ಎ. ರಘುವಂಶಿ ಸಿ ರಾಹುಲ್ ಬಿ ಮೊಹ್ಸಿನ್ 7
ಶ್ರೇಯಸ್ ಅಯ್ಯರ್ ಔಟಾಗದೆ 38
ಇತರ 22
ಒಟ್ಟು (15.4 ಓವರ್ಗಳಲ್ಲಿ 2 ವಿಕೆಟಿಗೆ) 162 ವಿಕೆಟ್ ಪತನ: 1-22, 2-42.
ಬೌಲಿಂಗ್:
ಶಮರ್ ಜೋಸೆಫ್ 4-0-47-0
ಮೊಹ್ಸಿನ್ ಖಾನ್ 4-0-29-2
ಕೃಣಾಲ್ ಪಾಂಡ್ಯ 1-0-14-0
ಯಶ್ ಠಾಕೂರ್ 2-0-25-0
ಅರ್ಷದ್ ಖಾನ್ 2-0-24-0
ರವಿ ಬಿಷ್ಣೋಯಿ 2.4-0-17-0
ಪಂದ್ಯಶ್ರೇಷ್ಠ: ಫಿಲಿಪ್ ಸಾಲ್ಟ್