Advertisement
ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ 9 ವಿಕೆಟಿಗೆ 114 ರನ್ ಗಳಿಸಿದರೆ, ರೋಹಿತ್ ಶರ್ಮ ಗೈರಲ್ಲಿ ಕಣಕ್ಕಿಳಿದ ಮುಂಬೈ ವಿಕೆಟ್ ನಷ್ಟವಿಲ್ಲದೆ 116 ರನ್ ಬಾರಿಸಿ ಮತ್ತೆ ಅಗ್ರಸ್ಥಾನಕ್ಕೆ ನೆಗೆಯಿತು.
ಮೊದಲೆರಡು ಓವರ್‌ಗಳಲ್ಲೇ ಬೌಲ್ಟ್ ಮತ್ತು ಬುಮ್ರಾ ಸೇರಿಕೊಂಡು “ಚೆನ್ನೈ ಎಕ್ಸ್‌ಪ್ರೆಸ್’ನ ಹಳಿ ತಪ್ಪಿಸಿದರು. ಬೌಲ್ಟ್ 5ನೇ ಎಸೆತದಲ್ಲಿ ಋತುರಾಜ್ ಗಾಯಕ್ವಾಡ್ (0) ಅವರನ್ನು ಲೆಗ್ ಬಿಫೋರ್ ಬಲೆಗೆ ಬೀಳಿಸಿದರು. ಅದು ಬೌಲ್ಟ್ ಅವರ ವಿಕೆಟ್-ಮೇಡನ್ ಓವರ್ ಆಗಿತ್ತು.
Related Articles
Advertisement
ಬೌಲ್ಟ್ ತಮ್ಮ ದ್ವಿತೀಯ ಓವರ್‌ನಲ್ಲಿ ದೊಡ್ಡ ಬೇಟೆಯಾಡಿದರು. ಡು ಪ್ಲೆಸಿಸ್ (1) ಅವರನ್ನು ಕೀಪರ್ ಡಿ ಕಾಕ್ ಕೈಗೆ ಕ್ಯಾಚ್ ಕೊಡಿಸಿದರು. 3 ರನ್ನಿಗೆ 4 ವಿಕೆಟ್ ಕಳೆದುಕೊಂಡ ಧೋನಿ ಬಳಗದ ಸ್ಥಿತಿ ಚಿಂತಾಜನಕವಾಗಿತ್ತು. ಐಪಿಎಲ್‌ನಲ್ಲಿ ತಂಡವೊಂದು ಮೊದಲ 4 ವಿಕೆಟ್‌ಗಳನ್ನು ಅತ್ಯಂತ ಕಡಿಮೆ ಮೊತ್ತಕ್ಕೆ ಕಳೆದುಕೊಂಡ ದ್ವಿತೀಯ ನಿದರ್ಶನ ಇದಾಗಿದೆ. 2011ರ ಡೆಕ್ಕನ್ ಎದುರಿನ ಪಂದ್ಯದಲ್ಲಿ ಕೊಚ್ಚಿ 2 ರನ್ನಿಗೆ 4 ವಿಕೆಟ್ ಉದುರಿಸಿಕೊಂಡದ್ದು ದಾಖಲೆ.
ಈ ತೀವ್ರ ಕುಸಿತದಿಂದಾಗಿ ಧೋನಿ 2ನೇ ಓವರಿನಲ್ಲೇ ಕ್ರೀಸ್ ಇಳಿಯಬೇಕಾದ ಅನಿವಾರ್ಯತೆಗೆ ಸಿಲುಕಿದರು. ಅವರು ಐಪಿಎಲ್‌ನಲ್ಲಿ ಇಷ್ಟು ಬೇಗ ಬ್ಯಾಟ್ ಹಿಡಿದು ಬಂದದ್ದು ಇದೇ ಮೊದಲು!
ಬೌಲ್ಟ್ ತೃತೀಯ ಓವರ್‌ನಲ್ಲೂ ಬೇಟೆ ನಿಲ್ಲಿಸಲಿಲ್ಲ. ಇಲ್ಲಿ ರವೀಂದ್ರ ಜಡೇಜ (7) ಕಿವೀಸ್ ವೇಗಿಯ ಬಲೆಗೆ ಬಿದ್ದರು. ಚೆನ್ನೈ ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿಗೆ ಪವರ್ ಪ್ಲೇ ಅವಧಿಯಲ್ಲಿ 5 ವಿಕೆಟ್ ಉರುಳಿಸಿಕೊಂಡಿತು. ಹಾಗೆಯೇ ಬೌಲ್ಟ್ ಈ ಋತುವಿನ ಪವರ್ ಪ್ಲೇಯಲ್ಲಿ ಅತ್ಯಧಿಕ 10 ವಿಕೆಟ್ ಹಾರಿಸಿದ ಸಾಧನೆಗೈದರು.
ತಂಡವನ್ನು ಈ ಸಂಕಟದಿಂದ ಮೇಲೆತ್ತಲು ನಾಯಕ ಧೋನಿ ಅವರಿಂದಲೂ ಸಾಧ್ಯವಾಗಲಿಲ್ಲ. ರಾಹುಲ್ ಚಹರ್ ಎಸೆತವನ್ನು ಸಿಕ್ಸರ್‌ಗೆ ಬಡಿದಟ್ಟಿದ ಬೆನ್ನಲ್ಲೇ ಡಿ ಕಾಕ್‌ಗೆ ಕ್ಯಾಚ್ ನೀಡಿ ವಾಪಸಾದರು. ಧೋನಿ ಗಳಿಕೆ 16 ರನ್.
ಚೆನ್ನೈ 7 ವಿಕೆಟ್ 42 ರನ್ನಿಗೆ ಉರುಳಿ ಹೋಯಿತು. ಐಪಿಎಲ್‌ನಲ್ಲಿ ಅತ್ಯಂತ ಕಡಿಮೆ ರನ್ನಿಗೆ 7 ವಿಕೆಟ್ ಬಿದ್ದ 2ನೇ ದೃಷ್ಟಾಂತ ಇದಾಗಿದೆ. 2017ರ ಕೆಕೆಆರ್ ಎದುರಿನ ಪಂದ್ಯದಲ್ಲಿ ಆರ್‌ಸಿಬಿ 42 ರನ್ನಿಗೆ 7 ವಿಕೆಟ್ ಕಳೆದುಕೊಂಡದ್ದು ದಾಖಲೆ.
ಸ್ಯಾಮ್ ಕರನ್ ಅವರ ಹೋರಾಟದಿಂದ ಚೆನ್ನೈ ಮೊದಲ ಸಲ ನೂರರೊಳಗೆ ಕುಸಿಯುವ ಅವಮಾನದಿಂದ ಪಾರಾಯಿತು. ಕರನ್ ಏಕಾಂಗಿಯಾಗಿ ಹೋರಾಡಿ 47 ಎಸೆತಗಳಿಂದ 52 ರನ್ ಬಾರಿಸಿದರು (4 ಬೌಂಡರಿ, 2 ಸಿಕ್ಸರ್). ಇನ್ನಿಂಗ್ಸಿನ ಕೊನೆಯ ಎಸೆತದಲ್ಲಿ ಬೌಲ್ಡ್ ಆಗಿ ಬೌಲ್ಟ್ಗೆ 4ನೇ ವಿಕೆಟ್ ಒಪ್ಪಿಸಿದರು.
ಸ್ಕೋರ್ ಪಟ್ಟಿ
ಚೆನ್ನೈ ಸೂಪರ್ ಕಿಂಗ್ಸ್ಋತುರಾಜ್ ಗಾಯಕ್ವಾಡ್ ಎಲ್‌ಬಿಡಬ್ಲ್ಯು ಬಿ ಬೌಲ್ಟ್ 0
ಫಾ ಡು ಪ್ಲೆಸಿಸ್ ಸಿ ಡಿ ಕಾಕ್ ಬಿ ಬೌಲ್ಟ್ 1
ಅಂಬಾಟಿ ರಾಯುಡು ಸಿ ಡಿ ಕಾಕ್ ಬಿ ಬುಮ್ರಾ 2
ಜಗದೀಶನ್ ಸಿ ಸೂರ್ಯಕುಮಾರ್ ಬಿ ಬುಮ್ರಾ 0
ಎಂ.ಎಸ್.ಧೋನಿ ಸಿ ಡಿ ಕಾಕ್ ಬಿ ಆರ್. ಚಹರ್ 16
ರವೀಂದ್ರ ಜಡೇಜ ಸಿ ಕೃಣಾಲ್ ಬಿ ಬೌಲ್ಟ್ 7
ಸ್ಯಾಮ್ ಕರನ್ ಬಿ ಬೌಲ್ಟ್ 52
ದೀಪಕ್ ಚಹರ್ ಸ್ಟಂಪ್ಡ್ ಡಿ ಕಾಕ್ ಬಿ ಆರ್. ಚಹರ್ 0
ಶಾರ್ದುಲ್ ಸಿ ಸೂರ್ಯಕುಮಾರ್ ಬಿ ಕೋಲ್ಟರ್ ನೈಲ್ 11
ಇರ್ಮಾನ್ ತಾಹಿರ್ ಔಟಗದೆ 13 ಇತರ 12
ಒಟ್ಟು (20 ಓವರ್‌ಗಳಲ್ಲಿ 9 ವಿಕೆಟಿಗೆ) 114
ವಿಕೆಟ್ ಪತನ: 1-0, 2-3-, 3-3, 4-3, 5-21, 6-30, 7-43, 8-71, 9-114. ಬೌಲಿಂಗ್:
ಟ್ರೆಂಟ್ ಬೌಲ್ಟ್ 4-1-18-4
ಜಸ್‌ಪ್ರೀತ್ ಬುಮ್ರಾ 4-0-25-2
ಕೃಣಾಲ್ ಪಾಂಡ್ಯ 3-0-16-0
ರಾಹುಲ್ ಚಹರ್ 4 -0-22-2
ನಥನ್ ಕೋಲ್ಟರ್ ನೈಲ್ 4-0-25-1
ಕೈರನ್ ಪೊಲಾರ್ಡ್ 1-0-4-0 ಮುಂಬೈ ಇಂಡಿಯನ್ಸ್
ಕ್ವಿಂಟನ್ ಡಿ ಕಾಕ್ ಔಟಾಗದೆ 46
ಇಶಾನ್ ಕಿಶನ್ ಔಟಾಗದೆ 68 ಇತರ 2
ಒಟ್ಟು(12.2 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ) 116
ವಿಕೆಟ್ ಪತನ: ಬೌಲಿಂಗ್:
ದೀಪಕ್ ಚಹರ್ 4-0-34-0
ಜೋಶ್ ಹ್ಯಾಝೆಲ್‌ವುಡ್ 2-0-17-0
ಇಮ್ರಾನ್ ತಾಹಿರ್ 3-0-22-0
ಶಾರ್ದೂಲ್ ಠಾಕೂರ್ 2.2-0-26-0
ರವೀಂದ್ರ ಜಡೇಜ 1-0-15-0