Advertisement
ಮುಂಬೈ ಕೂಡ 4 ಪಂದ್ಯಗಳಲ್ಲಿ ಮೂರನ್ನು ಗೆದ್ದಿದೆ. ಈ 3 ಜಯಕ್ಕಾಗಿ ಒಟ್ಟು 8 ಪಂದ್ಯಗಳನ್ನಾಡಿದ್ದು, 8ನೇ ಸ್ಥಾನದಲ್ಲಿದೆ. ಪ್ಲೇ ಆಫ್ ರೇಸ್‌ನಲ್ಲಿ ಕಾಣಿಸಿಕೊಳ್ಳಬೇಕಾದರೆ ಮುಂಬೈಗೂ ಗೆಲುವು ಅಗತ್ಯ.
ನಾಯಕ ರಿಷಭ್ ಪಂತ್ ಅವರ ಬ್ಯಾಟಿಂಗ್ ಫಾರ್ಮ್ ಡೆಲ್ಲಿ ಪಾಲಿಗೊಂದು ಪ್ಲಸ್ ಪಾಯಿಂಟ್. ಅವರು ಪಂದ್ಯದಿಂದ ಪಂದ್ಯಕ್ಕೆ ನೂತನ ಎತ್ತರ ತಲುಪುತ್ತಲೇ ಇದ್ದಾರೆ. ಇದಕ್ಕೆ ಕೋಟ್ಲಾದಲ್ಲೇ ಆಡಲಾದ ಗುಜರಾತ್ ಎದುರಿನ ಕಳೆದ ಪಂದ್ಯವೇ ಅತ್ಯುತ್ತಮ ನಿದರ್ಶನ. ಡೆಲ್ಲಿ 4ಕ್ಕೆ 224 ರನ್ ಪೇರಿಸಿತ್ತು. ಇದರಲ್ಲಿ ಪಂತ್ ಪಾಲು 43 ಎಸೆತಗಳಲ್ಲಿ ಅಜೇಯ 88 ರನ್ (5 ಫೋರ್, 3 ಸಿಕ್ಸರ್). ಭಡ್ತಿ ಪಡೆದು ಬಂದ ಅಕ್ಷರ್ ಪಟೇಲ್, ಟ್ರಿಸ್ಟನ್ ಸ್ಟಬ್ಸ್ ಕೂಡ ಚೇತೋಹಾರಿ ಆಟವಾಡಿದ್ದರು. ಸಮಸ್ಯೆ ಇರುವುದು ಓಪನಿಂಗ್‌ನಲ್ಲಿ. ಡೇವಿಡ್ ವಾರ್ನರ್ ಬದಲು ಆರಂಭಿಕನಾಗಿ ಇಳಿಯುತ್ತಿರುವ ಜಾಕ್ ಫ್ರೆàಸರ್ ಮೆಕ್‌ಗರ್ಕ್ ಸಿಡಿಯು ತ್ತಿದ್ದರೂ ಪೃಥ್ವಿ ಶಾ ಪರದಾಡುತ್ತಿದ್ದಾರೆ. ಶೈ ಹೋಪ್ ಕೂಡ ಭರವಸೆ ಮೂಡಿ ಸಿಲ್ಲ. ಹೋಪ್ ಬದಲು ವಾರ್ನರ್ ಮರಳುವ ಸಾಧ್ಯತೆ ಇದೆ.
ಕುಲದೀಪ್ ಯಾದವ್-ಅಕ್ಷರ್ ಪಟೇಲ್ ಜೋಡಿಯ ಸ್ಪಿನ್ ಹೊರತು ಪಡಿಸಿದರೆ, ಡೆಲ್ಲಿ ಬೌಲಿಂಗ್ ಅಷ್ಟೇನೂ ಘಾತಕವಲ್ಲ. ನೋರ್ಜೆ ಅವರಂತೂ ಧಾರಾಳಿ ಆಗುತ್ತಿದ್ದಾರೆ. ಮೊನ್ನೆ ಗುಜರಾತ್ 8ಕ್ಕೆ 220 ರನ್ ಬಾರಿಸಿ ಭೀತಿ ಹುಟ್ಟಿಸಿತ್ತು. ಡೆಲ್ಲಿ ಗೆಲುವಿನ ಅಂತರ 4 ರನ್ ಮಾತ್ರ.
Related Articles
ಮುಂಬೈ ಬ್ಯಾಟಿಂಗ್ ಸರದಿ 50-50 ಫಾರ್ಮ್ನಲ್ಲಿದೆ. ರೋಹಿತ್, ಸೂರ್ಯ, ತಿಲಕ್ ವರ್ಮ ಓಕೆ. ಆದರೆ ಸ್ಥಿರತೆ ಇಲ್ಲ. ಹಾಗೆಯೇ ಟಿಮ್ ಡೇವಿಡ್, ಇಶಾನ್ ಕಿಶನ್, ನಾಯಕ ಹಾರ್ದಿಕ್ ಪಾಂಡ್ಯ ಅವರ ಕೊಡುಗೆ ಏನೂ ಸಾಲದು.
Advertisement
ಮುಂಬೈ ಬೌಲಿಂಗ್ ವಿಭಾಗ ನಿಜಕ್ಕೂ ದುರ್ಬಲ. 13 ವಿಕೆಟ್ ಉರುಳಿಸಿರುವ ಬುಮ್ರಾ ಮಾತ್ರ ಭರವಸೆ ಮೂಡಿಸಿದ್ದಾರೆ. ದಕ್ಷಿಣ ಆಫ್ರಿಕಾದ ವೇಗಿ ಗೆರಾಲ್ಡ್ ಕೋಟ್ಜಿ, ತುಷಾರ, ನಬಿ ಪ್ರಯತ್ನ ಏನೂ ಸಾಲದು. ಕಳೆದ ಪಂದ್ಯದಲ್ಲಿ ರಾಜಸ್ಥಾನ್ ಒಂದೇ ವಿಕೆಟಿಗೆ 183 ರನ್ ಬಾರಿಸಿ ಗೆದ್ದದ್ದು ಮುಂಬಯಿ ಬೌಲಿಂಗ್ ದೌರ್ಬಲ್ಯದ ಕತೆಯನ್ನು ಹೇಳುತ್ತದೆ!
ಮೊದಲ ಸುತ್ತಿನಲ್ಲಿ…ಎ. 7ರಂದು “ವಾಂಖೇಡೆ’ ಯಲ್ಲಿ ನಡೆದ ಪಂದ್ಯ ದೊಡ್ಡ ಮೊತ್ತದ ಮೇಲಾಟವಾಗಿತ್ತು. ಮುಂಬೈ 5ಕ್ಕೆ 234 ರನ್ ಪೇರಿಸಿ ದರೆ, ಬೆನ್ನಟ್ಟಿ ಬಂದ ಡೆಲ್ಲಿ 8ಕ್ಕೆ 205 ರನ್ ಗಳಿಸಿತ್ತು. ಮುಂಬೈ ಯಾವುದೇ ಅರ್ಧ ಶತಕದಕ ನೆರವೂ ಇಲ್ಲದೆ ಇನ್ನೂರರ ಗಡಿ ದಾಟಿದ್ದರೆ, ಡೆಲ್ಲಿ ಪರ ಟ್ರಿಸ್ಟನ್ ಸ್ಟಬ್ಸ್ (71) ಮತ್ತು ಪೃಥ್ವಿ ಶಾ (66) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಮಿಚೆಲ್ ಮಾರ್ಷ್ ಬದಲು ಗುಲ್ಬದಿನ್ ನೈಬ್
ಗಾಯಾಳು ಮಿಚೆಲ್ ಮಾರ್ಷ್ ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಬೇರ್ಪಟ್ಟಿದ್ದು, ಇವರ ಸ್ಥಾನಕ್ಕೆ ಅಫ್ಘಾನಿಸ್ಥಾನದ ಆಲ್‌ರೌಂಡರ್ ಗುಲ್ಬದಿನ್ ನೈಬ್ ಅವರನ್ನು ಸೇರಿಸಿಕೊಳ್ಳಲಾಗಿದೆ. ಮೀಡಿಯಂ ಪೇಸ್ ಬೌಲಿಂಗ್ ಆಲ್‌ರೌಂಡರ್ ಆಗಿರುವ ಗುಲ್ಬದಿನ್ ನೈಬ್ ಅಫ್ಘಾನ್ ಪರ 82 ಏಕದಿನ ಹಾಗೂ 62 ಟಿ20 ಪಂದ್ಯಗಳನ್ನಾಡಿದ್ದಾರೆ. 50 ಲಕ್ಷ ರೂ. ಮೂಲ ಬೆಲೆಗೆ ಇವರನ್ನು ಡೆಲ್ಲಿ ಫ್ರಾಂಚೈಸಿ ಖರೀದಿಸಿತು. ಈ ವರ್ಷಾರಂಭದ ಭಾರತ ಪ್ರವಾಸದ ಟಿ20 ಸರಣಿ ವೇಳೆ ಗುಲ್ಬದಿನ್ ನೈಬ್ ಇಂದೋರ್ ಮತ್ತು ಬೆಂಗಳೂರು ಪಂದ್ಯಗಳಲ್ಲಿ ಅರ್ಧ ಶತಕ ಸಿಡಿಸಿ ಗಮನ ಸೆಳೆದಿದ್ದರು. ಮಿಚೆಲ್ ಮಾರ್ಷ್ ಸ್ನಾಯು ಸೆಳೆತಕ್ಕೆ ಸಿಲುಕಿದ್ದು, ಡೆಲ್ಲಿ ಪರ ಮೊದಲ 4 ಪಂದ್ಯಗಳನ್ನಾಡಿದ್ದರು. ಆದರೆ ಪ್ರಭಾವಶಾಲಿ ಪ್ರದರ್ಶವನ್ನೇನೂ ನೀಡಿರಲಿಲ್ಲ.