Advertisement
ಮಹಾರಾಷ್ಟ್ರದಲ್ಲಿ ಭಾರೀ ಬರಗಾಲದ ಸಾಧ್ಯತೆ ಗೋಚರಿಸಿದ್ದು, 600ಕ್ಕೂ ಹೆಚ್ಚು ಗ್ರಾಮಗಳಿಗೆ ನೀರು ಪೂರೈಸುವುದೇ ಅಲ್ಲಿನ ಸರಕಾರಕ್ಕೆ ದೊಡ್ಡ ಸವಾಲಾಗಲಿದೆ. ಮಹಾರಾಷ್ಟ್ರ ಮಾತ್ರವಲ್ಲ, ನೆರೆಯ ಆಂಧ್ರಪ್ರದೇಶದಲ್ಲೂ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ. ಹೀಗಾಗಿ ಈ ಎರಡೂ ರಾಜ್ಯಗಳಲ್ಲಿ ಐಪಿಎಲ್ ಆಯೋಜಿಸುವುದಕ್ಕೆ ಅನುಮತಿ ಸಿಗುವುದು ಕಷ್ಟ ಎನ್ನಲಾಗಿದೆ. ಹೀಗಾದರೆ ಬಿಸಿಸಿಐ ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡಬೇಕಾಗುತ್ತದೆ.
ಬಿಸಿಸಿಐ ಐಪಿಎಲ್ ವೇಳಾಪಟ್ಟಿಯನ್ನು ತಯಾರಿಸಿದರೂ ಇದರ ಬಿಡುಗಡೆಗೆ ಸೂಕ್ತ ಸಮಯಕ್ಕಾಗಿ ಕಾಯುತ್ತಿದೆ.