Advertisement
ಈ ಪಂದ್ಯದಲ್ಲಿ ತನ್ನ ಅಭಿಯಾನವನ್ನು ಮರಳಿ ಟ್ರ್ಯಾಕ್‌ಗೆ ತರಬೇಕಾದರೆ ತಂಡವು ಬ್ಯಾಟಿಂಗ್‌ನಲ್ಲಿ ಮಿಂಚಲೇಬೇಕಾದ ಅಗತ್ಯವಿದೆ.
ರಾಜಸ್ಥಾನ್ ತಂಡವು ಒಂದು ಹಂತದಲ್ಲಿ ಅಂಕಪಟ್ಟಿಯ ಅಗ್ರಸ್ಥಾನ ಕ್ಕಾಗಿ ಗುಜರಾತ್ ಟೈಟಾನ್ಸ್‌ಗೆ ತೀವ್ರ ಪೈಪೋಟಿ ನೀಡಿತ್ತು. ಆದರೆ ಮಾಜಿ ಚಾಂಪಿಯನ್ ಆಗಿರುವ ರಾಜಸ್ಥಾನ್ ಇದೀಗ ಚಿಕ್ಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಸತತ ಎರಡು ಸೋಲಿನ ಬಳಿಕ ತಂಡವು ಪಂಜಾಬ್ ಸವಾಲಿಗೆ ಸಿದ್ಧವಾಗಿದೆ. ಈ ಹಿಂದಿನ ಪಂದ್ಯಗಳಲ್ಲಿ ತಂಡವು ಕೆಕೆಆರ್ ಮತ್ತು ಮುಂಬೈ ವಿರುದ್ಧ ಸೋತಿತ್ತು.
Related Articles
Advertisement
ಮಾಯಾಂಕ್ ಅಗರ್ವಾಲ್ ನೇತೃತ್ವದ ಪಂಜಾಬ್ ತಂಡ ಗೆಲುವಿನ ಉತ್ಸಾಹವನ್ನು ರಾಜಸ್ಥಾನ್ ವಿರುದ್ಧವೂ ಮುಂದು ವರಿಸಲು ಬಯಸಿದೆ.
ರಾಜಸ್ಥಾನ್ ಇದೀಗ ಅಂಕ ಪಟ್ಟಿ ಯಲ್ಲಿ ಮೂರನೇ ಸ್ಥಾನದಲ್ಲಿದೆ. ಜಾಸ್ ಬಟ್ಲರ್ ಅವರ ಸಾಹಸದಿಂದ ತಂಡ ಈ ಸಾಧನೆ ಮಾಡುವಂತಾಗಿದೆ. ಇಂಗ್ಲೆಂಡಿನ ಬಟ್ಲರ್ (588 ರನ್) ಈ ಐಪಿಎಲ್‌ನ ಗರಿಷ್ಠ ರನ್ ಗಳಿಸಿದ ಸಾಧಕರಾಗಿದ್ದಾರೆ. ಮುಂಬೈ ವಿರುದ್ದ ಅವರೊಬ್ಬರೇ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಆದರೆ ಕೆಕೆಆರ್ ವಿರುದ್ಧ ಉತ್ತಮವಾಗಿ ಆಡಲು ವಿಫಲರಾಗಿದ್ದರು. ಈ ಎರಡು ಪಂದ್ಯಗಳಲ್ಲಿ ರಾಜಸ್ಥಾನ್ ಸೋತಿತ್ತು.
ಅಗ್ರ ಕ್ರಮಾಂಕದಲ್ಲಿ ತಂಡದ ಇನ್ನುಳಿದ ಆಟಗಾರರಾದ ನಾಯಕ ಸಂಜು ಸ್ಯಾಮ್ಸನ್ ಮತ್ತು ದೇವದತ್ತ ಪಡಿಕ್ಕಲ್ ಇನ್ನಷ್ಟು ಹೆಚ್ಚಿನ ಜವಾಬ್ದಾರಿ ವಹಿಸಿ ಆಡಬೇಕಾದ ಅಗತ್ಯವಿದೆ. ಅವ ರಿಬ್ಬರ ಜತೆ ಹಿಟ್ಟರ್ ಶಿಮ್ರನ್ ಹೆಟ್‌ಮೈರ್ ಸಿಡಿದರೆ ತಂಡವು ಉತ್ತಮ ನಿರ್ವಹಣೆ ನೀಡಲು ಸಾಧ್ಯ.
ಪಂಜಾಬ್ ತಂಡದ ಬೌಲಿಂಗ್ ಬಲಷ್ಠವಾಗಿದೆ. ಕಾಗಿಸೊ ರಬಾಡ ಬೌಲಿಂಗ್ ದಾಳಿಯ ನೇತೃತ್ವ ವಹಿಸಿದ್ದಾರೆ. ಕಳೆದ ಎರಡು ಪಂದ್ಯ ಗಳಲ್ಲಿ ಅವರು ನಾಲ್ಕು ವಿಕೆಟ್ ಸಾಧನೆ ಮಾಡಿದ್ದಾರೆ. ಈ ಋತುವಿನಲ್ಲಿ ಅರ್ಷದೀಪ್ ಸಿಂಗ್ ಕೂಡ ಅಮೋಘ ದಾಳಿ ಸಂಯೋಜಿಸಿದ್ದಾರೆ. 23ರ ಹರೆಯದ ಅವರು ಹೆಚ್ಚಿನ ವಿಕೆಟ್ ಪಡೆಯದಿದ್ದರೂ ನಿಯಂತ್ರಿತ ದಾಳಿಯಿಂದ ಎದುರಾಳಿಗೆ ರನ್‌ವೇಗಕ್ಕೆ ಕಡಿವಾಣ ಹಾಕಿದ್ದಾರೆ.