Advertisement

IPL; ಲಕ್ನೋ ಸೂಪರ್‌ ಜೈಂಟ್ಸ್‌-ಡೆಲ್ಲಿ ಕ್ಯಾಪಿಟಲ್ಸ್‌ : ಕೊನೆಯ ಹಂತದ ಅದೃಷ್ಟ ಪರೀಕ್ಷೆ

11:58 PM May 13, 2024 | Team Udayavani |

ಹೊಸದಿಲ್ಲಿ: ಕೊನೆಯ ಹಂತದಲ್ಲಿ ತೀವ್ರ ಪರದಾಟ ನಡೆಸುತ್ತಿರುವ ಲಕ್ನೋ ಮತ್ತು ಡೆಲ್ಲಿ ತಂಡಗಳು ಮಂಗಳವಾರ “ಕೋಟ್ಲಾ’ದಲ್ಲಿ ಮಸ್ಟ್‌ ವಿನ್‌ ಗೇಮ್‌ ಒಂದಕ್ಕೆ ಅಣಿಯಾಗಿವೆ.

Advertisement

ಮುಖ್ಯವಾಗಿ ಈ ಪಂದ್ಯ ಕೆ.ಎಲ್‌. ರಾಹುಲ್‌ ಅವರ ನಾಯಕತ್ವಕ್ಕೆ ಮತ್ತೂಂದು ಸುತ್ತಿನ ಅಗ್ನಿ ಪರೀಕ್ಷೆಯೂ ಹೌದು. ಟಿ20 ವಿಶ್ವಕಪ್‌ ತಂಡ ದಿಂದ ಬೇರ್ಪಟ್ಟ ಆಘಾತದ ನಡುವೆಯೇ ಹೈದರಾ ಬಾದ್‌ ವಿರುದ್ಧ ಅನುಭವಿಸಿದ 10 ವಿಕೆಟ್‌ ಸೋಲು ರಾಹುಲ್‌ ಪಾಲಿಗೆ ದೊಡ್ಡ ಗಂಡಾಂತರ ತಂದಿದೆ. ಮಾಲಕರು ಬಹಿರಂಗವಾಗಿ ತರಾಟೆಗೆ ತೆಗೆದು ಕೊಂಡಿ  ದ್ದಾರೆ ಎನ್ನಲಾದ ಘಟನೆ ರಾಹುಲ್‌ ಅವರನ್ನು ಬಹಳಷ್ಟು ಕುಗ್ಗಿಸಿದೆ. ಅವರು ನಾಯ ಕತ್ವ ದಿಂದ ಕೆಳಗಿಳಿಯಲಿದ್ದಾರೆ, ಲಕ್ನೋ ತಂಡದಲ್ಲಿ ಮುಂದು ವರಿ ಯುವು ದಿಲ್ಲ ಎಂಬ ಸುದ್ದಿಗಳೂ ಹರಿದಾಡಿದ್ದವು.

ಇದನ್ನೆಲ್ಲ ಮೀರಿ ನಿಂತು ಮತ್ತೆ ಲಕ್ನೋವನ್ನು ಗೆಲುವಿನ ಹಳಿಗೆ ಏರಿಸುವ ಮಹತ್ತರ ಜವಾಬ್ದಾರಿ ರಾಹುಲ್‌ ಮುಂದಿದೆ. ಡೆಲ್ಲಿ ಬಳಿಕ ಮುಂಬೈಯನ್ನು ಎದುರಿಸಲಿರುವ ಲಕ್ನೋ, ಇವೆರಡನ್ನೂ ಗೆದ್ದರೆ 4ನೇ ಸ್ಥಾನಿಯಾಗಿ ಪ್ಲೇ ಆಫ್ ಪ್ರವೇಶಿಸುವ ಸಾಧ್ಯತೆ ಇದೆ. ಲಕ್ನೋ ಸದ್ಯ 12 ಪಂದ್ಯಗಳಿಂದ 12 ಅಂಕ ಗಳಿಸಿದ್ದು, 7ನೇ ಸ್ಥಾನದಲ್ಲಿದೆ. ಆದರೆ ರನ್‌ರೇಟ್‌ ಮೈನಸ್‌ನಲ್ಲಿದೆ.

ಕ್ವಿಂಟನ್‌ ಡಿ ಕಾಕ್‌ ಕಳಪೆ ಫಾರ್ಮ್ ಎನ್ನುವುದು ಲಕ್ನೋದ ಪವರ್‌ ಪ್ಲೇ ಆಟಕ್ಕೆ ಭಾರೀ ಹಿನ್ನಡೆಯಾಗಿದೆ. ವೇಗಿ ಮಾಯಾಂಕ್‌ ಯಾದವ್‌ ಬೇರ್ಪಟ್ಟದ್ದು ದೊಡ್ಡ ನಷ್ಟ. ತಂಡದ ಬೌಲಿಂಗ್‌ ಲಯ ತಪ್ಪಿದ್ದಕ್ಕೆ ಹೈದರಾಬಾದ್‌ ಎದುರಿನ ಪಂದ್ಯವೇ ಸಾಕ್ಷಿ. ಹೆಡ್‌-ಅಭಿಷೇಕ್‌ ಶರ್ಮ ಸೇರಿಕೊಂಡು ಕೇವಲ 9.4 ಓವರ್‌ಗಳಲ್ಲಿ 167 ರನ್‌ ಬಾರಿಸಿ ಬೆಚ್ಚಿಬೀಳಿಸಿದ್ದರು!

ಸೋತರೆ ಡೆಲ್ಲಿ ಔಟ್‌
ಒಂದು ದಿನದ ಹಿಂದಷ್ಟೇ ಆರ್‌ಸಿಬಿ ಕೈಯಲ್ಲಿ 47 ರನ್ನುಗಳಿಂದ ಆಘಾತ ಅನುಭವಿಸಿದ ಡೆಲ್ಲಿ ಯನ್ನು ಮರಳಿ ರಿಷಭ್‌ ಪಂತ್‌ ಮುನ್ನಡೆಸ ಲಿದ್ದಾರೆ. ತವರಿನ ಕೋಟ್ಲಾದಲ್ಲಿ ಮತ್ತೆ ಅದೃಷ್ಟ ಕೈ ಹಿಡಿದೀತೆಂಬ ವಿಶ್ವಾಸ ಡೆಲ್ಲಿ ತಂಡದ್ದು. ಇಲ್ಲಿ ಆಡಲಾದ ಕಳೆದ ಪಂದ್ಯದಲ್ಲಿ ಪಂತ್‌ ಪಡೆ ರಾಜಸ್ಥಾನವನ್ನು 20 ರನ್ನುಗಳಿಂದ ಕೆಡವಿತ್ತು.
ಇದು ಡೆಲ್ಲಿಯ ಕೊನೆಯ ಲೀಗ್‌ ಪಂದ್ಯ. 13 ಮುಖಾಮುಖೀಗಳಿಂದ 12 ಅಂಕ ಗಳಿಸಿದೆ. ರನ್‌ರೇಟ್‌ ಮೈನಸ್‌ನಲ್ಲಿರುವುದು ಹಿನ್ನಡೆಗೆ ಕಾರಣ ವಾಗಲಿದೆ. ಸೋತರೆ ಡೆಲ್ಲಿಯ ಆಟ ಮುಗಿಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next