Advertisement

ಇಂಗ್ಲೀಷ್ ಪ್ರೀಮಿಯರ್ ಲೀಗ್ ಗಿಂತ ಹೆಚ್ಚಿನ ಆದಾಯ ಐಪಿಎಲ್ ಗಳಿಸುತ್ತದೆ: ಗಂಗೂಲಿ

12:44 PM Jun 12, 2022 | Team Udayavani |

ಮುಂಬೈ: ಇಂಗ್ಲೀಷ್ ಪ್ರೀಮಿಯರ್ ಲೀಗ್ ಗಿಂತ ಹೆಚ್ಚಿನ ಆದಾಯವನ್ನು ಭಾರತದ ಟಿ20 ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್ ಗಳಿಸುತ್ತದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದರು.

Advertisement

ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಆಡುತ್ತಿದ್ದ ಆಟ ಈಗ ತುಂಬ ಬೆಳೆದಿದೆ. ಈ ಆಟವನ್ನು ಅಭಿಮಾನಿಗಳು, ದೇಶದ ಜನತೆ ಮತ್ತು ಬಿಸಿಸಿಐ ನಡೆಸುತ್ತದೆ. ಈ ಕ್ರೀಡೆಯು ಪ್ರಬಲವಾಗಿದೆ ಮತ್ತು ಮತ್ತಷ್ಟು ಬೆಳೆಯುತ್ತಿದೆ. ನಾನು ಇಷ್ಟಪಡುವ ಕ್ರೀಡೆಯು ತುಂಬಾ ಪ್ರಬಲವಾಗುತ್ತಿರುವುದು ನನಗೆ ಸಂತೋಷ ಮತ್ತು ಹೆಮ್ಮೆಯನ್ನು ನೀಡುತ್ತದೆ ಎಂದರು.

2022ರ ಐಪಿಎಲ್ ಕೂಟವು ಹಿಂದಿಗಿಂತಲೂ ದೊಡ್ಡದಾಗಿ ರೂಪಿಸಲಾಗಿತ್ತು. ಗುಜರಾತ್ ಟೈಟಾನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಈ ಬಾರಿ ಎರಡು ಹೊಸ ತಂಡಗಳಾಗಿ ಸೇರ್ಪಡೆಯಾಗಿದ್ದವು. ರಾಜಸ್ಥಾನ ರಾಯಲ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವೆ ನಡೆದ ಫೈನಲ್ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ವಿಜಯಿಯಾಗಿತ್ತು.

ನಾಯಕತ್ವದ ಕುರಿತಾಗಿ ಮಾತನಾಡಿದ ಗಂಗೂಲಿ, ನಾನು ಭಾರತ ತಂಡದ ನಾಯಕನಾಗಿದ್ದಾಗ ಸಚಿನ್, ಅಜರ್, ದ್ರಾವಿಡ್ ರಂತವರು ತಂಡದಲ್ಲಿದ್ದರು. ನಾನು ಅವರೊಂದಿಗೆ ಸ್ಪರ್ಧಿಸಲಿಲ್ಲ; ಬದಲಾಗಿ, ನಾನು ಅವರೊಂದಿಗೆ ನಾಯಕರಾಗಿ ಸಹಕರಿಸಿದೆ ಮತ್ತು ಜವಾಬ್ದಾರಿಯನ್ನು ಹಂಚಿಕೊಂಡಿದ್ದೇನೆ ಎಂದರು.

ಇದನ್ನೂ ಓದಿ:ದಾಸುನ್ ಶನಕ ಬೊಂಬಾಟ್ ಬ್ಯಾಟಿಂಗ್ ಗೆ ಬೆಚ್ಚಿದ ಆಸೀಸ್; ಜಯ ಕಸಿದ ಲಂಕಾ ನಾಯಕ

Advertisement

ಸೌರವ್ ಗಂಗೂಲಿ 113 ಟೆಸ್ಟ್ ಮತ್ತು 311 ಏಕದಿನ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಅವರು 2003 ರ ವಿಶ್ವಕಪ್ ಫೈನಲ್‌ ಗೆ ಭಾರತವನ್ನು ಮುನ್ನಡೆಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next