Advertisement

ಹಿನ್ನೋಟ: ಐಪಿಎಲ್‌ ಫ‌ಸ್ಟ್‌ ಮ್ಯಾಚ್‌ – 2016ರ ನೆನಪು

09:19 AM May 04, 2022 | Team Udayavani |

ಸ್ಪಾಟ್‌ ಫಿಕ್ಸಿಂಗ್‌ ವಿವಾದ ಭುಗಿಲೆದ್ದ ಬಳಿಕ ಆರಂಭಗೊಂಡ 2016ನೇ ಸಾಲಿನ ಐಪಿಎಲ್‌ ಪಂದ್ಯಾವಳಿಯಿಂದ ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ರಾಜಸ್ಥಾನ್‌ ರಾಯಲ್ಸ್‌ ತಂಡಗಳನ್ನು ನಿಷೇಧಿಸಲಾಗಿತ್ತು. ಆದರೆ ಬದಲಿ ತಂಡಗಳಾಗಿ ರೈಸಿಂಗ್‌ ಪುಣೆ ಸೂಪರ್‌ಜೈಂಟ್ಸ್‌ ಮತ್ತು ಗುಜರಾತ್‌ ಲಯನ್ಸ್‌ ಕಣಕ್ಕಿಳಿದವು. ಆದರೆ ಈ ತಂಡಗಳಲ್ಲಿ ಯಾವುದೇ ಹೊಸತನ ಇರಲಿಲ್ಲ. ಚೆನ್ನೈ ಮತ್ತು ರಾಜಸ್ಥಾನ್‌ ತಂಡಗಳ ತದ್ರೂಪಿಯಂತಿದ್ದವು. ಒಂದಕ್ಕೆ ಮಹೇಂದ್ರ ಸಿಂಗ್‌ ಧೋನಿ, ಇನ್ನೊಂದಕ್ಕೆ ಅವರ ದೋಸ್ತ್ ಸುರೇಶ್‌ ರೈನಾ ನಾಯಕರಾಗಿದ್ದರು.

Advertisement

ಮುಂಬಯಿಯ “ವಾಂಖೇಡೆ ಸ್ಟೇಡಿಯಂ’ನಲ್ಲಿ ನಡೆದ ಉದ್ಘಾಟನಾ ಪಂದ್ಯ “ಮರಾಠಾ ಕದನ’ವೆಂದೇ ಬಿಂಬಿಸಲ್ಪಟ್ಟಿತು. ಏಕೆಂದರೆ ಇಲ್ಲಿ ಎದುರಾದ ತಂಡಗಳೆರಡೂ ಮಹಾರಾಷ್ಟ್ರದ್ದಾಗಿದ್ದವು. ಒಂದು, ಮುಂಬೈ ಇಂಡಿಯನ್ಸ್‌. ಇನ್ನೊಂದು, ನೂತನ ತಂಡವಾದ ರೈಸಿಂಗ್‌ ಪುಣೆ ಸೂಪರ್‌ಜೈಂಟ್ಸ್‌.

ಪುಣೆ ಅಸಾಮಾನ್ಯ ಪ್ರದರ್ಶನ
ಇಲ್ಲಿ ನೆಚ್ಚಿನ ತಂಡವಾಗಿದ್ದದ್ದು ಮುಂಬೈ ಇಂಡಿಯನ್ಸ್‌. ಆದರೆ ಪುಣೆ ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ವಿಭಾಗಗಳೆಡರಲ್ಲೂ ಅಸಾಮಾನ್ಯ ಪ್ರದರ್ಶನ ನೀಡಿತು. ಮುಂಬೈಯನ್ನು 9 ವಿಕೆಟ್‌ಗಳಿಂದ ಭರ್ಜರಿಯಾಗಿ ಮಣಿಸಿತು.

ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ ನೂತನ ತಂಡದೆದುರು ತೀರಾ ಕಳಪೆ ಆಟವಾಡಿತು. ಗಳಿಸಲು ಸಾಧ್ಯವಾದದ್ದು 8 ವಿಕೆಟಿಗೆ 121 ರನ್‌ ಮಾತ್ರ. ಜವಾಬಿತ್ತ ಪುಣೆ ಕೇವಲ 14.4 ಓವರ್‌ಗಳಲ್ಲಿ ಒಂದೇ ವಿಕೆಟಿಗೆ 126 ರನ್‌ ಬಾರಿಸಿ ಶುಭಾರಂಭ ಮಾಡಿತು. ಇಶಾಂತ್‌ ಶರ್ಮ ಮತ್ತು ಮಿಚೆಲ್‌ ಮೆಕ್ಲೆನಗನ್‌ ಮುಂಬೈ ಅಗ್ರ ಸರದಿಯ ಮೇಲೆ ಘಾತಕವಾಗಿ ಎರಗಿದರು. 5 ಓವರ್‌ ಆಗುವಷ್ಟರಲ್ಲಿ 30 ರನ್ನಿಗೆ 4 ವಿಕೆಟ್‌ ಉದುರಿತು. ಈ ಕುಸಿತವನ್ನು ತಡೆಯಲು ಯಾರಿಂದಲೂ ಸಾಧ್ಯವಾಗಲಿಲ್ಲ. 96 ರನ್ನಿಗೆ 8 ವಿಕೆಟ್‌ ಹಾರಿ ಹೋಯಿತು. ಕೊನೆಯಲ್ಲಿ ಹರ್ಭಜನ್‌ ಸಿಂಗ್‌ ಅಜೇಯ 45 ರನ್‌ ಮಾಡಿದ್ದರಿಂದ ತಂಡದ ಮೊತ್ತ ನೂರರ ಗಡಿ ದಾಟಿತು. ಅಷ್ಟರ ಮಟ್ಟಿಗೆ ಮುಂಬೈ ಮರ್ಯಾದೆ ಉಳಿಯಿತು.

ಮುಂಬೈ ತಂಡದ ಅಗ್ರ ಕ್ರಮಾಂಕದ ನಾಲ್ವರಾದ ಸಿಮನ್ಸ್‌, ರೋಹಿತ್‌, ಹಾರ್ದಿಕ್‌ ಪಾಂಡ್ಯ ಮತ್ತು ಜಾಸ್‌ ಬಟ್ಲರ್‌ ಸೇರಿ ಗಳಿಸಿದ್ದು ಬರೀ 24 ರನ್‌. ಇವರಲ್ಲಿ ಬಟ್ಲರ್‌ ಅವರದು ಶೂನ್ಯ ಸಂಪಾದನೆ. ಬಳಿಕ ಪೊಲಾರ್ಡ್‌ ಕೇವಲ ಒಂದು ರನ್ನಿಗೆ ಔಟಾದರು. ಹರ್ಭಜನ್‌ ಹೊರತುಪಡಿಸಿ ಎರಡಂಕೆಯ ಮೊತ್ತ ಗಳಿಸಿದವರೆಂದರೆ ಅಂಬಾಟಿ ರಾಯುಡು (22) ಮತ್ತು ವಿನಯ್‌ ಕುಮಾರ್‌ (12) ಮಾತ್ರ. ಚೇಸಿಂಗ್‌ ವೇಳೆ ಪುಣೆ ಯಾವ ಒತ್ತಡಕ್ಕೂ ಸಿಲುಕಲಿಲ್ಲ. ಅಜಿಂಕ್ಯ ರಹಾನೆ ಮತ್ತು ಫಾ ಡು ಪ್ಲೆಸಿಸ್‌ ಸೇರಿಕೊಂಡು ಮೊದಲ ವಿಕೆಟಿಗೆ 9.4 ಓವರ್‌ಗಳಿಂದ 78 ರನ್‌ ಪೇರಿಸಿ ಭದ್ರ ಬುನಾದಿ ಹಾಕಿದರು. ರಹಾನೆ ಅಜೇಯ 66 ರನ್‌ ಮಾಡಿದರೆ, ಡು ಪ್ಲೆಸಿಸ್‌ 34 ರನ್‌ ಬಾರಿಸಿದರು. ರಹಾನೆ ಅವರೊಂದಿಗೆ ಕೆವಿನ್‌ ಪೀಟರ್‌ಸನ್‌ ಅಜೇಯರಾಗಿ ಉಳಿದರು (21). ಉರುಳಿದ ಏಕೈಕ ವಿಕೆಟ್‌ ಹರ್ಭಜನ್‌ ಸಿಂಗ್‌ ಪಾಲಾಯಿತು.

Advertisement

ಸ್ಕೋರ್‌ ಪಟ್ಟಿ
ಮುಂಬೈ ಇಂಡಿಯನ್ಸ್‌
ಲೆಂಡ್ಲ್ ಸಿಮನ್ಸ್‌ ಬಿ ಇಶಾಂತ್‌ 8
ರೋಹಿತ್‌ ಶರ್ಮ ಎಲ್‌ಬಿಡಬ್ಲ್ಯು ಇಶಾಂತ್‌ 7
ಹಾರ್ದಿಕ್‌ ಪಾಂಡ್ಯ ಸಿ ಧೋನಿ ಬಿ ಮಾರ್ಷ್‌ 9
ಜಾಸ್‌ ಬಟ್ಲರ್‌ ಸಿ ಅಶ್ವಿ‌ನ್‌ ಬಿ ಮಾರ್ಷ್‌ 0
ಅಂಬಾಟಿ ರಾಯುಡು ಸಿ ಡು ಪ್ಲೆಸಿಸ್‌ ಬಿ ಅಶ್ವಿ‌ನ್‌ 22
ಕೈರನ್‌ ಪೊಲಾರ್ಡ್‌ ಎಲ್‌ಬಿಡಬ್ಲ್ಯು ಭಾಟಿಯ 1
ಶ್ರೇಯಸ್‌ ಗೋಪಾಲ್‌ ಸಿ ರಹಾನೆ ಬಿ ಎಂ. ಅಶ್ವಿ‌ನ್‌ 2
ಹಭ್‌ìಜನ್‌ ಸಿಂಗ್‌ ಔಟಾಗದೆ 45
ವಿನಯ್‌ ಕುಮಾರ್‌ ಸಿ ಸ್ಮಿತ್‌ ಬಿ ಆರ್‌.ಪಿ. ಸಿಂಗ್‌ 12
ಮಿಚೆಲ್‌ ಮೆಕ್ಲೆನಗನ್‌ ಔಟಾಗದೆ 2
ಇತರ 13
ಒಟ್ಟು (8 ವಿಕೆಟಿಗೆ) 121
ವಿಕೆಟ್‌ ಪತನ: 1-8, 2-29, 3-29, 4-30, 5-40, 6-51, 7-68, 8-96.
ಬೌಲಿಂಗ್‌:ಆರ್‌.ಪಿ. ಸಿಂಗ್‌ 3-0-30-1
ಇಶಾಂತ್‌ ಶರ್ಮ 4-0-36-2
ಮಿಚೆಲ್‌ ಮಾರ್ಷ್‌ 4-0-21-2
ರಜತ್‌ ಭಾಟಿಯ 4-1-10-1
ಮುರುಗನ್‌ ಅಶ್ವಿ‌ನ್‌ 4-0-16-1
ಆರ್‌. ಅಶ್ವಿ‌ನ್‌ 1-0-7-1

ರೈಸಿಂಗ್‌ ಪುಣೆ ಸೂಪರ್‌ಜೈಂಟ್ಸ್‌
ಅಜಿಂಕ್ಯ ರಹಾನೆ ಔಟಾಗದೆ 66
ಫಾ ಡು ಪ್ಲೆಸಿಸ್‌ ಬಿ ಹರ್ಭಜನ್‌ 34
ಕೆವಿನ್‌ ಪೀಟರ್‌ಸನ್‌ ಔಟಾಗದೆ 21
ಇತರ 5
ಒಟ್ಟು (14.4 ಓವರ್‌ಗಳಲ್ಲಿ ಒಂದು ವಿಕೆಟಿಗೆ) 126
ವಿಕೆಟ್‌ ಪತನ: 1-78.
ಬೌಲಿಂಗ್‌: ಮಿಚೆಲ್‌ ಮೆಕ್ಲೆನಗನ್‌ 3-0-27-0
ಜಸ್‌ಪ್ರೀತ್‌ ಬುಮ್ರಾ 3-0-30-0
ವಿನಯ್‌ ಕುಮಾರ್‌ 2-0-14-0
ಶ್ರೇಯಸ್‌ ಗೋಪಾಲ್‌ 3-0-18-0
ಹರ್ಭಜನ್‌ ಸಿಂಗ್‌ 3-0-24-1
ಹಾರ್ದಿಕ್‌ ಪಾಂಡ್ಯ 0.4-0-12-0
ಪಂದ್ಯಶ್ರೇಷ್ಠ: ಅಜಿಂಕ್ಯ ರಹಾನೆ

Advertisement

Udayavani is now on Telegram. Click here to join our channel and stay updated with the latest news.

Next