Advertisement

IPL; ಮೇ 26ಕ್ಕೆ ಫೈನಲ್‌: ಗಂಭೀರ್‌ ಸುಳಿವು?

11:35 PM Mar 16, 2024 | Team Udayavani |

ಕೋಲ್ಕತಾ: ಮಾರ್ಚ್‌ 22ರಿಂದ ಎಪ್ರಿಲ್‌ 7ರ ವರೆಗಿನ ಆರಂಭಿಕ 21 ಐಪಿಎಲ್‌ ಪಂದ್ಯಗಳ ವೇಳಾಪಟ್ಟಿ ಯನ್ನು ಮಾತ್ರ ಸದ್ಯ ಬಿಸಿಸಿಐ ಪ್ರಕಟಿಸಿದೆ. ಚುನಾವಣೆ ಸಂಬಂಧ, ಐಪಿಎಲ್‌ ಎರಡನೇ ಹಂತದ ಪಂದ್ಯಗಳ ವೇಳಾಪಟ್ಟಿ ಇನ್ನೂ ಪ್ರಕಟಗೊಂಡಿಲ್ಲ. ಆದರೆ ಮೇ 26ರಂದು ಐಪಿಎಲ್‌ ಫೈನಲ್‌ ನಡೆಯಲಿದೆಯೇ ಎಂಬ ಚರ್ಚೆ ಕ್ರಿಕೆಟ್‌ ವಲಯದಲ್ಲಿ ಈಗಾಗಲೇ ಆರಂಭವಾಗಿದೆ. ಗೌತಮ್‌ ಗಂಭೀರ್‌ ಮಾತನಾಡಿರುವ ಒಂದು ವೀಡಿಯೋ ಇಂಥದ್ದೊಂದು ಚರ್ಚೆಗೆ ಕಾರಣವಾಗಿದೆ.

Advertisement

ಎರಡು ವರ್ಷ ಲಕ್ನೋ ಸೂಪರ್‌ ಜೈಂಟ್ಸ್‌ ತಂಡಕ್ಕೆ ಮಾರ್ಗದರ್ಶಕರಾಗಿದ್ದ ಗೌತಮ್‌ ಗಂಭೀರ್‌, ಈ ಬಾರಿ ಕೋಲ್ಕತಾ ನೈಟ್‌ ರೈಡರ್ಸ್‌ (ಕೆಕೆಆರ್‌)ಗೆ ಮೆಂಟರ್‌ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಐಪಿಎಲ್‌ ಹೊಸ ಆವೃತ್ತಿಗಾಗಿ ಕೆಕೆಆರ್‌ ಅಭ್ಯಾಸ ಆರಂಭಿ ಸುವುದಕ್ಕೂ ಮುನ್ನ ಗಂಭೀರ್‌, ತಂಡವನ್ನು ದ್ದೇಶಿಸಿ ಸ್ಫೂರ್ತಿಯ ಮಾತು ಗಳನ್ನಾಡಿದ್ದಾರೆ.

ಕೆಕೆಆರ್‌ ಹಂಚಿಕೊಂಡಿರುವ ವೀಡಿಯೋದಲ್ಲಿ ಮಾತನಾಡಿರುವ ಗಂಭೀರ್‌, ಮೇ 26ರ ಪಂದ್ಯದಲ್ಲಿ ನಾವಿರಬೇಕು. ಅದಕ್ಕಾಗಿ ಏನು ಬೇಕೋ ಅದೆಲ್ಲವನ್ನೂ ನಾವು ಮಾಡಬೇಕು ಎಂದಿದ್ದಾರೆ. ಇದರ ಬೆನ್ನಲ್ಲೇ, ಮೇ 26ರಂದು ಐಪಿಎಲ್‌ ಫೈನಲ್‌ ನಡೆಯಲಿದೆಯೇ ಎಂಬ ಅನುಮಾನ ಆರಂಭವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next