Advertisement

ಐಪಿಎಲ್‌ ಕ್ರಿಕೆಟ್ ಬೆಟ್ಟಿಂಗ್‌: ಮೂವರ ಸೆರೆ, 6.28 ಲಕ್ಷ ರೂ. ವಶ

03:33 PM Oct 10, 2020 | sudhir |

ಹುಬ್ಬಳ್ಳಿ: ಐಪಿಎಲ್‌ ಕ್ರಿಕೆಟ್‌ ಪಂದ್ಯಾವಳಿ ವೇಳೆ ಹಳೇಹುಬ್ಬಳ್ಳಿ ಕಾರವಾರ ರಸ್ತೆಯ ಕೆಂಪಗೇರಿಯಲ್ಲಿ ಬೆಟ್ಟಿಂಗ್‌ ಆಡುತ್ತಿದ್ದ ಮೂವರನ್ನು ಹಳೇಹುಬ್ಬಳ್ಳಿ ಪೊಲೀಸರು ಬುಧವಾರ ರಾತ್ರಿ ಬಂಧಿಸಿ, 6,28,500 ನಗದು, ಏಳು ಮೊಬೈಲ್‌ ವಶಪಡಿಸಿಕೊಂಡಿದ್ದಾರೆ.

Advertisement

ಕೇಶ್ವಾಪುರ ಕುಸುಗಲ್ಲ ರಸ್ತೆ ಬಾದಾಮಿನಗರ ಬಳಿಯ ಮಧುರ ಚೇತನಾ ಕಾಲೋನಿಯ ಧರ್ಮೇಂದ್ರ ಚೌಧರಿ, ಸುಳ್ಳ ರಸ್ತೆ ಮನೋಜ ಪಾರ್ಕ್‌ನ ಸದಾನಂದ ಬದ್ದಿ ಹಾಗೂ ಜೆ.ಸಿ.ನಗರದ ಪಾರಸಮಲ್‌ ರಾಠೊಡ ಬಂಧಿತರಾಗಿದ್ದಾರೆ.

ಮೊಬೈಲ್‌ ಮೂಲಕ ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ಕೋಲ್ಕತ್ತಾ ನೈಟ್‌ ರೈಡರ್ ತಂಡಗಳ ನಡುವೆ ಪಂದ್ಯದ ವೇಳೆ ಕೆಂಪಗೇರಿ ಗಣೇಶ ಗುಡಿ ಬಳಿಯ ಖುಲ್ಲಾ ಜಾಗದಲ್ಲಿ ಬೆಟ್ಟಿಂಗ್‌ ಆಡುತ್ತಿದ್ದಾಗ, ಖಚಿತ ಮಾಹಿತಿ ಮೇರೆಗೆ ಹಳೇಹುಬ್ಬಳ್ಳಿ ಠಾಣೆ ಇನ್ಸ್‌ ಪೆಕ್ಟರ್‌ ಸತೀಶ ಮಾಳಗೊಂಡ ಮತ್ತು ಸಿಬ್ಬಂದಿ ದಾಳಿ ಮಾಡಿ ಮೂವರನ್ನು ಬಂಧಿಸಿ ನಗದು, ಮೊಬೈಲ್‌ ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ:ರಾಕೇಶ್ ರೋಷನ್ ಮೇಲೆ ಶೂಟೌಟ್ ಪ್ರಕರಣ: ಪರಾರಿಯಾಗಿದ್ದ ಶಾರ್ಪ್ ಶೂಟರ್ ಬಂಧನ

ಬೆಟ್ಟಿಂಗ್‌-ಮೂವರ ಬಂಧನ: ದೆಹಲಿ ಕ್ಯಾಪಿಟಲ್ಸ್‌ ಮತ್ತು ರಾಜಸ್ತಾನ ರಾಯಲ್ಸ್‌ ನಡುವಿನ ಕ್ರಿಕೆಟ್‌ ಪಂದ್ಯದ ವೇಳೆ ಕೊಪ್ಪಿಕರ
ರಸ್ತೆಯಲ್ಲಿ ಶುಕ್ರವಾರ ಮೊಬೈಲ್‌ನಲ್ಲಿ ಬೆಟ್ಟಿಂಗ್‌ ಆಡುತ್ತಿದ್ದ ಮೂವರನ್ನು ಶಹರ ಠಾಣೆ ಪೊಲೀಸರು ಬಂಧಿಸಿ, 25,150 ನಗದು, ನಾಲ್ಕು ಮೊಬೈಲ್‌ ವಶಪಡಿಸಿಕೊಂಡಿದ್ದಾರೆ.

Advertisement

ಕಮರಿಪೇಟೆಯ ಗಣೇಶ ಹನುಮಸಾಗರ, ನವೀನ ಜಿತೂರಿ, ದತ್ತಾತ್ರೇಯ ಜಾಧವ ಬಂಧಿತರಾಗಿದ್ದಾರೆ. ಖಚಿತ ಮಾಹಿತಿ ಮೇರೆಗೆ
ಶಹರ ಠಾಣೆ ಇನ್ಸ್‌ಪೆಕ್ಟರ್‌ ಎಂ.ಎಸ್‌. ಪಾಟೀಲ ಮತ್ತು ಸಿಬ್ಬಂದಿ ದಾಳಿ ಮಾಡಿ ಮೂವರನ್ನು ಬಂಧಿಸಿ, ನಗದು ಹಾಗೂ ಮೊಬೈಲ್‌
ವಶಪಡಿಸಿಕೊಂಡಿದ್ದಾರೆ. ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಮಹದಾಯಿ- ಕೃಷ್ಣಾ ನೀರು ಹಂಚಿಕೆ ವಿವಾದ: ಕೇಂದ್ರ ಸಚಿವರೊಂದಿಗೆ ರಮೇಶ್ ಜಾರಕಿಹೊಳಿ ಚರ್ಚೆ

ಬೈಕ್‌ ಸುಟ್ಟು ಹಲ್ಲೆ ಮಾಡಿದ್ದ 9 ಜನರ ಬಂಧನ: ಗೋಕುಲ ರಸ್ತೆ ಆರ್‌.ಎಂ. ಲೋಹಿಯಾ ನಗರ ಬಳಿಯ ಗಿರಿನಗರದಲ್ಲಿ ಕುಟುಂಬದ ಸದಸ್ಯರು ಆಕ್ಷೇಪಿಸಿದ್ದಕ್ಕೆ ಅವರ ಬೈಕ್‌ ಸುಟ್ಟು, ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಹಳೇಹುಬ್ಬಳ್ಳಿ
ಪೊಲೀಸರು ಒಂಭತ್ತು ಜನರನ್ನು ಶುಕ್ರವಾರ ಬಂಧಿಸಿದ್ದಾರೆ.

ಹಳೇಹುಬ್ಬಳ್ಳಿ ಆನಂದನಗರದ ರಾಕೇಶ ಮೇದಾರ, ಶಿವರಾಜ ಮಿಶ್ರಿಕೋಟಿ, ರೋಹನ ಬೀಳಗಿ, ಯಲ್ಲಪ್ಪ ಕೋಟಿ, ಅಂಬೇಡ್ಕರ್‌
ಕಾಲೋನಿಯ ರಮೇಶ ಅಂಬಿಗೇರ, ಪ್ರಕಾಶ ಮೋರೆ, ವಿನಾಯಕ ಕುಪ್ಪಸಗೌಡ್ರ, ಮಂಜುನಾಥ ಬ್ಯಾಹಟ್ಟಿ, ವಿವೇಕಾನಂದ ಗಾರ್ಡನ್‌ದ ಅಕ್ಷಯ ಕಲಘಟಗಿ ಬಂಧಿತರಾಗಿದ್ದಾರೆ.

ಬಂಧಿತರು ಸೆ.13ರಂದು ಗಿರಿನಗರದ ದೇಸಾಯಿ ಎಂಬುವರ ನಿರ್ಮಾಣ ಹಂತದ ಮನೆಗೆ ರಾತ್ರಿ ವೇಳೆ ನುಗ್ಗಿ ಪಾರ್ಟಿ ಮಾಡುತ್ತಿದ್ದಾಗ ಕುಟುಂಬದ ಸದಸ್ಯರು ಬಂದು ಪ್ರಶ್ನಿಸಿದ್ದರು. ಆಗ ಕುಪಿತರಾದ ಇವರು ವಿನಯ ದೇಸಾಯಿ ಮತ್ತು
ಅವರ ಸಹೋದರಿ ಅರ್ಚನಾ ದೇಸಾಯಿ ಮೇಲೆ ಕಟ್ಟಿಗೆ, ಕಲ್ಲಿನಿಂದ ಹಲ್ಲೆ ಮಾಡಿ ಗಾಯಗೊಳಿಸಿದ್ದರು. ಅಲ್ಲದೆ ಮನೆಯ ಬಳಿಯಿದ್ದ ಬೈಕ್‌ ಸುಟ್ಟುಹಾಕಿ, ಅವಾಚ್ಯವಾಗಿ ನಿಂದಿಸಿ, ಬೆದರಿಕೆ ಹಾಕಿದ್ದರು. ಈ ಕುರಿತು ಹಳೇಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ
ದಾಖಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next