ಹೊಸದಿಲ್ಲಿ: ಮುಂಬರುವ ಐಪಿಎಲ್ ಋತುಗಳಲ್ಲಿ ಪಂದ್ಯಗಳ ಸಂಖ್ಯೆಯನ್ನು ಹೆಚ್ಚಿಸಲು ಬಿಸಿಸಿಐ ಯೋಜನೆಯೊಂದನ್ನು ರೂಪಿಸಿದೆ. ಐಪಿಎಲ್ ನೇರ ಪ್ರಸಾರದ ಮಾಧ್ಯಮ ಹಕ್ಕುಗಳ ಹರಾಜು ನಡೆಯಲಿದ್ದು, ಬಿಡ್‌ದಾರರನ್ನು ಆಕರ್ಷಿಸಲು ಪಂದ್ಯಗಳ ಸಂಖ್ಯೆಯನ್ನು ಹೆಚ್ಚಿಸುವುದು ಬಿಸಿಸಿಐ ಯೋಜನೆಯಾಗಿದೆ.
ಇದು 2023-27ರ ನಡುವಿನ ಯೋಜನೆ. ಆಗ ಪಂದ್ಯಗಳ ಸಂಖ್ಯೆ 74ರಿಂದ 84, ಬಳಿಕ 94ರ ತನಕ ಏರುವ ಸಾಧ್ಯತೆ ಇದೆ. ಈ ಬಾರಿ 2 ಹೊಸ ತಂಡಗಳ ಸೇರ್ಪಡೆಯಿಂದಾಗಿ ಪಂದ್ಯಗಳ ಸಂಖ್ಯೆ 74ಕ್ಕೆ ಏರಿತ್ತು. ಮುಂದಿನೆರಡು ಋತುಗಳಲ್ಲಿ ಇದೇ ಮಾದರಿ ಮುಂದುವರಿಯಲಿದೆ. ಆದರೆ 2025 ಹಾಗೂ 2026ರಲ್ಲಿ 84 ಪಂದ್ಯ, 2027ರಲ್ಲಿ 94 ಪಂದ್ಯ ಗಳನ್ನು ಆಡಿಸುವುದು ಬಿಸಿಸಿಐ ಯೋಜನೆ.
ಈ ಬಾರಿ ಎರಡು ಗ್ರೂಪ್‌ಗ್ಳ ಮಾದರಿ ಯಲ್ಲಿ ಪಂದ್ಯಾವಳಿ ನಡೆದಿತ್ತು (5 ಪ್ಲಸ್ 5). ಆಯಾ ಗ್ರೂಪ್‌ನ ತಂಡಗಳ ವಿರುದ್ಧ ತಲಾ 2 ಪಂದ್ಯ, ಇನ್ನೊಂದು ಗ್ರೂಪ್‌ನ 4 ತಂಡಗಳ ವಿರುದ್ಧ ತಲಾ ಒಂದು ಪಂದ್ಯ ಹಾಗೂ ಒಂದು ತಂಡದ ವಿರುದ್ಧ 2 ಪಂದ್ಯಗಳನ್ನು ಆಡಿಸಲಾಗಿತ್ತು. ಅಲ್ಲಿಗೆ ತಂಡವೊಂದು ಲೀಗ್ ಹಂತದಲ್ಲಿ 14 ಪಂದ್ಯಗಳನ್ನಾಡಿತ್ತು.
ಮುಂದಿನೆರಡು ವರ್ಷ ಇದೇ ಮಾದರಿ ಇರಲಿದೆ. 2025ರಲ್ಲೂ ಇದೇ ಮಾದರಿ, ಆದರೆ ಸಣ್ಣದೊಂದು ಬದಲಾವಣೆ ಮಾಡಲಾಗುವುದು. ಮತ್ತೂಂದು ಗ್ರೂಪ್‌ನ 3 ತಂಡಗಳ ವಿರುದ್ಧ ತಲಾ ಒಂದು ಪಂದ್ಯ, 2 ತಂಡಗಳ ವಿರುದ್ಧ ತಲಾ 2 ಪಂದ್ಯ ಆಡಬೇಕಾಗುತ್ತದೆ. ಆಗ ಲೀಗ್ ಹಂತದಲ್ಲಿ ಪ್ರತಿಯೊಂದು ತಂಡಕ್ಕೆ 15 ಪಂದ್ಯ ಲಭಿಸುತ್ತದೆ. ಕೂಟದ ಒಟ್ಟು ಪಂದ್ಯಗಳ ಸಂಖ್ಯೆ 74ರಿಂದ 84ಕ್ಕೆ ಏರಲಿದೆ. ಪ್ಲೇ ಆಫ್ ಮಾದರಿಯಲ್ಲಿ ಯಾವುದೇ ಬದಲಾವಣೆ ಇಲ್ಲ.
2027ರಲ್ಲಿ 90 ಲೀಗ್ ಪಂದ್ಯ :
2027ರಲ್ಲಿ ಎರಡು ಗ್ರೂಪ್‌ಗಳ ಮಾದರಿ ಇರುವುದಿಲ್ಲ. ಬದಲಾಗಿ ರೌಂಡ್ ರಾಬಿನ್ ಲೀಗ್ ಇರುತ್ತದೆ. ಇಲ್ಲಿ ಪ್ರತಿಯೊಂದು ತಂಡ ಉಳಿದ 9 ತಂಡಗಳೊಂದಿಗೆ ತಲಾ 2 ಪಂದ್ಯಗಳನ್ನು ಆಡಬೇಕು. ಆಗ ಲೀಗ್ ಪಂದ್ಯಗಳ ಸಂಖ್ಯೆ 90ಕ್ಕೆ ಏರುತ್ತದೆ. ಇಲ್ಲಿಯೂ ಪ್ಲೇ ಆಫ್ ಮಾದರಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ಈ ರೀತಿ ಹಂತ ಹಂತವಾಗಿ ಮುಂದಿನೈದು ವರ್ಷಗಳ ಪಂದ್ಯಗಳ ಸಂಖ್ಯೆ 370ರ ಬದಲು 410ಕ್ಕೆ ಏರಲಿದೆ. ನೇರ ಪ್ರಸಾರದ ಹಕ್ಕುದಾರರು ಇದರಿಂದ ಹೆಚ್ಚಿನ ಲಾಭ ಪಡೆಯಬಹುದು.