ಮಂಗಳೂರು: ಬೆಂಗಳೂರಿನಲ್ಲಿ ಗುರುವಾರ ಐಪಿಎಲ್ ಪಂದ್ಯಾಟ ನಡೆಯಲಿದೆ ಎಂದು ಟ್ವೀಟರ್ ಮೂಲಕ ಪ್ರಚಾರ ನಡೆಸಿದ್ದ ಆರ್‌ಸಿಬಿಯ ಟ್ವೀಟ್‌ಗೆ ಮಂಗಳೂರು ಪೊಲೀಸ್ ಆಯುಕ್ತರು ರೀ ಟ್ವೀಟ್ ಮಾಡಿದ್ದು, ಐಪಿಎಲ್ ಸಂಬಂಧಿಸಿ ಬೆಟ್ಟಿಂಗ್ ನಡೆಸದಂತೆ ಮಂಗಳೂ ರಿಗರಿಗೆ ಎಚ್ಚರಿಕೆ ನೀಡಿದ್ದಾರೆ. ಆಯು ಕ್ತರು ಮಾಡಿರುವ ಈ ರೀ ಟ್ವೀಟ್ ಕಮೆಂಟ್ ಟ್ವೀಟರ್‌ನಲ್ಲಿ ಗಮನ ಸೆಳೆಯುವ ಮೂಲಕ ವೈರಲ್ ಆಗಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಮತ್ತು ಮುಂಬಯಿ ಇಂಡಿಯನ್ಸ್ ನಡುವೆ ಗುರುವಾರ ಐಪಿಎಲ್ ಪಂದ್ಯಾಟ ನಡೆದಿತ್ತು. ಈ ಪಂದ್ಯಾಟದ ಮುನ್ನ ಪ್ರಚಾರಕ್ಕಾಗಿ ಆರ್‌ಸಿಬಿ ಟ್ವೀಟ್ ಮಾಡಿ ಪಂದ್ಯಾಟದ ಬಗ್ಗೆ ಮಾಹಿತಿ ನೀಡಿತ್ತು. ಆರ್‌ಸಿಬಿಯ ಈ ಟ್ವೀಟ್‌ಗೆ ಆಯುಕ್ತ ಸಂದೀಪ್ ಪಾಟೀಲ್ ಅವರು ಗುರುವಾರ ರೀಟ್ವೀಟ್ ಮಾಡಿದ್ದು, ಐಪಿಎಲ್ ಬೆಟ್ಟಿಂಗ್‌ದಾರರಿಗೆ ಎಚ್ಚರಿಕೆ ನೀಡಿದ್ದಾರೆ.
“ಮಂಗಳೂರು ಪೊಲೀಸರು ಸೂಕ್ಷ್ಮವಾಗಿ ಅವಲೋಕನ ಮಾಡುತ್ತಿದ್ದಾರೆ. ನಗರದಲ್ಲಿ ಐಪಿಎಲ್ ಬೆಟ್ಟಿಂಗ್ ನಡೆಸಿರುವುದು ಕಂಡು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ತಮ್ಮ ಕಮೆಂಟ್‌ನಲ್ಲಿ ತಿಳಿಸಿದ್ದಾರೆ. ಜತೆಗೆ ಆರ್‌ಸಿಬಿ ಖಾತೆಗೆ ತನ್ನ ರೀ-ಟ್ವೀಟ್ ಕಮೆಂಟ್ ಅನ್ನು ಟ್ಯಾಗ್ ಮಾಡಿದ್ದಾರೆ. ಸದ್ಯ ಆಯುಕ್ತರ ಈ ಟ್ವೀಟ್ ಟ್ವೀಟರ್‌ನಲ್ಲಿ ಸಾಕಷ್ಟು ಗಮನ ಸೆಳೆಯುತ್ತಿದೆ.
ಮಾ. 23ರಿಂದ ಐಪಿಎಲ್ ಹವಾ ಆರಂಭವಾಗಿದೆ. ಬೆಟ್ಟಿಂಗ್‌ನಲ್ಲಿ ತೊಡಗದಂತೆ ಮಾ. 22ರಂದೇ ಮಂಗ ಳೂರು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಎಚ್ಚರಿಕೆ ಕೊಟ್ಟಿದ್ದರು. ಎಚ್ಚರಿಕೆಯ ಹೊರತಾಗಿಯೂ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಮೂವರನ್ನು ಮಾ.26ರಂದು ನಗರದಲ್ಲಿ ಪೊಲೀಸರು ಬಂಧಿಸಿದ್ದರು.