Advertisement

ಐಪಿಎಲ್‌ ಹರಾಜು ಡಿ.17,18ಕ್ಕೆ?

06:45 AM Nov 08, 2018 | Team Udayavani |

ಮುಂಬೈ: ಮುಂದಿನ ಬಾರಿಯ ಐಪಿಎಲ್‌ ಕೂಟಕ್ಕಾಗಿ ರಾಜಸ್ಥಾನದ ಜೈಪುರದಲ್ಲಿ ಈ ವರ್ಷಾಂತ್ಯದದಲ್ಲಿ ಹರಾಜು ನಡೆಯಲಿದೆ.

Advertisement

ಡಿ.17, 18ರಂದು ನಡೆಯುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ. ಈ ಬಗ್ಗೆ ಇನ್ನಷ್ಟೇ ಖಚಿತ ವರದಿ ಬರಬೇಕಾಗಿದೆ. ಅಚ್ಚರಿಯೆಂದರೆ ಹರಾಜಿನ ಪ್ರಮಾಣ ಸಣ್ಣದಾಗಿರವುದರಿಂದ ಜೈಪುರದಲ್ಲಿ ಎರಡು ದಿನ ಹರಾಜು ನಡೆಸುವ ಉದ್ದೇಶವಾದರೂ ಏನು ಎಂದು ಹಲವರು ಪ್ರಶ್ನಿಸಿದ್ದಾರೆ. ಮಾಮೂಲಿಯಾಗಿ ಬೃಹತ್‌ ಪ್ರಮಾಣದ ಹರಾಜು ನಡೆಸುವಾಗ ಎರಡು ದಿನ ನಡೆಸಲಾಗುತ್ತದೆ. ಅದು ಈ ವರ್ಷಾರಂಭದಲ್ಲಿ ನಡೆದಿದೆ.

ಇದೀಗ ಫ್ರಾಂಚೈಸಿಗಳಿಗೆ ಬೇಕಾಗಿರುವುದು ಕೆಲವೇ ಕೆಲವು ಆಟಗಾರರು ಮಾತ್ರ. ಹಾಗಿರುವಾಗ ಎರಡು ದಿನ ಏಕೆ ಎನ್ನುವುದು ಪ್ರಶ್ನೆ. ಇದರ ಜೊತೆಗೆ ಐಪಿಎಲ್‌ ಸ್ಥಳ ಯಾವುದು ಎನ್ನುವುದು ಇನ್ನೊಂದು ಪ್ರಶ್ನೆ. ಮುಂದಿನ ಸಾರ್ವತ್ರಿಕ ಚುನಾವಣೆ ಬರುವುದರಿಂದ ಕೂಟವನ್ನು ಭಾರತದಲ್ಲಿ ನಡೆಸುವುದು ಕಷ್ಟ. ಭದ್ರತಾ ದೃಷ್ಟಿಯಿಂದ ಬೇರೆ ದೇಶಗಳಿಗೆ ಸ್ಥಳಾಂತರಿಸುವ ಸಾಧ್ಯತೆಯಿದೆ. 

ದ.ಆಫ್ರಿಕಾ ಮತ್ತು ಯುಎಇ ಈ ಪೈಕಿ ನೆಚ್ಚಿನ ತಾಣಗಳಾಗಿವೆ. 2009ರಲ್ಲಿ ಸಾರ್ವತ್ರಿಕ ಚುನಾವಣೆ ಬಂದಿದ್ದಾಗ ಐಪಿಎಲ್‌ ಅನ್ನು ದ.ಆಫ್ರಿಕಾದಲ್ಲಿ ನಡೆಸಲಾಗಿತ್ತು. 2014ರಲ್ಲಿ ಅರ್ಧಭಾಗ ಯುಎಇನಲ್ಲಿ ನಡೆಸಲಾಗಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

Advertisement

Udayavani is now on Telegram. Click here to join our channel and stay updated with the latest news.

Next