Advertisement
ಹರಾಜು ಪ್ರಕ್ರಿಯೆಗೆ ಬಂದ ಮೊದಲ ಹೆಸರು ಆರಂಭಿಕ ಆಟಗಾರ ಶಿಖರ್ ಧವನ್. ಆರಂಭದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಭಾರಿ ಬಿಡ್ ನಡೆಸಿದವು. ನಂತರ ಸೇರ್ಪಡೆಯಾದ ಪಂಜಾಬ್ ಕಿಂಗ್ಸ್ ತಂಡವು ಶಿಖರ್ ಧವನ್ ಅವರನ್ನು 8.25 ಕೋಟಿ ರೂ. ಗೆ ಖರೀದಿ ಮಾಡಿತು.
Related Articles
Advertisement
ಟ್ರೆಂಟ್ ಬೌಲ್ಟ್: ಮಾಜಿ ಮುಂಬೈ ಆಟಗಾರ ಟ್ರೆಂಟ್ ಬೌಲ್ಟ್ ಈ ಬಾರಿ ರಾಜಸ್ಥಾನ ಪಾಲಾದರು. ಮುಂಬೈ-ಆರ್ ಸಿಬಿ ಪೈಪೋಟಿಯ ಬಳಿಕ ರಾಯಲ್ಸ್ ತಂಡ 8 ಕೋಟಿ ರೂ ಗೆ ಬೌಲ್ಟ್ ರನ್ನು ಖರೀದಿಸಿದರು.
ಶ್ರೇಯಸ್ ಅಯ್ಯರ್: ಮಾಜಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಅಯ್ಯರ್ ಹೆಸರು ಕೂಗುತ್ತಿದ್ದಂತೆ ಆರ್ ಸಿಬಿ ಬಿಡ್ ಆರಂಭಿಸಿತು. ಆದರೆ ನಂತರ ಸತತ ಬಿಡ್ ಮಾಡಿದ ಕೆಕೆಆರ್ ಬಿಡ್ ನ್ನು ಎತ್ತರಕ್ಕೇರಿತು. ಕೊನೆಗೆ 12.25 ಕೋಟಿ ರೂ ಗೆ ಶ್ರೇಯಸ್ ಅಯ್ಯರ್ ಕೆಕೆಆರ್ ಪಾಲಾದರು.
ಮೊಹಮ್ಮದ್ ಶಮಿ: ಮಾಜಿ ಪಂಜಾಬ್ ಕಿಂಗ್ಸ್ ಆಟಗಾರ ಮೊಹಮದ್ ಶಮಿಗಾಗಿ ಆರಂಭದಲ್ಲಿ ಆರ್ ಸಿಬಿ ಉತ್ತಮ ಬಿಡ್ ನಡೆಸಿತು. ಅಂತಿಮವಾಗಿ 6.25 ಕೋಟಿ ರೂ ಗಾಗಿ ಶಮಿ ಗುಜರಾತ್ ಟೈಟನ್ಸ್ ಪಾಲಾಯಿತು.
ಫಾಫ್ ಡುಪ್ಲೆಸಿಸ್: ದಕ್ಷಿಣ ಆಫ್ರಿಕಾದ ಆಟಗಾರ ಫಾಫ್ ಡುಪ್ಲೆಸಿಸ್ ರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಖರೀದಿಸಿತು. ಸಿಎಸ್ ಕೆ ಮತ್ತು ಆರ್ ಸಿಬಿ ನಡುವಿನ ಬಿಡ್ ವಾರ್ ಬಳಿಕ ಫಾಫ್ 7 ಕೋಟಿ ರೂಗೆ ಆರ್ ಸಿಬಿ ಪಾಲಾದರು.
ಕ್ವಿಂಟನ್ ಡಿಕಾಕ್: ವಿಕೆಟ್ ಕೀಪರ್ ಬ್ಯಾಟರ್ ಕ್ವಿಂಟನ್ ಡಿಕಾಕ್ ಅವರಿಗೂ ಹಲವು ತಂಡಗಳು ಬಿಡ್ ನಡೆಸಿದವು. ಅಂತಿಮವಾಗಿ ಕೆ.ಎಲ್.ರಾಹುಲ್ ನಾಯಕತ್ವದ ಲಕ್ನೋ ತಂಡವು ಕ್ವಿಂಟನ್ ರನ್ನು 6.25 ಕೋಟಿ ರೂ ಗೆ ಖರೀದಿಸಿತು.
ಡೇವಿಡ್ ವಾರ್ನರ್: ಮಾಜಿ ಎಸ್ ಆರ್ ಎಚ್ ಆಟಗಾರ ಡೇವಿಡ್ ವಾರ್ನರ್ ರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ಖರೀದಿಸಿತು. ಭಾರಿ ಮೊತ್ತ ಪಡೆಯುವ ನಿರೀಕ್ಷೆ ಮೂಡಿಸಿದ್ದ ವಾರ್ನರ್ ಗೆ ಡೆಲ್ಲಿ 6.25 ಕೋಟಿ ರೂ ನೀಡಿ ಖರೀದಿಸಿತು.
Koo AppMarquee players bidding has been completed and as always the auction is unpredictable. Some interesting takeaways – Warner back to Delhi where he first played in the IPL, Shreyas Iyer at KKR gives them a captaincy option and Punjab getting some solid players for themselves – Rabada and Shikhar Dhawan. #iplauction #cricketonkoo – Gaurav Kalra (@GK75) 12 Feb 2022