Advertisement

ಐಪಿಎಲ್‌ ಹರಾಜು: ಸ್ಟೋಕ್ಸ್‌ಗೆ ಬಂಪರ್‌, ಕನ್ನಡಿಗರಿಗೆ ಕೋಟಿ ಕೋಟಿ!

06:00 AM Jan 28, 2018 | Team Udayavani |

ಬೆಂಗಳೂರು: ಹನ್ನೊಂದನೇ ಆವೃತ್ತಿಯ ಐಪಿಎಲ್‌ ಮಹಾ ಹರಾಜಿನಲ್ಲಿ ಭಾರತದ, ಅದರಲ್ಲೂ ಕರ್ನಾಟಕದ ಕ್ರಿಕೆಟಿಗರು ಪ್ರಭುತ್ವ ಸಾಧಿಸಿದ್ದಾರೆ. ಕಳೆದ ವರ್ಷದಂತೆ ಇಂಗ್ಲೆಂಡಿನ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ ಅತ್ಯಧಿಕ ಮೊತ್ತಕ್ಕೆ ಮಾರಾಟವಾದುದನ್ನು ಹೊರತುಪಡಿಸಿದರೆ, ಅನಂತರದ ಸ್ಥಾನದಲ್ಲಿ ಕನ್ನಡಿಗರಾದ ಕೆ. ಎಲ್‌. ರಾಹುಲ್‌ ಮತ್ತು ಮನೀಷ್‌ ಪಾಂಡೆ ಮಿಂಚಿದ್ದು ವಿಶೇಷ.

Advertisement

ಕಳೆದ ವರ್ಷ 14 ಕೋ.ರೂ. ಮೊತ್ತಕ್ಕೆ ಪುಣೆ ಪಾಲಾಗಿದ್ದ ಬೆನ್‌ ಸ್ಟೋಕ್ಸ್‌ ಅವರು ಈ ಸಲ 12.5 ಕೋಟಿ ರೂ. ಮೊತ್ತಕ್ಕೆ ರಾಜಸ್ಥಾನ್‌ ರಾಯಲ್ಸ್‌ ಪಾಲಾದರು. ಇವರನ್ನು ಖರೀದಿಸಲು ಪಂಜಾಬ್‌ ಮತ್ತು ಚೆನ್ನೈ ಕೂಡ ತೀವ್ರ ಪೈಪೋಟಿಯೊಡ್ಡಿತ್ತು. 
ಕರ್ನಾಟಕದ ಸ್ಟೈಲಿಶ್‌ ಓಪನರ್‌, ಮಂಗಳೂರು ಮೂಲದ ಕೆ. ಎಲ್‌. ರಾಹುಲ್‌ 11 ಕೋ.ರೂ.ಗಳಷ್ಟು ಭಾರೀ ಮೊತ್ತಕ್ಕೆ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡವನ್ನು ಸೇರಿಕೊಂಡರೆ, ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಮನೀಷ್‌ ಪಾಂಡೆ ಅವರನ್ನು ಇಷ್ಟೇ ಮೊತ್ತಕ್ಕೆ ಸನ್‌ರೈಸರ್ ಹೈದರಾಬಾದ್‌ ತಂಡ ಬಲೆ ಬೀಸಿತು.

ಇದೇ ವೇಳೆ ಅಫ್ಘಾನಿಸ್ಥಾನದ ಲೆಗ್‌ಸ್ಪಿನ್ನರ್‌ ರಶೀದ್‌ ಖಾನ್‌ ಕೂಡ ಭಾರೀ ಮೊತ್ತಕ್ಕೆ ಮಾರಾಟವಾದರು. ಇವರನ್ನು 9 ಕೋ.ರೂ.ಗೆ ಸನ್‌ರೈಸರ್ ಹೈದರಾಬಾದ್‌ ಮರಳಿ ಖರೀದಿಸಿತು. ಇದು ಐಪಿಎಲ್‌ ಇತಿಹಾಸದಲ್ಲಿ ಸ್ಪಿನ್ನರ್‌ ಓರ್ವ ಪಡೆದ ಗರಿಷ್ಠ ಮೊತ್ತವಾಗಿದೆ. 

ಬೆನ್‌ ಸ್ಟೋಕ್ಸ್‌ ಹೊರತುಪಡಿಸಿದರೆ ಅತ್ಯಧಿಕ ಮೊತ್ತಕ್ಕೆ ಬಿಕರಿಯಾದ ವಿದೇಶಿ ಆಟಗಾರರೆಂದರೆ ಆಸ್ಟ್ರೇಲಿಯದ ಬ್ಯಾಟ್ಸ್‌ ಮನ್‌ ಕ್ರಿಸ್‌ ಲಿನ್‌ ಮತ್ತು ವೇಗಿ ಮಿಚೆಲ್‌ ಸ್ಟಾರ್ಕ್‌. ಇವರಿಬ್ಬರನ್ನೂ ಕೆಕೆಆರ್‌ ಬುಟ್ಟಿಗೆ ಹಾಕಿಕೊಂಡಿತು. ಲಿನ್‌ ಅವರಿಗೆ  9.6 ಕೋ.ರೂ. ಹಾಗೂ ಸ್ಟಾರ್ಕ್‌ಗೆ 9.4 ಕೋ.ರೂ. ಮೊತ್ತ ಲಭಿಸಿತು. ಆಸೀಸ್‌ ಆಲ್‌ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ 5 ವರ್ಷಗಳ ಬಳಿಕ ಡೆಲ್ಲಿ ಡೇರ್‌ಡೆವಿಲ್ಸ್‌ ತಂಡಕ್ಕೆ ಮರಳಿದರು. ಇವರಿಗೆ ಲಭಿ ಸಿದ ಮೊತ್ತ 9 ಕೋಟಿ ರೂ.

ರಶೀದ್‌ ದುಬಾರಿ ಸ್ಪಿನ್ನರ್‌
ಅಫ್ಘಾನಿಸ್ಥಾನ ಈಗಷ್ಟೇ ಕ್ರಿಕೆಟ್‌ನಲ್ಲಿ ಕಣ್ಣು ಬಿಡುತ್ತಿರುವ ರಾಷ್ಟ್ರ. ಟೆಸ್ಟ್‌ ಮಾನ್ಯತೆ ಸಿಕ್ಕಿದ್ದರೂ ಆ ದೇಶದ ಮಂಡಳಿ ಇನ್ನೂ ಸಹಸದಸ್ಯ ರಾಷ್ಟ್ರಗಳಲ್ಲೊಂದು. ಆದರೆ ಅಲ್ಲಿನ ಆಟಗಾರರು ಮಾತ್ರ ವಿಶ್ವದ ಖ್ಯಾತನಾಮರಿಗೆ ಸಡ್ಡು ಹೊಡೆಯುತ್ತಿದ್ದಾರೆ. ಇವರಲ್ಲಿ ಸ್ಪಿನ್ನರ್‌ ರಶೀದ್‌ ಖಾನ್‌ ಕೂಡ ಒಬ್ಬರು. 

Advertisement

ಕಳೆದ ಬಾರಿ ಸನ್‌ರೈಸರ್ ಹೈದರಾಬಾದ್‌ ತಂಡಕ್ಕೆ ಅವರು  4 ಕೋಟಿ ರೂ.ಗೆ ಮಾರಾಟವಾಗಿದ್ದರು. ಆಗ ಅದು ಸಹಸದಸ್ಯ ರಾಷ್ಟ್ರಗಳ ಆಟಗಾರರ ಮಟ್ಟಿಗೆ ದಾಖಲೆ. ಈ ಬಾರಿ ರಶೀದ್‌ ಅವರನ್ನು 9 ಕೋಟಿ ರೂ. ನೀಡಿ ಹೈದರಾಬಾದ್‌ ತನ್ನಲ್ಲೇ ಉಳಿಸಿಕೊಂಡಿದೆ. 

ಇದು ಐಪಿಎಲ್‌ನಲ್ಲಿ ಸ್ಪಿನ್ನರ್‌ ಒಬ್ಬನಿಗೆ ನೀಡಿರುವ ಗರಿಷ್ಠ ಮೊತ್ತ ಎನ್ನಲಾಗಿದೆ. ಈ ಭಾರೀ ಮೊತ್ತದಿಂದಾಗಿ ರಶೀದ್‌ ಖಾನ್‌ ಈಗ ಆರ್‌. ಅಶ್ವಿ‌ನ್‌, ಸುನೀಲ್‌ ನಾರಾಯಣ್‌ ಅವರಂಥ ಸ್ಪಿನ್‌ ದಿಗ್ಗಜರನ್ನೇ ಮೀರಿ ನಿಂತಿದ್ದಾರೆ! 2017ರ ಐಪಿಎಲ್‌ನಲ್ಲಿ ಸನ್‌ರೈಸರ್ ಹೈದರಾಬಾದ್‌ ತಂಡದ ಗಮನಾರ್ಹ ನಿರ್ವಹಣೆಯಲ್ಲಿ ರಶೀದ್‌ ಖಾನ್‌ ಪಾತ್ರ ಮಹತ್ವದ್ದಾಗಿತ್ತು.

ಕೃಣಾಲ್‌ ಪಾಂಡ್ಯ ದಾಖಲೆ
ಶನಿವಾರದ ಹರಾಜಿನಲ್ಲಿ ಭರವಸೆಯ ಕ್ರಿಕೆಟಿಗ ಕೃಣಾಲ್‌ ಪಾಂಡ್ಯ ದಾಖಲೆಯೊಂದನ್ನು ನಿರ್ಮಿಸಿದರು. ಅವರನ್ನು 8.8 ಕೋ.ರೂ.ಗೆ ಮುಂಬೈ ಇಂಡಿಯನ್ಸ್‌ ಮರಳಿ ಖರೀದಿಸಿತು. ಇದು ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸದ ಆಟಗಾರ
ನೊಬ್ಬನಿಗೆ ಐಪಿಎಲ್‌ನಲ್ಲಿ ಲಭಿಸಿದ ಅತ್ಯಧಿಕ ಮೊತ್ತ ವಾಗಿದೆ.  2016ರ ಹರಾಜಿನಲ್ಲಿ ಪವನ್‌ ನೇಗಿ ಅವರನ್ನು ಡೆಲ್ಲಿ ಡೇರ್‌ಡೆವಿಲ್ಸ್‌ 8.5 ಕೋಟಿಗೆ ಖರೀದಿಸಿದ್ದು ಈವರೆಗಿನ ದಾಖಲೆಯಾಗಿತ್ತು. ಕೃಣಾಲ್‌ ಮೂಲ ಬೆಲೆ ಕೇವಲ 40 ಲಕ್ಷ ರೂ. ಆಗಿತ್ತು! ಹಾಗೆಯೇ ವೆಸ್ಟ್‌ ಇಂಡೀಸಿನ ಅನಾಮ ಧೇಯ ಆಟಗಾರ ಜೋಫ‌Å ಆರ್ಚರ್‌ 7.2 ಕೋ.ರೂ. ಮೊತ್ತಕ್ಕೆ ರಾಜಸ್ಥಾನ್‌ ರಾಯಲ್ಸ್‌ ಪಾಲಾದರು. ಸಸೆಕ್ಸ್‌ ಕೌಂಟಿ ಪರ ಪ್ರಥಮ ದರ್ಜೆ ಪಂದ್ಯವಾಡಿರುವ ಆರ್ಚರ್‌, ಬಿಗ್‌ ಬಾಶ್‌ ಲೀಗ್‌ನಲ್ಲಿ ಹೋಬರ್ಟ್‌ ಹರಿಕೇನ್‌ ತಂಡ ವನ್ನು ಪ್ರತಿನಿಧಿಸಿದ್ದರು.

ಪಂಜಾಬ್‌ಗ ಆರ್‌ಟಿಎಮ್‌ ಬ್ರೇಕ್‌!
ಟಾಪ್‌ ಆಟಗಾರರನ್ನು ಸೆಳೆದುಕೊಳ್ಳಲು ಮುಂಚೂಣಿಯಲ್ಲಿದ್ದ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚಾಯಿತು. ಕನಿಷ್ಠ 4 ಆಟಗಾರರನ್ನು ಅದು ಆರ್‌ಟಿಎಮ್‌ನಿಂದಾಗಿ (ರೈಟ್‌ ಟು ಮ್ಯಾಚ್‌) ಸೆಳೆದುಕೊಳ್ಳಲು ವಿಫ‌ಲವಾಯಿತು. ಡ್ವೇನ್‌ ಬ್ರಾವೊ (ಚೆನ್ನೈ, 6.40 ಕೋ.ರೂ.), ಫಾ ಡು ಪ್ಲೆಸಿಸ್‌ (ಚೆನ್ನೈ,1.60 ಕೋ.ರೂ.), ಅಜಿಂಕ್ಯ ರಹಾನೆ (ರಾಜಸ್ಥಾನ್‌, 4 ಕೋ.ರೂ.) ಮತ್ತು ಶಿಖರ್‌ ಧವನ್‌ (ಸನ್‌ರೈಸರ್, 5.20 ಕೋ.ರೂ.) ಅವರಿಗೆ ಬಲೆ ಬೀಸಿತಾದರೂ ಇದಕ್ಕೆ ಆರ್‌ಟಿಎಮ್‌ ಅಡ್ಡಿಯಾಯಿತು. ಈ ಆಟಗಾರರು ಮೂಲ ತಂಡದಲ್ಲೇ ಉಳಿದರು. ಆರ್‌ಟಿಎಮ್‌ ಮೂಲಕ ಪಂಜಾಬ್‌ ಮರಳಿ ಪಡೆದ ಆಟಗಾರರೆಂದರೆ ಮಿಲ್ಲರ್‌ (3 ಕೋ.ರೂ.) ಮತ್ತು ಸ್ಟೊಯಿನಿಸ್‌ (6.20 ಕೋ.ರೂ.).ಮಿಚೆಲ್‌ ಸ್ಟಾರ್ಕ್‌ ಅವರನ್ನು ಪಡೆಯಲೂ ಪಂಜಾಬ್‌ ಇನ್ನಿಲ್ಲದ ಪ್ರಯತ್ನ ಮಾಡಿತು. ಆದರೆ ಆಸೀಸ್‌ ವೇಗಿ 9.4 ಕೋ.ರೂ. ಮೊತ್ತಕ್ಕೆ ಕೆಕೆಆರ್‌ ಕ್ಯಾಂಪ್‌ ಸೇರಿಕೊಂಡರು. ಆದರೆ ಆರನ್‌ ಫಿಂಚ್‌ ಕೈಜಾರಲಿಲ್ಲ (6.20 ಕೋ.ರೂ.). ಭಾರತದ ಸ್ಟಾರ್‌ ಆಟಗಾರರು ಪ್ರೀತಿ ಜಿಂಟಾ ಫ್ರಾಂಚೈಸಿ ಪಾಲಾದರು.  ರಾಹುಲ್‌, ನಾಯರ್‌, ಅಶ್ವಿ‌ನ್‌  ಇವರಲ್ಲಿ ಪ್ರಮುಖರು.

ಗಪ್ಟಿಲ್‌, ಗೇಲ್‌… ಆಗಲಿಲ್ಲ ಸೇಲ್‌!
ಚುಟುಕು ಕ್ರಿಕೆಟಿನ ಸ್ಫೋಟಕ ಆಟಗಾರರಾದ ಕ್ರಿಸ್‌ ಗೇಲ್‌, ಮಾರ್ಟಿನ್‌ ಗಪ್ಟಿಲ್‌ ಅವರನ್ನು ಯಾವ ಫ್ರಾಂಚೈಸಿಯೂ ಖರೀದಿಸದಿದ್ದುದು ಹರಾಜಿನ ಮೊದಲ ದಿನದ ಅಚ್ಚರಿ. ಅಪಾಯಕಾರಿ ಗೇಲ್‌ ಅವರನ್ನು ಆರ್‌ಸಿಬಿ ಉಳಿಸಿಕೊಳ್ಳಲು ಮುಂದಾಗಿರಲಿಲ್ಲ. ಸಹಜವಾಗಿಯೇ ಈ ಕೆರಿಬಿಯನ್‌ ಕ್ರಿಕೆಟಿಗನಿಗೆ ಯಾರು ಬಲೆ ಬೀಸಬಹುದೆಂಬ ನಿರೀಕ್ಷೆ ಮೇರೆ ಮೀರಿತ್ತು. ಗೇಲ್‌ 2 ಕೋ. ರೂ. ಮೂಲ ಬೆಲೆ ಹೊಂದಿದ್ದರು.

ಗೇಲ್‌, ಗಪ್ಟಿಲ್‌ ಜತೆಗೆ ದಕ್ಷಿಣ ಆಫ್ರಿಕಾದ ಹಾಶಿಮ್‌ ಆಮ್ಲ ಕೂಡ ಮಾರಾಟವಾಗದೆ ಉಳಿದರು. ಹೀಗೆ ಹರಾಜಿ ನಲ್ಲಿ ಯಾವ ಫ್ರಾಂಚೈಸಿಗೂ ಬೇಡವಾದ ಆಟಗಾರರ ಯಾದಿ ಯಲ್ಲಿರುವ ಪ್ರಮುಖರೆಂದರೆ ಜೋಶ್‌ ಹ್ಯಾಝಲ್‌ವುಡ್‌, ಮಿಚೆಲ್‌ ಜಾನ್ಸನ್‌, ಸ್ಯಾಮ್‌ ಬಿಲ್ಲಿಂಗ್ಸ್‌, ನಮನ್‌ ಓಜಾ, ಜಾನಿ ಬೇರ್‌ಸ್ಟೊ, ಪಾರ್ಥಿವ್‌ ಪಟೇಲ್‌, ಜೇಮ್ಸ್‌ ಫಾಕ್ನರ್‌, ಮುರಳಿ ವಿಜಯ್‌, ಜೋ ರೂಟ್‌, ಇಶಾಂತ್‌ ಶರ್ಮ, ಲಸಿತ ಮಾಲಿಂಗ, ಐಶ್‌ ಸೋಧಿ, ಮಿಚೆಲ್‌ ಮೆಕ್ಲೆನಗನ್‌. ಇವರಲ್ಲಿ ಆಸೀಸ್‌ ಕ್ರಿಕೆಟಿಗರಾದ ಹ್ಯಾಝಲ್‌ವುಡ್‌, ಜಾನ್ಸನ್‌, ಫಾಕ್ನರ್‌ ಅವರ ಮೂಲ ಬೆಲೆ 2 ಕೋ.ರೂ. ಆಗಿತ್ತು!

ಐಪಿಎಲ್‌: ಉಳಿದವರು, ಬಂದವರು
ರಾಜಸ್ಥಾನ್‌ ರಾಯಲ್ಸ್‌
ಉಳಿದವರು: ಸ್ಟೀವನ್‌ ಸ್ಮಿತ್‌.
ಬಂದವರು: ಬೆನ್‌ ಸ್ಟೋಕ್ಸ್‌, ಅಜಿಂಕ್ಯ ರಹಾನೆ, ಸ್ಟುವರ್ಟ್‌ ಬಿನ್ನಿ, ಸಂಜು ಸ್ಯಾಮ್ಸನ್‌, ಜಾಸ್‌ ಬಟ್ಲರ್‌, ರಾಹುಲ್‌ ತ್ರಿಪಾಠಿ.

ಕೋಲ್ಕತಾ ನೈಟ್‌ರೈಡರ್
ಉಳಿದವರು: ಸುನೀಲ್‌ ನಾರಾಯಣ್‌, ಆ್ಯಂಡ್ರೆ ರಸೆಲ್‌.
ಬಂದವರು: ಸ್ಟಾರ್ಕ್‌, ಕ್ರಿಸ್‌ ಲಿನ್‌, ದಿನೇಶ್‌ ಕಾರ್ತಿಕ್‌, ರಾಬಿನ್‌ ಉತ್ತಪ್ಪ, ಪೀಯೂಷ್‌ ಚಾವ್ಲಾ, ಕುಲದೀಪ್‌ ಯಾದವ್‌, ಸೂರ್ಯಕುಮಾರ್‌ ಯಾದವ್‌, ಶುಭಂ ಗಿಲ್‌, ಇಶಾಂಕ್‌ ಜಗ್ಗಿ.

ಡೆಲ್ಲಿ ಡೇರ್‌ಡೆವಿಲ್ಸ್‌
ಉಳಿದವರು: ಪಂತ್‌, ಕ್ರಿಸ್‌ ಮಾರಿಸ್‌, ಶ್ರೇಯಸ್‌ ಅಯ್ಯರ್‌.
ಬಂದವರು: ಮ್ಯಾಕ್ಸ್‌ವೆಲ್‌, ಗಂಭೀರ್‌, ಜಾಸನ್‌ ರಾಯ್‌, ಕಾಲಿನ್‌ ಮುನ್ರೊ, ಮೊಹಮ್ಮದ್‌ ಶಮಿ, ಅಮಿತ್‌ ಮಿಶ್ರಾ.

ಮುಂಬೈ ಇಂಡಿಯನ್ಸ್‌
ಉಳಿದವರು: ರೋಹಿತ್‌, ಹಾರ್ದಿಕ್‌ ಪಾಂಡ್ಯ, ಬುಮ್ರಾ.
ಬಂದವರು: ಪೊಲಾರ್ಡ್‌, ಮುಸ್ತಫಿಜುರ್‌ ರೆಹಮಾನ್‌, ಪ್ಯಾಟ್‌ ಕಮಿನ್ಸ್‌, ಸೂರ್ಯಕುಮಾರ್‌ ಯಾದವ್‌, ಕೃಣಾಲ್‌.

ಸನ್‌ರೈಸರ್ ಹೈದರಾಬಾದ್‌
ಉಳಿದವರು: ವಾರ್ನರ್‌, ಭುವನೇಶ್ವರ್‌ ಕುಮಾರ್‌.
ಬಂದವರು: ಧವನ್‌, ಶಕಿಬ್‌ ಅಲ್‌ ಹಸನ್‌, ಕೇನ್‌ ವಿಲಿಯ ಮ್ಸನ್‌, ಯೂಸುಫ್ ಪಠಾಣ್‌, ರಶೀದ್‌ ಖಾನ್‌, ರಿಕಿ ಭುಯಿ.

ಕಿಂಗ್ಸ್‌ ಇಲೆವೆನ್‌ ಪಂಜಾಬ್‌
ಉಳಿದವರು: ಅಕ್ಷರ್‌ ಪಟೇಲ್‌.
ಬಂದವರು: ಆರ್‌. ಅಶ್ವಿ‌ನ್‌, ಕರುಣ್‌ ನಾಯರ್‌, ಕೆ.ಎಲ್‌. ರಾಹುಲ್‌, ಡೇವಿಡ್‌ ಮಿಲ್ಲರ್‌, ಆರನ್‌ ಫಿಂಚ್‌, ಮಾರ್ಕಸ್‌ ಸ್ಟೊಯಿನಿಸ್‌, ಮಾಯಾಂಕ್‌ ರಾಣಾ.

ರಾಯಲ್‌ ಚಾಲೆಂಜರ್ ಬೆಂಗಳೂರು
ಉಳಿದವರು: ಕೊಹ್ಲಿ, ಎಬಿಡಿ, ಸಫ‌ìರಾಜ್‌ ಖಾನ್‌.
ಬಂದವರು: ಬ್ರೆಂಡನ್‌ ಮೆಕಲಮ್‌, ಕ್ರಿಸ್‌ ವೋಕ್ಸ್‌, ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌, ಮೊಯಿನ್‌ ಅಲಿ, ಕ್ವಿಂಟನ್‌ ಡಿ ಕಾಕ್‌, ಉಮೇಶ್‌ ಯಾದವ್‌,  ಚಾಹಲ್‌, ಮನನ್‌ ವೋಹ್ರ.

ಚೆನ್ನೈ ಸೂಪರ್‌ ಕಿಂಗ್ಸ್‌
ಉಳಿದವರು: ಮಹೇಂದ್ರ ಸಿಂಗ್‌ ಧೋನಿ, ರವೀಂದ್ರ ಜಡೇಜ, ಸುರೇಶ್‌ ರೈನಾ.
ಬಂದವರು: ಫಾ ಡು ಪ್ಲೆಸಿಸ್‌, ಹರ್ಭಜನ್‌ ಸಿಂಗ್‌, ಡ್ವೇನ್‌ ಬ್ರಾವೊ, ಶೇನ್‌ ವಾಟ್ಸನ್‌, ಕೇದಾರ್‌ ಜಾಧವ್‌, ಅಂಬಾಟಿ ರಾಯುಡು, ಇಮ್ರಾನ್‌ ತಾಹಿರ್‌.
(ಇವರು ಈ ಯಾದಿಯ ಪ್ರಮುಖ ಆಟಗಾರರು ಮಾತ್ರ)

Advertisement

Udayavani is now on Telegram. Click here to join our channel and stay updated with the latest news.

Next