Advertisement
ಒಟ್ಟು 1574 ಆಟಗಾರರು ಐಪಿಎಲ್ ಹರಾಜಿಗೆ ಹೆಸರು ನೋಂದಣಿ ಮಾಡಿಕೊಂಡಿದ್ದರು. ಹೆಸರನ್ನು ಪರಿಶೀಲಿಸಿ ಬಿಸಿಸಿಐ 577 ಆಟಗಾರರ ಅಂತಿಮ ಪಟ್ಟಿ ಸಿದ್ಧಪಡಿಸಿದೆ. ಇದರಲ್ಲಿ 367 ಭಾರತೀಯರು, 210 ವಿದೇಶಿ ಆಟಗಾರರಿದ್ದಾರೆ. ಹತ್ತು ತಂಡಗಳು ಹರಾಜಿನಲ್ಲಿ ಪಾಲ್ಗೊಳ್ಳಲಿದ್ದು, 204 ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲು ಕಸರತ್ತು ನಡೆಸಲಿವೆ. ಈ ಪೈಕಿ 70 ವಿದೇಶಿ ಆಟಗಾರರೂ ಸೇರಿದ್ದಾರೆ.
Related Articles
Advertisement
ತಂಡ ಅಗತ್ಯ ಆಟಗಾರರು ಬಾಕಿ ಮೊತ್ತ
(ಭಾರತ/ವಿದೇಶ) ಕೋಟಿ ರೂ.
ಆರ್ಸಿಬಿ 14/8 83
ಚೆನ್ನೈ ಕಿಂಗ್ಸ್ 13/7 55
ಹೈದರಾಬಾದ್ 15/5 45
ಮುಂಬೈ 12/8 45
ಡೆಲ್ಲಿ 14/7 73
ರಾಜಸ್ಥಾನ್ 12/7 41
ಪಂಜಾಬ್ 15/8 110.5
ಕೋಲ್ಕತಾ 13/6 51
ಗುಜರಾತ್ 13/7 69
ಲಕ್ನೋ 13/7 69
ಕೋಲ್ಕತಾ, ರಾಜಸ್ಥಾನಕ್ಕೆ ಆರ್ಟಿಎಂ ಅವಕಾಶವಿಲ್ಲ:
ಕೋಲ್ಕತಾ ನೈಟ್ರೈಡರ್ಸ್, ರಾಜಸ್ಥಾನ್ ರಾಯಲ್ಸ್ ತಮಗೆ ಲಭ್ಯವಿದ್ದ 6 ಆಟಗಾರರನ್ನು ಉಳಿಸಿಕೊಂಡಿವೆ. ಹೀಗಾಗಿ ಅವರು ರೈಟ್ ಟು ಮ್ಯಾಚ್ (ಆರ್ಟಿಎಂ) ಕಾರ್ಡ್ ಆಯ್ಕೆ ಬಳಸಲು ಅವಕಾಶವಿಲ್ಲ. ಹಿಂದೆ ತಮ್ಮ ಬಳಿಯಿದ್ದ ಆಟಗಾರನೊಬ್ಬನನ್ನು ಈ ಬಾರಿ ನಿರ್ದಿಷ್ಟ ಫ್ರಾಂಚೈಸಿ ಹರಾಜಿಗೆ ಬಿಡುಗಡೆ ಮಾಡಿದ್ದು, ಆ ಆಟಗಾರ ಹರಾಜಿನಲ್ಲಿ ಇನ್ನೊಂದು ಫ್ರಾಂಚೈಸಿ ಪಾಲಾಗುತ್ತಾನೆ ಎಂದುಕೊಳ್ಳೋಣ. ಆತನನ್ನು ಮಾರಾಟವಾದ ಬೆಲೆ ನೀಡಿ ಹಿಂದಿನ ಫ್ರಾಂಚೈಸಿ ಪಡೆದುಕೊಳ್ಳಬಹುದು. ಇದನ್ನು ಆರ್ಟಿಎಂ ಆಯ್ಕೆ ಎನ್ನಲಾಗುತ್ತದೆ.
ಹೇಗೆ ನಡೆಯುತ್ತೆ ಹರಾಜು?
ಹರಾಜು ಪಟ್ಟಿಯಲ್ಲಿ ಒಟ್ಟು 577 ಮಂದಿಯಿದ್ದಾರೆ. ಈ ಎಲ್ಲ ಆಟಗಾರರ ಹೆಸರೂ ಹರಾಜಿನಲ್ಲಿ ಪ್ರಸ್ತಾವವಾಗುತ್ತದೆ ಎನ್ನಲಾಗುವುದಿಲ್ಲ. ರವಿವಾರ ಆರಂಭದಲ್ಲಿ 116 ಆಟಗಾರರ ಹೆಸರು ಪ್ರಸ್ತಾವವಾಗುತ್ತದೆ. ಇದು ಮುಗಿದ ಅನಂತರ ಫ್ರಾಂಚೈಸಿಗಳು ಬಯಸಿದ ಆಟಗಾರರ ಹೆಸರು ಪ್ರಸ್ತಾವಕ್ಕೆ ಬರುತ್ತದೆ. ಸೋಮವಾರ ಇದೇ ಪ್ರಕ್ರಿಯೆಯ ಮುಂದುವರಿದ ಭಾಗವಿರುತ್ತದೆ. ಇದರಲ್ಲಿ ಫ್ರಾಂಚೈಸಿಗಳು ಬಯಸಿದಲ್ಲಿ, ಮಾರಾಟವಾಗದ ಆಟಗಾರರ ಹೆಸರೂ ಇರುತ್ತದೆ.
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋಸಿನಿಮಾ
ಆರಂಭ: ಮ.3.30, ಮುಕ್ತಾಯ ರಾ.10.30