ಮುಂಬೈ: ಮುಂದಿನ ಸೀಸನ್ ನ ಇಂಡಿಯನ್ ಪ್ರೀಮಿಯರ್ ಲೀಗ್ ಗೆ ತಯಾರಿಗಳು ಆರಂಭವಾಗಿದೆ. ಡಿಸೆಂಬರ್ ತಿಂಗಳಲ್ಲಿ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದೆ. ಅದಕ್ಕೂ ಮೊದಲು ಮುಂದಿನ ಸೀಸನ್ ನಲ್ಲಿ ನಿಯಮ ಬದಲಾವಣೆ ಮಾಡಲು ಬಿಸಿಸಿಐ ನಿರ್ಧರಿಸಿದೆ.
2023 ಋತುವಿನಿಂದ ಐಪಿಎಲ್ ಗೆ ಹೊಸ ಆಯಾಮವನ್ನು ಸೇರಿಸಲು ಹೊಸ ಪರಿಕಲ್ಪನೆಯನ್ನು ಪರಿಚಯಿಸಲಾಗುವುದು, ಇದರಲ್ಲಿ ಪ್ರತಿ ತಂಡಕ್ಕೆ ಒಬ್ಬ ಬದಲಿ ಆಟಗಾರನು ಐಪಿಎಲ್ ಪಂದ್ಯದಲ್ಲಿ ಹೆಚ್ಚು ಸಕ್ರಿಯವಾಗಿ ಪಾಲ್ಗೊಳ್ಳಲು ಸಾಧ್ಯವಾಗುತ್ತದೆ ಎಂದು ವರದಿಯಾಗಿದೆ.
ಈ ಬದಲಿ ಆಟಗಾರನನ್ನು ತಂಡಗಳು ಹೇಗೆ ಬಳಸಿಕೊಳ್ಳುತ್ತವೆ ಎಂಬುದರ ಕುರಿತು ಯಾವುದೇ ಮಾಹಿತಿಯಿಲ್ಲ. ಈ ನಿಯಮವನ್ನು ಈ ವರ್ಷದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ನಿಯಮವನ್ನು ಬಳಸಲಾಗಿತ್ತು.
ಇದನ್ನೂ ಓದಿ;ವೀಕೆಂಡ್ ನಲ್ಲಿ ಮನೆಯಲ್ಲೇ ಘಮ ಘಮಿಸುವ ರುಚಿಯಾದ ಗೀರೈಸ್ ಮಾಡಿ ಸವಿಯಿರಿ…
ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಕೂಟದಲ್ಲಿ, ತಂಡಗಳು ಟಾಸ್ ವೇಳೆಯೇ ತಮ್ಮ ಟೀಮ್ ಶೀಟ್ ಗಳಲ್ಲಿ ನಾಲ್ಕು ಬದಲಿ ಆಟಗಾರರನ್ನು ಸೂಚಿಸಬೇಕಿತ್ತು. ಆದರೆ ಅವರಲ್ಲಿ ಒಬ್ಬರನ್ನು ಮಾತ್ರ ಆಟದ ಅವಧಿಯಲ್ಲಿ ಬಳಸಬಹುದಾಗಿದೆ. ಈ ಆಟಗಾರನನ್ನು ಇಂಪ್ಯಾಕ್ಟ್ ಪ್ಲೇಯರ್ ಎಂದು ಕರೆಯಲಾಗುತ್ತದೆ. ಯಾವುದೇ ಇನ್ನಿಂಗ್ಸ್ ನ 14 ನೇ ಓವರ್‌ಗಳು ಮುಗಿಯುವ ಮೊದಲು ಯಾವುದೇ ಆಡುವ ಸದಸ್ಯರ ಬದಲಿಗೆ ಇಂಪ್ಯಾಕ್ಟ್ ಪ್ಲೇಯರ್ ಆಡಲು ಅನುಮತಿಸಲಾಗಿತ್ತು.
ಇಂಪ್ಯಾಕ್ಟ್ ಪ್ಲೇಯರ್ ಈಗಾಗಲೇ ಔಟ್ ಆಗಿರುವ ಮತ್ತು ಇನ್ನೂ ಬ್ಯಾಟಿಂಗ್ ಮಾಡುವ ಬ್ಯಾಟರ್ ಅನ್ನು ಬದಲಾಯಿಸಬಹುದು. ಆದರೆ, ಕೇವಲ 11 ಬ್ಯಾಟರ್ ಗಳು ಮಾತ್ರ ಬ್ಯಾಟಿಂಗ್ ಮಾಡಬಹುದು. ಅಂತೆಯೇ, ಅವರು ಕೆಲವು ಓವರ್ ಗಳನ್ನು ಬೌಲ್ ಮಾಡಿದ ಬೌಲರ್ ನ ಬದಲಿಗೆ ಬಂದು ನಾಲ್ಕು ಓವರ್ ಗಳ ಪೂರ್ಣ ಕೋಟಾ ಬೌಲಿಂಗ್ ಮಾಡಬಹುದು.