Advertisement

IPL 2025; ಹಾರ್ದಿಕ್‌ ಪಾಂಡ್ಯಗೆ ಗೇಟ್‌ ಪಾಸ್‌ ನೀಡಲು ಮುಂದಾದ ಮುಂಬೈ; ಏನಿದರ ಒಳಗುಟ್ಟು?

12:00 PM Aug 04, 2024 | Team Udayavani |

ಮುಂಬೈ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ ನ (IPL) ಯಶಸ್ವಿ ಫ್ರಾಂಚೈಸಿಗಳಲ್ಲಿ ಒಂದಾದ ಮುಂಬೈ ಇಂಡಿಯನ್ಸ್‌ (Mumbai Indians) ಕಳೆದ ಸೀಸನ್‌ ಗೆ ಮೊದಲು ನಾಯಕತ್ವ ಬದಲಾವಣೆ ಮಾಡಿ ಸಂಚಲನ ಮೂಡಿಸಿತ್ತು. ಗುಜರಾತ್‌ ಟೈಟಾನ್ಸ್‌ ನಲ್ಲಿದ್ದ ಹಾರ್ದಿಕ್‌ ಪಾಂಡ್ಯ (Hardik Pandya) ಅವರನ್ನು ಕರೆತಂದ ಮುಂಬೈ, ರೋಹಿತ್‌ ರನ್ನು ನಾಯಕತ್ವದಿಂದ ಕೆಳಕ್ಕಿಳಿಸಿತ್ತು. ಹಾರ್ದಿಕ್‌ ಪಾಂಡ್ಯಗೆ ನಾಯಕತ್ವ ನೀಡಿದ ನಿರ್ಧಾರ ಮುಂಬೈ ಇಂಡಿಯನ್ಸ್‌ ಗೆ ಭಾರಿ ಹಿನ್ನಡೆ ಉಂಟು ಮಾಡಿತ್ತು.

Advertisement

ಆದರೆ ಈ ವರ್ಷದ ಮೆಗಾ ಹರಾಜಿಗೆ ಮೊದಲು ಮುಂಬೈ ಇಂಡಿಯನ್ಸ್‌ ಮತ್ತೆ ನಾಯಕತ್ವ ಬದಲಾವಣೆಗೆ ಮುಂದಾಗಿದೆ ಎನ್ನುತ್ತಿದೆ ವರದಿ. ಅಷ್ಟೇ ಅಲ್ಲದೆ ಹಾರ್ದಿಕ್‌ ಪಾಂಡ್ಯ ಅವರನ್ನು ತಂಡದಿಂದಲೇ ಕೈ ಬಿಡಲು ಅಂಬಾನಿ ಒಡೆತನದ ಫ್ರಾಂಚೈಸಿ ಯೋಚಿಸುತ್ತಿದೆ ಎನ್ನಲಾಗಿದೆ.

ಟೀಂ ಇಂಡಿಯಾದ ಟಿ20 ತಂಡದ ನಾಯಕತ್ವ ಹಾರ್ದಿಕ್‌ ಪಾಂಡ್ಯ ಪಾಲಾಗಲಿದೆ ಎನ್ನಲಾಗಿತ್ತು. ಕಳೆದ ಟಿ20 ವಿಶ್ವಕಪ್‌ ನಲ್ಲೂ ಹಾರ್ದಿಕ್‌ ಉಪನಾಯಕರಾಗಿದ್ದರು. ಆದರೆ ನಂತರದ ಬೆಳವಣಿಗೆಯಲ್ಲಿ ಹಾರ್ದಿಕ್‌ ಬದಲಿಗೆ ಸೂರ್ಯಕುಮಾರ್‌ ಯಾದವ್‌ ಅವರಿಗೆ ಭಾರತದ ಟಿ20 ತಂಡದ ಚುಕ್ಕಾಣಿ ನೀಡಲಾಗಿದೆ.

ಇದೀಗ ಮುಂಬೈ ಇಂಡಿಯನ್ಸ್‌ ಕೂಡಾ ಸೂರ್ಯಕುಮಾರ್‌ ಯಾದವ್‌ ಅವರಿಗೆ ಪಟ್ಟ ಕಟ್ಟಲು ಮುಂದಾಗಿದೆ ಎನ್ನಲಾಗಿದೆ. ಕಳೆದ ಸೀಸನ್‌ ನಲ್ಲಿ ಅನಿರೀಕ್ಷಿತ ರೀತಿಯಲ್ಲಿ ತಂಡಕ್ಕೆ ಕರೆತಂದಿದ್ದ ಹಾರ್ದಿಕ್‌ ಪಾಂಡ್ಯ ಅವರನ್ನು ತಂಡದಿಂದಲೇ ಕೈಬಿಡಲು ಮುಂದಾಗಿದೆ ಎಂದು ವರದಿ ಹೇಳಿದೆ.

Advertisement

ಗುಜರಾತ್‌ ಟೈಟಾನ್ಸ್‌ ತಂಡ ರಚನೆಯಾದಾಗ ಹಾರ್ದಿಕ್‌ ಪಾಂಡ್ಯ ಅದರ ನಾಯಕತ್ವ ವಹಿಸಿದ್ದರು. ಚೊಚ್ಚಲ ಕೂಟದಲ್ಲಿಯೇ ಕಪ್‌ ಗೆದ್ದ ಗುಜರಾತ್‌ ಮುಂದಿನ ಸೀಸನ್‌ ನಲ್ಲಿ ಫೈನಲ್‌ ಪ್ರವೇಶ ಮಾಡಿತ್ತು. ಅದರ ಬಳಿಕ 2023ರ ನವೆಂಬರ್‌ ನಲ್ಲಿ ಅಚ್ಚರಿಯ ರೀತಿಯಲ್ಲಿ ಹಾರ್ದಿಕ್‌ ಮುಂಬೈಗೆ ಮರಳಿದ್ದರು, 2024ರ ಐಪಿಎಲ್‌ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಂತೆ ಐದು ಬಾರಿ ಕಪ್‌ ಗೆದ್ದ ನಾಯಕ ರೋಹಿತ್‌ ರನ್ನು ಕೆಳಕ್ಕಿಳಿಸಿ ಹಾರ್ದಿಕ್‌ ಗೆ ಪಟ್ಟ ಕಟ್ಟಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next