Advertisement

IPL 2024; ಟ್ರೆಂಡ್ ಆಗುತ್ತಿದೆ Come to RCB: ಅಷ್ಟಕ್ಕೂ ಎಲ್ಎಸ್ ಜಿ ತಂಡದಲ್ಲಿ ಆಗಿದ್ದೇನು?

02:20 PM May 09, 2024 | Team Udayavani |

ಹೈದರಾಬಾದ್: ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಬುಧವಾರ ನಡೆದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವು ಹೀನಾಯ ಸೋಲು ಕಂಡಿದೆ. ಹೈದರಾಬಾದ್ ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ತಂಡವು 165 ರನ್ ಗಳಿಸಿದರೆ, ಹೈದರಾಬದ್ ತಂಡವು ಕೇವಲ 9.4 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 167 ರನ್ ಗಳಿಸಿತು.

Advertisement

ಪಂದ್ಯದ ಬಳಿಕ ಎಲ್ಎಸ್ ಜಿ ಮಾಲಿಕ ಸಂಜೀವ ಗೋಯೆಂಕಾ ಅವರು ನಾಯಕ ಕೆಎಲ್ ರಾಹುಲ್ ಜೊತೆಗೆ ಮಾತನಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ತಂಡದ ಪ್ರದರ್ಶನದಿಂದ ಬೇಸರಗೊಂಡ ಗೋಯೆಂಕಾ ಅವರು ರಾಹುಲ್ ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವುದು ವಿಡಿಯೋದಲ್ಲಿ ಕಾಣಬಹುದು. ಈ ದೃಶ್ಯಗಳು ನೇರಪ್ರಸಾರದಲ್ಲಿ ಕಾಣಿಸಿಕೊಂಡಿದ್ದು, ಬಳಿಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಂಜೀವ್ ಗೋಯೆಂಕಾ ವರ್ತನೆಗೆ ಅಭಿಮಾನಿಗಳು ಗರಂ ಆಗಿದ್ದಾರೆ. ರಾಷ್ಟ್ರೀಯ ತಂಡದ ಆಟಗಾರನ ಜತೆಗೆ ಅವರು ಈ ರೀತಿ ವರ್ತಿಸಬಾರದು ಎಂದು ಸಾಮಾಜಿಕ ಜಾಲತಾಣಗಳು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಅಲ್ಲದೆ ಎಕ್ಸ್ ಜಾಲತಾಣ (ಈ ಹಿಂದಿನ ಟ್ಟಿಟರ್) ನಲ್ಲಿ Come to RCB ಎಂದು ಟ್ರೆಂಡ್ ಆಗುತ್ತಿದೆ. ಕನ್ನಡಿಗ ಕೆಎಲ್ ರಾಹುಲ್ ಅವರು ಮರಳಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬರಬೇಕು ಎಂದು ಅಭಿಮಾನಿಗಳು ಟ್ವೀಟ್ ಮಾಡಿ ಆಗ್ರಹಿಸುತ್ತಿದ್ದಾರೆ.

Advertisement

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ನಾಲ್ಕು ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿತು. ಮೊದಲ 10 ಓವರ್ ಗಳಲ್ಲಿ ಕೇವಲ 56 ರನ್ ಬಂದಿತ್ತು. ಬಳಿಕ ಆಯುಷ್ ಬದೋನಿ ಅಜೇಯ 55 ರನ್ ಮತ್ತು ಪೂರನ್ ಅಜೇಯ 48 ರನ್ ಸಹಾಯದಿಂದ ಗೌರವಯುತ ಮೊತ್ತ ಕಲೆ ಹಾಕಿತ್ತು.

ಆದರೆ ಗುರಿ ಬೆನ್ನಟ್ಟಿದ ಹೈದರಾಬಾದ್ ಆರಂಭಿಕರು ಸಿಕ್ಸರ್ ಬೌಂಡರಿಗಳ ಮಳೆಗೈದರು. ಹೆಡ್ 30 ಎಸೆತಗಳಲ್ಲಿ 80 ರನ್ ಮಾಡಿದರೆ, ಅಭಿಷೇಕ್ ಶರ್ಮಾ ಅವರು 28 ಎಸೆತಗಳಲ್ಲಿ 75 ರನ್ ಗಳಿಸಿದರು. ಎಸ್ ಆರ್ ಎಚ್ ಕೇವಲ 58 ಎಸೆತಗಳಲ್ಲಿ 167 ರನ್ ಚಚ್ಚಿತು.

Advertisement

Udayavani is now on Telegram. Click here to join our channel and stay updated with the latest news.

Next