Advertisement

IPL 2024; ಮುಂಬೈ ಇಂಡಿಯನ್ಸ್ ಗೆ ಶಾಕ್; ಹೊಸ ನಾಯಕ ಹಾರ್ದಿಕ್ ಐಪಿಎಲ್ ಆಡುವುದೇ ಡೌಟು!

04:37 PM Dec 23, 2023 | Team Udayavani |

ಮುಂಬೈ: ಐಪಿಎಲ್ ನ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾದ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಈ ಬಾರಿ ನಾಯಕನ ಬದಲಾವಣೆ ಮಾಡಿ ಸುದ್ದಿಯಾಗಿತ್ತು. ಹತ್ತು ವರ್ಷದಿಂದ ನಾಯಕನಾಗಿದ್ದ ರೋಹಿತ್ ಶರ್ಮಾ ಅವರ ಬದಲು ಹಾರ್ದಿಕ್ ಪಾಂಡ್ಯ ಅವರನ್ನು ನೇಮಿಸಿದೆ.

Advertisement

ಗುಜರಾತ್ ಟೈಟಾನ್ಸ್ ತಂಡದ ನಾಯಕನಾಗಿದ್ದ ಹಾರ್ದಿಕ್ ರನ್ನು ಕರೆತಂದು ನಾಯಕತ್ವ ನೀಡಿದ್ದು ಹಲವು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿತ್ತು.

ಇದೀಗ ಮುಂಬೈ ಇಂಡಿಯನ್ಸ್ ತಂಡಕ್ಕೆ ಆಘಾತ ನೀಡುವ ಸುದ್ದಿಯೊಂದು ಹೊರಬಿದ್ದಿದೆ. ಪಾದದ ಗಾಯಕ್ಕೆ ತುತ್ತಾಗಿರುವ ಹಾರ್ದಿಕ್ ಅವರು ಇನ್ನೂ ಚೇತರಿಸಿಕೊಂಡಿಲ್ಲ ಹಾರ್ದಿಕ್ ಪಾಂಡ್ಯ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸೀಸನ್‌ನಿಂದ ಹೊರಗುಳಿಯಬಹುದು ಎಂದು ಎನ್‌ಡಿಟಿವಿ  ವರದಿ ಮಾಡಿದೆ.

ವಿಶ್ವಕಪ್ ನ ಬಾಂಗ್ಲಾದೇಶ ವಿರುದ್ಧದ ಪಂದ್ಯದ ವೇಳೆ ಹಾರ್ದಿಕ್ ಪಾಂಡ್ಯ ಅವರು ಬೌಲಿಂಗ್ ಮಾಡುತ್ತಿದ್ದಾಗ ನೋವಿಗೆ ತುತ್ತಾಗಿದ್ದರು.

ಹಾರ್ದಿಕ್ ಪಾಂಡ್ಯ ಅವರು ಮುಂಬರುವ ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯನ್ನು ಕಳೆದುಕೊಳ್ಳಲಿದ್ದಾರೆ ಎಂದು ಮೂಲಗಳು ದೃಢಪಡಿಸಿದ್ದಾರೆ, ಆದರೆ ಮುಂಬರುವ ಐಪಿಎಲ್ ಋತುವಿನಲ್ಲಿ ಅವರು ಭಾಗವಹಿಸುವುದು ಅನುಮಾನವಾಗಿಯೇ ಉಳಿದಿದೆ ಎಂದು ಎನ್ ಡಿಟಿವಿ ವರದಿ ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next