Advertisement

IPL 2024; ಮೊದಲ ಪಂದ್ಯದಲ್ಲಿ ಆರ್ ಸಿಬಿಗೆ ಸೋಲಿನ ಶಾಕ್: ತವರಿನಲ್ಲಿ ಚೆನ್ನೈ ಮೇಲುಗೈ

12:00 AM Mar 23, 2024 | Team Udayavani |

ಚೆನ್ನೈ: ಇಲ್ಲಿನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಐಪಿಎಲ್ 2024 ಸರಣಿಗೆ ಶುಕ್ರವಾರ (ಮಾರ್ಚ್ 22) ಅದ್ದೂರಿ ಚಾಲನೆ ನೀಡಲಾಯಿತು. ಮೊದಲ ಮುಖಾಮುಖಿಯಲ್ಲಿ ತವರಿನಲ್ಲಿ ಮೇಲುಗೈ ಸಾಧಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ  6 ವಿಕೆಟ್ ಜಯ ಸಾಧಿಸಿ ಆರ್ ಸಿಬಿಗೆ ಸೋಲಿನ ಶಾಕ್ ನೀಡಿ ಅಭಿಯಾನ ಆರಂಭಿಸಿದೆ.

Advertisement

ಟಾಸ್ ಗೆದ್ದ ಆರ್ ಸಿಬಿ ತಂಡ ಚೆನ್ನೈ ಸೂಪರ್ ಕಿಂಗ್ಸ್ ಗೆ ಗೆಲ್ಲಲು 174 ರನ್ ಗಳ ಗುರಿ ಮುಂದಿಟ್ಟಿತು. ಗುರಿ ಬೆನ್ನಟ್ಟಿದ ಚೆನ್ನೈ 18.4 ಓವರ್ ನಲ್ಲಿ 4 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿ ಜಯ ಸಾಧಿಸಿತು.

ರಚಿನ್ ರವೀಂದ್ರ 15 ಎಸೆತಗಳಲ್ಲಿ 37 ರನ್ ಗಳಿಸಿ ಮಿಂಚಿದರು. ರುತುರಾಜ್ ಗಾಯಕ್ವಾಡ್ 15, ಅಜಿಂಕ್ಯ ರಹಾನೆ 27, ಡೇರಿಲ್ ಮಿಚೆಲ್ 22 ರನ್ ಗಳಿಸಿ ಔಟಾದರು. ಶಿವಂ ದುಬೆ34 ,ರವೀಂದ್ರ ಜಡೇಜ 25 ರನ್ ಗಳಿಸಿ ಔಟಾಗದೆ ಉಳಿದರು.

ಇದನ್ನೂ ಓದಿ: IPL: ನೆರವಾದ ಅನುಜ್, ಕಾರ್ತಿಕ್ :ಚೆನ್ನೈ ಗೆ 174 ರನ್ ಗುರಿ ನೀಡಿದ ಆರ್ ಸಿಬಿ

Advertisement

Udayavani is now on Telegram. Click here to join our channel and stay updated with the latest news.

Next