Advertisement

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

10:38 PM Apr 23, 2024 | Team Udayavani |

ಜೈಪುರ: ಲೆಗ್‌ಸ್ಪಿನ್ನರ್‌ ಯಜುವೇಂದ್ರ ಚಹಲ್‌ ಐಪಿಎಲ್‌ನಲ್ಲಿ ನೂತನ ಮೈಲುಗಲ್ಲು ನೆಟ್ಟಿದ್ದಾರೆ. 200 ವಿಕೆಟ್‌ ಉರುಳಿಸಿದ ಮೊದಲ ಬೌಲರ್‌ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

Advertisement

ಸೋಮವಾರ ನಡೆದ ಮುಂಬೈ ಎದುರಿನ ಪಂದ್ಯದಲ್ಲಿ ಮೊಹಮ್ಮದ್‌ ನಬಿ ಅವರನ್ನು ಕಾಟ್‌ ಆ್ಯಂಡ್‌ ಬೌಲ್ಡ್‌ ಮಾಡುವ ಮೂಲಕ ಚಹಲ್‌ ಈ ಸಾಧನೆಗೈದರು.

ಇದು ಚಹಲ್‌ ಅವರ 153ನೇ ಪಂದ್ಯದ 152ನೇ ಇನ್ನಿಂಗ್ಸ್‌. ಡ್ವೇನ್‌ ಬ್ರಾವೊ 2ನೇ ಸ್ಥಾನದಲ್ಲಿದ್ದಾರೆ (183). ಸಮಕಾಲೀನ ಕ್ರಿಕೆಟಿಗರಲ್ಲಿ ಚಹಲ್‌ ಬಳಿಕ ಕಾಣಿಸಿಕೊಳ್ಳುವ ಬೌಲಿಂಗ್‌ ಸಾಧಕ ಪೀಯೂಷ್‌ ಚಾವ್ಲಾ (182 ವಿಕೆಟ್‌).

 3 ಸೀಸನ್‌, ಒಂದೇ ಪಂದ್ಯ!

2011ರಲ್ಲಿ ಮುಂಬೈ ಇಂಡಿಯನ್ಸ್‌ ಸೇರಿಕೊಂಡ ಚಹಲ್‌ ತಮ್ಮ ಮೊದಲ 3 ಐಪಿಎಲ್‌ ಸೀಸನ್‌ಗಳಲ್ಲಿ ಆಡಿದ್ದು ಕೇವಲ ಒಂದು ಪಂದ್ಯ! 2014ರಲ್ಲಿ 10 ಲಕ್ಷ ರೂ. ಮೊತ್ತಕ್ಕೆ ಆರ್‌ಸಿಬಿ ಪಾಲಾದ ಬಳಿಕ ಇವರ ದೆಸೆ ಬದಲಾಯಿತು. 8 ವರ್ಷಗಳ ಕಾಲ ಬೆಂಗಳೂರು ಫ್ರಾಂಚೈಸಿ ಪರ ಆಡಿ 139 ವಿಕೆಟ್‌ ಕೆಡವಿದ ಹೆಗ್ಗಳಿಕೆಗೆ ಪಾತ್ರರಾದರು. ಈ ಸಾಧನೆಯಿಂದಲೇ ಚಹಲ್‌ ಭಾರತ “ಎ’ ಹಾಗೂ ಟೀಮ್‌ ಇಂಡಿಯಾ ಪ್ರವೇಶಿಸುವಲ್ಲಿ ಯಶಸ್ವಿಯಾದರು.

Advertisement

ಆರ್‌ಸಿಬಿಗೆ ಬೇಡವಾದರು

2021ರಲ್ಲಿ ಆರ್‌ಸಿಬಿ ಪರ 15 ಪಂದ್ಯಗಳಿಂದ 18 ವಿಕೆಟ್‌ ಕೆಡವಿದರೂ ಚಹಲ್‌ಗೆ ಲಾಭವಾಗಲಿಲ್ಲ. ಅವರನ್ನು ರಿಲೀಸ್‌ ಮಾಡುವ ನಿರ್ಧಾರಕ್ಕೆ ಆರ್‌ಸಿಬಿ ಮುಂದಾಯಿತು. 2022ರ ಮೆಗಾ ಹರಾಜಿನ ವೇಳೆ ಇವರ ಪರ ಬಿಡ್‌ ಕೂಡ ಕೂಗಲಿಲ್ಲ. ಚಹಲ್‌ 6.5 ಕೋಟಿ ರೂ. ಮೊತ್ತಕ್ಕೆ ರಾಜಸ್ಥಾನ್‌ ರಾಯಲ್ಸ್‌ ಸೇರಿಕೊಂಡರು. 2022ರಲ್ಲಿ 27 ವಿಕೆಟ್‌ ಕೆಡವಿ ಆಯ್ಕೆಯನ್ನು ಸಮರ್ಥಿಸಿಕೊಂಡರು. 2023ರಲ್ಲಿ 21 ವಿಕೆಟ್‌ ಕೆಡವಿದರು. ಈ ಬಾರಿ ಈಗಾಗಲೇ 13 ವಿಕೆಟ್‌ ಉರುಳಿಸಿದ್ದಾರೆ.

2023ರ ಏಕದಿನ ವಿಶ್ವಕಪ್‌ ವೇಳೆ ಟೀಮ್‌ ಇಂಡಿಯಾದಿಂದ ಬೇರ್ಪಟ್ಟ ಚಹಲ್‌ಗೆ ಐಪಿಎಲ್‌ ಸಾಧನೆ ಬ್ರೇಕ್‌ ಒದಗಿಸೀತೇ ಎಂಬುದೊಂದು ನಿರೀಕ್ಷೆ.

Advertisement

Udayavani is now on Telegram. Click here to join our channel and stay updated with the latest news.

Next