ಮುಂಬೈ: ಇನ್ನು ಕೆಲವೇ ದಿನಗಳಲ್ಲಿ ಐಪಿಎಲ್ 2024ರ ಮಿನಿ ಹರಾಜು ನಡೆಯಲಿದೆ. ಈ ಬಾರಿ ತಂಡದಿಂದ ಹೊರಬಿದ್ದ ಆಟಗಾರರು ಮತ್ತು ಕೆಲ ಹೊಸ ಆಟಗಾರರು ಹರಾಜು ಟೇಬಲ್ ನಲ್ಲಿ ತಮ್ಮ ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ. ಡಿಸೆಂಬರ್ 19ರಂದು ದುಬೈನಲ್ಲಿ ಈ ಬಾರಿಯ ಮಿನಿ ಹರಾಜು ನಡೆಯಲಿದೆ.
ಆಸ್ಟ್ರೇಲಿಯಾದ ವಿಶ್ವಕಪ್ ಹೀರೋಗಳಾದ ಟ್ರಾವಿಸ್ ಹೆಡ್, ಪ್ಯಾಟ್ ಕಮಿನ್ಸ್ ಮತ್ತು ಮಿಚೆಲ್ ಸ್ಟಾರ್ಕ್ ಅವರು ಎರಡು ಕೋಟಿ ರೂ ಮೂಲ ಬೆಲೆಯೊಂದಿಗೆ ಹರಾಜಿಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ.
ಹರಾಜಿನಲ್ಲಿ ನೋಂದಾಯಿಸಿಕೊಂಡಿರುವ 1166 ಆಟಗಾರರ ಪಟ್ಟಿಯನ್ನು ಫ್ರಾಂಚೈಸಿಗಳಿಗೆ ಕಳುಹಿಸಲಾಗಿದೆ. ಸದ್ಯ ಹತ್ತು ತಂಡಗಳಲ್ಲಿ 77 ಖಾಲಿ ಜಾಗಗಳಿವೆ. ಅದರಲ್ಲಿ 30 ವಿದೇಶಿ ಆಟಗಾರರಿಗೆ ಅವಕಾಶವಿದೆ. 10 ತಂಡಗಳು ಒಟ್ಟಾಗಿ 262.95 ಕೋಟಿ ರೂ ಖರ್ಚು ಮಾಡಬಹುದಾಗಿದೆ.
ನ್ಯೂಜಿಲ್ಯಾಂಡ್ ನ ಇತ್ತೀಚಿನ ಸೆನ್ಸೇಶನ್ ರಚಿನ್ ರವೀಂದ್ರ ಅವರು ವಿಶ್ವಕಪ್ ನಲ್ಲಿ ತಮ್ಮ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆಯುವಂತೆ ಮಾಡಿದರು, ಆದರೆ ಅವರು 50 ಲಕ್ಷ ರೂ ಮೂಲಬೆಲೆಗೆ ತಮ್ಮ ಹೆಸರು ನಮೂದಿಸಿದ್ದಾರೆ. ಆದರೆ ಅವರು ತಮ್ಮ ಮೂಲ ಬೆಲೆಗಿಂತ ಕನಿಷ್ಠ 15 ಅಥವಾ 20 ಪಟ್ಟು ಹೆಚ್ಚು ಪಡೆಯಬಹುದು ಎಂದು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ:Animal ಸಿನಿಮಾದಲ್ಲಿ ನಗ್ನವಾಗಿ ಕಾಣಿಸಿಕೊಂಡ ರಣ್ಬೀರ್ ಕಪೂರ್; ವಿಡಿಯೋ ವೈರಲ್
ಆರ್ ಸಿಬಿ ತಂಡದಿಂದ ಬೇರ್ಪಟ್ಟ ಹರ್ಷಲ್ ಪಟೇಲ್, ಆಲ್ ರೌಂಡರ್ ಕೇದಾರ್ ಜಾಧವ್ ಮತ್ತು ಬೌಲರ್ ಉಮೇಶ್ ಯಾದವ್ ಅವರು ತಮ್ಮ ಮೂಲಬೆಲೆಯನ್ನು ಎರಡು ಕೋಟಿ ರೂ ಗೆ ನಿಗದಿ ಪಡಿಸಲಾಗಿದೆ.
ಇತ್ತೀಚೆಗಷ್ಟೇ ಭಾರತದ ವಿರುದ್ಧ ಚೊಚ್ಚಲ ಟಿ20 ಶತಕ ಸಿಡಿಸಿದ ಜೋಸ್ ಇಂಗ್ಲಿಸ್, ಮಾಜಿ ನಾಯಕ ಸ್ಟೀವ್ ಸ್ಮಿತ್ ಮತ್ತು ವೇಗಿ ಜೋಶ್ ಹ್ಯಾಜಲ್‌ವುಡ್, ದಕ್ಷಿಣ ಆಫ್ರಿಕಾದ ಹೊಸ ವೇಗದ ಬೌಲಿಂಗ್ ಸೆನ್ಸೇಶನ್ ಜೆರಾಲ್ಡ್ ಕೊಯೆಟ್ಜಿ, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಅವರಿಗೂ ಉತ್ತಮ ಡಿಮ್ಯಾಂಡ್ ಬರಬಹುದು.
ವಿಶ್ವದ ಅಗ್ರ ಟಿ20 ಸ್ಪಿನ್ನರ್ ಗಳಲ್ಲಿ ಒಬ್ಬರಾದ ವಾನಿಂದು ಹಸರಂಗ ಅವರು 1.5 ಕೋಟಿ ಪಟ್ಟಿಯಲ್ಲಿದ್ದಾರೆ.