Advertisement
ಮುಂಬೈ ಇಂಡಿಯನ್ಸ್‌ಗೆ ಇದು ಎರಡನೇ ಮುಖಾಮುಖೀ. ಬೆಂಗಳೂ ರಿನ ಮೊದಲ ಪಂದ್ಯದಲ್ಲಿ ಅದು ಆರ್‌ಸಿಬಿಗೆ 8 ವಿಕೆಟ್‌ಗಳಿಂದ ಶರಣಾಗಿತ್ತು. 5 ದಿನಗಳ ಸುದೀರ್ಘ ವಿರಾಮದ ಬಳಿಕ ದ್ವಿತೀಯ ಪಂದ್ಯವನ್ನು ಆಡಲಿಳಿಯುತ್ತಿದೆ.
“ವಾಂಖೇಡೆ’ ಸಣ್ಣ ಅಂಗಳ. ದೊಡ್ಡ ಹೊಡೆತಗಳನ್ನು ಸರಾಗ ವಾಗಿ ಬಾರಿಸಬಹುದು. ಹೀಗಾಗಿ ಜೋಫ್ರಾ ಆರ್ಚರ್, ಅರ್ಷದ್ ಖಾನ್, ಬೆಹ್ರೆಂಡಾರ್ಫ್ ಹಿಡಿತ ಸಾಧಿಸುವುದು ಮುಖ್ಯ. ಬೆಂಗಳೂರು ಪಂದ್ಯದಲ್ಲಿ ಇವರೆಲ್ಲ ಚೆನ್ನಾಗಿ ದಂಡಿಸಿಕೊಂಡಿದ್ದರು. ಬ್ಯಾಟಿಂಗ್‌ನಲ್ಲಿ ಕ್ಲಿಕ್ ಆದವರು ತಿಲಕ್ ವರ್ಮ ಮಾತ್ರ. ರೋಹಿತ್, ಇಶಾನ್ ಕಿಶನ್, ಗ್ರೀನ್, ಸೂರ್ಯ ಕುಮಾರ್ ಅವರದೆಲ್ಲ ಸಾಲು ಸಾಲು ವೈಫಲ್ಯವಾಗಿತ್ತು. ಹೀಗಾಗಿ ತವರಿನಂಗಳದ ಪಂದ್ಯವಾದರೂ ಮುಂಬೈ ಮೇಲೆ ಒತ್ತಡ ತಪ್ಪಿದ್ದಲ್ಲ.
2013ರಿಂದೀಚೆ ತನ್ನ ಆರಂಭಿಕ ಪಂದ್ಯವನ್ನು ಕಳೆದುಕೊಳ್ಳುತ್ತ ಬಂದ ದಾಖಲೆ ಹೊಂದಿರುವ ಮುಂಬೈ, ಅನಂತರ ದಾಖಲೆ ಸಂಖ್ಯೆಯ ಕಪ್ ಎತ್ತಿರುವುದನ್ನು ಮರೆಯುವಂತಿಲ್ಲ. ಈ ಬಾರಿಯ ಗೆಲುವನ್ನು ತವರಿನ ವಾಂಖೇಡೆಯಲ್ಲೇ ದಾಖಲಿಸಬೇಕೆಂಬ ಹಂಬಲ ರೋಹಿತ್ ಬಳಗದ್ದು.
Related Articles
Advertisement
ಚೆನ್ನೈ ಸೂಪರ್ ಕಿಂಗ್ಸ್ ಆರಂಭಿಕರನ್ನು ಅತಿಯಾಗಿ ನೆಚ್ಚಿಕೊಂಡಿರುವ ತಂಡ. ರುತುರಾಜ್ ಗಾಯಕ್ವಾಡ್ ಎರಡೂ ಪಂದ್ಯಗಳಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿ ಎದುರಾಳಿ ಬೌಲರ್‌ಗಳನ್ನು ನಡೆಸಿದ್ದರು. ಡೇವನ್ ಕಾನ್ವೇ ಗುಜರಾತ್ ವಿರುದ್ಧ ಒಂದೇ ರನ್ ಗಳಿಸಿದರೂ ಲಕ್ನೋ ವಿರುದ್ಧ ಲಯಕ್ಕೆ ಮರಳಿದ್ದರು.ಧೋನಿ ಪಡೆಯ ಮಧ್ಯಮ ಕ್ರಮಾಂಕ ಇನ್ನೂ ಪೂರ್ಣ ಪ್ರಮಾಣ ದಲ್ಲಿ ಸಾಮರ್ಥ್ಯ ತೋರಿಲ್ಲ. ಶಿವಂ ದುಬೆ, ಮೊಯಿನ್ ಅಲಿ, ಬೆನ್ ಸ್ಟೋಕ್ಸ್, ಅಂಬಾಟಿ ರಾಯುಡು, ರವೀಂದ್ರ ಜಡೇಜ ಜಬರ್ದಸ್ತ್ ಪ್ರದರ್ಶನ ತೋರಿಲ್ಲ. ಬೌಲಿಂಗ್ ವಿಭಾಗಕ್ಕೆ ಧೋನಿ ಈಗಾಗಲೇ ಬಲವಾದ ಎಚ್ಚರಿಕೆ ನೀಡಿ ದ್ದಾರೆ. ಚಹರ್, ದೇಶಪಾಂಡೆ, ಸ್ಟೋಕ್ಸ್, ಸ್ಯಾಂಟ್ನರ್, ಅಲಿ, ಹಂಗಗೇಕರ್ ಮೇಲೆ ಇದು ಎಷ್ಟರ ಮಟ್ಟಿಗೆ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕು.