Advertisement
ಗುಜರಾತ್ ಮತ್ತು ರಾಜಸ್ಥಾನ್ ಈ ಹಿಂದಿನ ಪಂದ್ಯದಲ್ಲಿ ಸೋಲನ್ನು ಕಂಡಿತ್ತು. ಇದೀಗ ಗೆಲುವಿನ ಟ್ರ್ಯಾಕ್‌ಗೆ ಮರಳಲು ಬಯಸುತ್ತಿದೆ. ಡೆಲ್ಲಿ ವಿರುದ್ಧ 5 ರನ್ನುಗಳಿಂದ ಸೋತಿದ್ದ ಗುಜರಾತ್ ಸದ್ಯ 12 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. 10 ಅಂಕ ಗಳಿಸಿರುವ ರಾಜಸ್ಥಾನ್ ನಾಲ್ಕನೇ ಸ್ಥಾನದಲ್ಲಿದೆ. ಒಂದು ವೇಳೆ ರಾಜಸ್ಥಾನ ಶುಕ್ರವಾರದ ಪಂದ್ಯದಲ್ಲಿ ಗೆದ್ದರೆ ಉತ್ತಮ ರನ್‌ಧಾರಣೆಯ ಆಧಾರದಲ್ಲಿ ಅಗ್ರಸ್ಥಾನ ಕ್ಕೇರುವ ಸಾಧ್ಯತೆಯಿದೆ.
ರಾಜಸ್ಥಾನ್ ಈ ಹಿಂದಿನ ಪಂದ್ಯ ದಲ್ಲಿ ಮುಂಬೈ ವಿರುದ್ಧ 7 ವಿಕೆಟಿಗೆ 212 ರನ್ನುಗಳ ಬೃಹತ್ ಮೊತ್ತ ಪೇರಿ ಸಿಯೂ ಬೌಲಿಂಗ್ ವಿಭಾಗದಲ್ಲಿನ ವೈಫಲ್ಯದಿಂದಾಗಿ ಆರು ವಿಕೆಟ್‌ಗಳಿಂದ ಸೋಲನ್ನು ಕಂಡಿತ್ತು. ವೇಗಿಗಳಾದ ಟ್ರೆಂಟ್ ಬೌಲ್ಟ್, ಆಲ್‌ರೌಂಡರ್ ಹೋಲ್ಡರ್, ಚಹಲ್ ಮತ್ತು ಕುಲದೀಪ್ ಸೆನ್ ದುಬಾರಿಯಾಗಿದ್ದರು. ಇದರಿಂದ ಮುಂಬೈ 4 ವಿಕೆಟಿಗೆ 214 ರನ್ ಗಳಿಸಿ ಜಯಭೇರಿ ಬಾರಿಸಿತ್ತು. ಗೆಲುವಿನ ಖುಷಿ
ಮೊದಲ ಸುತ್ತಿನ ಹೋರಾಟದಲ್ಲಿ ರಾಜಸ್ಥಾನ್ ತಂಡವು ಗುಜರಾತ್ ತಂಡ ವನ್ನು 3 ವಿಕೆಟ್‌ಗಳಿಂದ ಸೋಲಿಸಿದ ಉತ್ಸಾಹದಲ್ಲಿದೆ. ಆ ಪಂದ್ಯದಲ್ಲಿ ಗುಜ ರಾತ್ ಮೊದಲು ಬ್ಯಾಟಿಂಗ್ ನಡೆಸಿ 7 ವಿಕೆಟಿಗೆ 177 ರನ್ ಗಳಿಸಿತ್ತು. ಇದಕ್ಕುತ್ತರವಾಗಿ ಸಂಜು ಸ್ಯಾಮ್ಸನ್ ಮತ್ತು ಹೆಟ್‌ಮೈರ್ ಅವರ ಉಪಯುಕ್ತ ಆಟದಿಂದಾಗಿ ರಾಜಸ್ಥಾನ್ 7 ವಿಕೆಟಿಗೆ 179 ರನ್ ಗಳಿಸಿ ಗೆಲುವು ಸಾಧಿಸಿತ್ತು.
Related Articles
Advertisement
ಇದೇ ವೇಳೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೂ ಗುಜರಾತ್ ಡೆಲ್ಲಿ ವಿರುದ್ಧ 130 ರನ್ನುಗಳ ಗುರಿ ಯನ್ನು ತಲುಪಲು ವಿಫಲವಾಗಿ ತನ್ನ ಬ್ಯಾಟಿಂಗ್ ವೈಫಲ್ಯವನ್ನು ಬಹಿರಂಗ ಗೊಳಿಸಿತ್ತು. ಫಾರ್ಮ್ನಲ್ಲಿದ್ದ ಗಿಲ್, ಡೇವಿಡ್ ಮಿಲ್ಲರ್ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿದ್ದರು. 32 ರನ್ ಗಳಿಸುವಷ್ಟರಲ್ಲಿ ತಂಡ ನಾಲ್ಕು ವಿಕೆಟ್ ಕಳೆದುಕೊಂಡು ಒದ್ದಾಡು ತ್ತಿತ್ತು. ನಾಯಕ ಹಾರ್ದಿಕ್ ಪಾಂಡ್ಯ ಏಕಾಂಗಿಯಾಗಿ ಹೋರಾಡಿದರೂ ತಂಡಕ್ಕೆ ಗೆಲುವು ದೊರಕಿಸಿಕೊಡಲು ಅಸಮರ್ಥರಾಗಿದ್ದರು.