Advertisement

ಐಪಿಎಲ್‌-2023: ಧೋನಿ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಚೆನ್ನೈ ಸೂಪರ್ ಕಿಂಗ್ಸ್‌

11:58 PM Sep 04, 2022 | Team Udayavani |

ಹೊಸದಿಲ್ಲಿ: ಐಪಿಎಲ್‌ ಮತ್ತು ಧೋನಿ ಅಭಿಮಾನಿಗಳ ಪಾಲಿನ ಸಿಹಿ ಸುದ್ದಿಯೊಂದು ಬಿತ್ತರಗೊಂಡಿದೆ. 2023ರ ಐಪಿಎಲ್‌ ಋತುವಿನಲ್ಲಿ ಮಹೇಂದ್ರ ಸಿಂಗ್‌ ಧೋನಿ ಅವರೇ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಮುನ್ನಡೆಸುವುದು ಖಾತ್ರಿ ಯಾಗಿದೆ. ಸಿಎಸ್‌ಕೆ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕಾಶಿ ವಿಶ್ವನಾಥನ್‌ ರವಿವಾರ ಪ್ರಕಟಿಸಿದರು.

Advertisement

“ಅನುಮಾನ ಬೇಡ. ಮುಂದಿನ ವರ್ಷದ ಮೊದಲ ಪಂದ್ಯದ ವೇಳೆ ಧೋನಿ ಅವರೇ ಟಾಸ್‌ ಹಾರಿಸಲು ತೆರಳುವರು’ ಎಂಬುದಾಗಿ ವಿಶ್ವನಾಥನ್‌ ಹೇಳಿದರು.

ಇದರೊಂದಿಗೆ ಧೋನಿ ಅವರ ಐಪಿಎಲ್‌ ವಿದಾಯ ಕುರಿತ ಸುದ್ದಿಗೂ ತೆರೆ ಬಿದ್ದಂತಾಗಿದೆ. ಆದರೆ ಆಲ್‌ರೌಂಡರ್‌ ರವೀಂದ್ರ ಜಡೇಜ ಚೆನ್ನೈ ತಂಡದ ಪರ ಆಡುವರೋ ಇಲ್ಲವೋ ಎಂಬುದನ್ನು ಅವರು ತಿಳಿಸಲಿಲ್ಲ. ಕಳೆದ ಸೀಸನ್‌ನಲ್ಲಿ ಜಡೇಜ ಅವರ ನಾಯಕತ್ವದ ವೈಫ‌ಲ್ಯದ ಬಳಿಕ ಧೋನಿ ಮರಳಿ ಚೆನ್ನೈ ಸಾರಥ್ಯ ವಹಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಧೋನಿ ನಾಯಕತ್ವದಲ್ಲಿ “ಯೆಲ್ಲೋ ಆರ್ಮಿ’ ಚೆನ್ನೈ ಐಪಿಎಲ್‌ನ ಅತ್ಯಂತ ಯಶಸ್ವಿ ತಂಡವಾಗಿ ಮೂಡಿಬಂದಿತ್ತು. 4 ಸಲ ಕಿರೀಟ ಏರಿಸಿಕೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next