Advertisement
ನ. 15ರ ಒಳಗಾಗಿ ಫ್ರಾಂಚೈಸಿಗಳು ತಾವು ಉಳಿಸಿಕೊಳ್ಳುವ ಹಾಗೂ ಬಿಡುಗಡೆ ಮಾಡಲಿರುವ ಆಟಗಾರರ ಯಾದಿಯನ್ನು ಪ್ರಕಟಿಸುವಂತೆ ಸೂಚಿಸಲಾಗಿದೆ. ಇದರಂತೆ ಆರ್‌ಸಿಬಿ ನಾಲ್ವರು ಆಟಗಾರರನ್ನು ಕೈಬಿಟ್ಟ ಬಗ್ಗೆ ಮಾಹಿತಿ ಲಭಿಸಿದೆ.
Related Articles
ವೆಸ್ಟ್ ಇಂಡೀಸ್‌ನ ಬಿಗ್ ಹಿಟ್ಟರ್ ಕೈರನ್ ಪೊಲಾರ್ಡ್ ಅವರನ್ನು ಮುಂಬೈ ಇಂಡಿಯನ್ಸ್ ಬಿಡುಗಡೆ ಮಾಡಿರುವುದು ಅಚ್ಚರಿ ಎನಿಸಿದೆ. ಇವರ ಜತೆಯಲ್ಲೇ ಫ್ಯಾಬಿಯನ್ ಅಲೆನ್, ಟೈಮಲ್ ಮಿಲ್ಸ್, ಮಾಯಾಂಕ್ ಮಾರ್ಕಂಡೆ, ಹೃತಿಕ್ ಶೋಕಿನ್ ಕೂಡ ಮುಂಬೈ ತಂಡದಿಂದ ಬೇರ್ಪಟ್ಟಿದ್ದಾರೆ.
Advertisement
ಡೆಲ್ಲಿ ಕ್ಯಾಪಿಟಲ್ಸ್‌ನಿಂದ ಬಿಡುಗಡೆಗೊಂಡ ಕ್ರಿಕೆಟಿಗರೆಂದರೆ ಶಾರ್ದೂಲ್ ಠಾಕೂರ್, ಟಿಮ್ ಸೀಫರ್ಟ್, ಕೆ.ಎಸ್. ಭರತ್, ಮನ್‌ದೀಪ್ ಸಿಂಗ್ ಮತ್ತು ಅಶ್ವಿನ್ ಹೆಬ್ಟಾರ್.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಯಾದಿ ಕೂಡ ಪ್ರಕಟಗೊಂಡಿದೆ. ಟಿ20 ವಿಶ್ವಕಪ್‌ನಲ್ಲಿ ಮಿಂಚಿದ ಕ್ರಿಸ್ ಜೋರ್ಡನ್ ಅವರನ್ನು ಕೈಬಿಟ್ಟಿರುವುದೊಂದು ಅಚ್ಚರಿ. ಆ್ಯಡಂ ಮಿಲೆ°, ಎನ್. ಜಗದೀಶನ್, ಮಿಚೆಲ್ ಸ್ಯಾಂಟ್ನರ್ ಅವರೆಲ್ಲ ಚೆನ್ನೈ ತಂಡ ತೊರೆಯಲಿರುವ ಇತರರು.
ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡದಿಂದ ವಿಜಯ್ ಶಂಕರ್, ಮ್ಯಾಥ್ಯೂ ವೇಡ್, ಗುರುಕೀರತ್ ಸಿಂಗ್ ಮಾನ್, ಜಯಂತ್ ಯಾದವ್, ಪ್ರದೀಪ್ ಸಂಗ್ವಾನ್, ಸಾಯಿ ಕಿಶೋರ್, ನೂರ್ ಅಹ್ಮದ್ ಮತ್ತು ವರುಣ್ ಆರೋನ್ ಬೇರ್ಪಟ್ಟಿದ್ದಾರೆ.