Advertisement

ಇಂದು ಐಪಿಎಲ್‌ನ 150ನೇ ಪಂದ್ಯ ಆಡಲಿರುವ ರವೀಂದ್ರ ಜಡೇಜ

12:39 AM Apr 09, 2022 | Team Udayavani |

ಮುಂಬಯಿ: ಚೆನ್ನೈ ಸೂಪರ್‌ ಕಿಂಗ್ಸ್‌ ನಾಯಕ ರವೀಂದ್ರ ಜಡೇಜ ಅವರು ಐಪಿಎಲ್‌ನಲ್ಲಿ ಇನ್ನೊಂದು ಮೈಲುಗಲ್ಲು ಸ್ಥಾಪಿಸಲಿದ್ದಾರೆ.

Advertisement

ಶನಿವಾರ ಸನ್‌ರೈಸರ್ ಹೈದರಾಬಾದ್‌ ತಂಡವನ್ನು ಚೆನ್ನೈ ತಂಡ ಎದುರಿಸಲಿದೆ. ಇದು ಜಡೇಜ ಪಾಲಿಗೆ ಐಪಿಎಲ್‌ನ 150ನೇ ಪಂದ್ಯವಾಗಲಿದೆ.

ಚೆನ್ನೈ ತಂಡದ ಮಾಜಿ ನಾಯಕ ಎಂ.ಎಸ್‌. ಧೋನಿ (217) ಮತ್ತು ಸುರೇಶ್‌ ರೈನಾ (200) ಮಾತ್ರ 200 ಪ್ಲಸ್‌ ಪಂದ್ಯಗಳಲ್ಲಿ ಆಡಿದ ಆಟಗಾರರಾಗಿದ್ದಾರೆ.

2012ರಿಂದ ಚೆನ್ನೈ ಪರ ಆಡುತ್ತಿರುವ ಜಡೇಜ ಅವರು ತಂಡದ ಆಲ್‌ರೌಂಡರ್‌ ಆಗಿ ಕಾಣಿಸಿಕೊಂಡಿದ್ದಾರೆ. ಆಡಿದ 149 ಪಂದ್ಯಗಳಿಂದ 110 ವಿಕೆಟ್‌ ಉರುಳಿಸಿದ್ದಾರೆ. ಇದು ಚೆನ್ನೈ ಪರ ಮೂರನೇ ಗರಿಷ್ಠ ಸಾಧನೆಯಾಗಿದೆ.

ಬ್ಯಾಟಿಂಗ್‌ನಲ್ಲಿಯೂ ಮಿಂಚಿರುವ ಅವರು 1,523 ರನ್‌ ಪೇರಿಸಿದ್ದಾರೆ.ಕೆಲವೊಂದು ಪಂದ್ಯಗಳಲ್ಲಿ ಜಡೇಜ ಅದ್ಭುತವಾಗಿ ಆಡಿ ತಂಡ ಗೆಲ್ಲಲು ಕಾರಣರಾಗಿದ್ದಾರೆ. ಚೆನ್ನೈ ಪರ ಆಡಿದ ಎರಡನೇ ಪಂದ್ಯದಲ್ಲಿ ಅವರು ಡೆಕ್ಕನ್‌ ಚಾರ್ಜರ್ ವಿರುದ್ಧ ಕೇವಲ 29 ಎಸೆತಗಳಿಂದ 48 ರನ್‌ ಸಿಡಿಸಿದ್ದರು. ಇದರಿಂದ ಚೆನ್ನೈ 74 ರನ್ನುಗಳಿಂದ ಗೆಲ್ಲಲು ಸಾಧ್ಯವಾಗಿತ್ತು.

Advertisement

ಇದನ್ನೂ ಓದಿ:ಐಪಿಎಲ್‌: ಶುಭಮನ್‌ ಗಿಲ್‌ ಶತಕ ವಂಚಿತ; ಕೊನೆಯ ಎಸೆತದಲ್ಲಿ ಗೆದ್ದ ಗುಜರಾತ್ ಟೈಟಾನ್ಸ್‌

ಚೆನ್ನೈ ಪರ ಜಡೇಜ ಅವರ ಪ್ರಯಾಣ 2022ರಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈ ಬಾರಿಯ ಐಪಿಎಲ್‌ ಆರಂಭವಾಗುವ ಮೊದಲೇ ಧೋನಿ ಅವರು ನಾಯಕತ್ವದ ಜವಾಬ್ದಾರಿಯನ್ನು ಜಡೇಜ ಅವರಿಗೆ ಬಿಟ್ಟುಕೊಟ್ಟಿದ್ದಾರೆ. “ಚೆನ್ನೈ ಎಂಬುದು ನನ್ನ ಪಾಲಿಗೆ ಎಲ್ಲವೂ ಆಗಿದೆ. ಇದೊಂದು ಕುಟುಂಬ, ನನ್ನ ಪಾಲಿಗೆ ಮನೆ ಇದ್ದ ಹಾಗೆ.

ಕಳೆದ 10 ವರ್ಷಗಳಿಂದ ನಾನು ಈ ತಂಡದ ಅಂಗವಾಗಿದ್ದೇನೆ. ನಾನು ಬೇರೆ ತಂಡದ ಜತೆ ಆಡುತ್ತಿದ್ದೇನೆ ಎಂದು ಅನಿಸುವುದಿಲ್ಲ’ ಎಂಬುದು ಜಡೇಜ ಪ್ರತಿಕ್ರಿಯೆ.

Advertisement

Udayavani is now on Telegram. Click here to join our channel and stay updated with the latest news.

Next