Advertisement
ಬೆರಳೆಣಿಕೆಯಷ್ಟೂ ಕನ್ನಡಿಗ ಕ್ರಿಕೆಟಿಗರನ್ನು ಹೊಂದಿಲ್ಲ ದಿದ್ದರೂ ಕನ್ನಡಿಗರ ನೆಚ್ಚಿನ ತಂಡವಾಗಿಯೇ ಉಳಿದಿರುವ ರಾಯಲ್ಸ್ ಚಾಲೆಂಜರ್ ಬೆಂಗಳೂರು ತಂಡ ಈ ಬಾರಿ ನೂತನ ನಾಯಕನನ್ನು ಕಂಡಿದೆ. ವಿರಾಟ್ ಕೊಹ್ಲಿ ಬದಲು ದಕ್ಷಿಣ ಆಫ್ರಿಕಾದ ಹೊಡಿಬಡಿ ಆಟಗಾರ, ಕಳೆದ ಸಲದ ಚೆನ್ನೈ ತಂಡದ ಗೆಲುವಿನ ರೂವಾರಿ ಫಾ ಡು ಪ್ಲೆಸಿಸ್ ಆರ್‌ಸಿಬಿಯನ್ನು ಮುನ್ನಡೆಸಲಿದ್ದಾರೆ. ಅವರಿಗೆ ಇದು ಐಪಿಎಲ್ ನಾಯಕತ್ವದ ಮೊದಲ ಆನುಭವ. ಇವರ ಸಾರಥ್ಯದಲ್ಲಿ ಆರ್‌ಸಿಬಿ ಅದೃಷ್ಟ ಬದಲಾದೀತೇ ಎಂಬುದೊಂದು ಕುತೂಹಲ.
ಎಲ್ಲರಿಗೂ ಕುತೂಹಲ ಇರುವುದು ಆರ್‌ಸಿಬಿಯ ಟೀಮ್ ಕಾಂಬೆನೇಶನ್ ಬಗ್ಗೆ. ಎಡಗೈ ಆರಂಭಕಾರ ದೇವದತ್ತ ಪಡಿಕ್ಕಲ್, 360 ಡಿಗ್ರಿ ಬ್ಯಾಟ್ಸ್‌ಮನ್ ಎಬಿ ಡಿ ವಿಲಿಯರ್, ಯಜುವೇಂದ್ರ ಚಹಲ್ ಗೈರು ತಂಡಕ್ಕೆ ಎದುರಾಗಿರುವ ದೊಡ್ಡ ಹೊಡೆತ. ಆಸ್ಟ್ರೇಲಿಯದ ಸ್ಟಾರ್ ಆಟಗಾರರಾದ ಗ್ಲೆನ್ ಮ್ಯಾಕ್ಸ್‌ವೆಲ್, ಜೋಶ್ ಹ್ಯಾಝಲ್‌ವುಡ್ ಇನ್ನೂ ತಂಡವನ್ನು ಸೇರದಿರುವುದು ಮತ್ತೂಂದು ಹಿನ್ನಡೆ. ಮೊದಲ ಸಲ ಆರ್‌ಸಿಬಿಯನ್ನು ಪ್ರತಿನಿಧಿಸುತ್ತಿರುವ ಕೀಪರ್ ದಿನೇಶ್ ಕಾರ್ತಿಕ್ ಹೆಚ್ಚಿನ ಬ್ಯಾಟಿಂಗ್ ಜವಾಬ್ದಾರಿ ವಹಿಸಬೇಕಿದೆ. ಲಂಕೆಯ ಬಹುಕೋಟಿ ಆಟಗಾರ ವನಿಂದು ಹಸರಂಗ ಈ ಸಲವಾದರೂ ಮಂದಹಾಸ ಮೂಡಿಸಬೇಕಿದೆ!
Related Articles
Advertisement
ಆರ್‌ಸಿಬಿ ಬೌಲಿಂಗ್ ಕೂಡ ಹೊಸಬರಿಂದ ಕೂಡಿದೆ. ಹಿಂದಿನ ಸಲದ ಬೌಲರ್ಗಳಾದ ಹರ್ಷಲ್ ಪಟೇಲ್, ಸಿರಾಜ್, ಶಾಬಾಜ್ ಜತೆಗೆ ಡೇವಿಡ್ ವಿಲ್ಲಿ, ಕರ್ಣ್ ಶರ್ಮಾ, ಮೊದಲ ಸಲ ಬೆಂಗಳೂರು ತಂಡದ ಪರ ಆಡುತ್ತಿದ್ದಾರೆ.
ಪಂಜಾಬ್ ಹೆಚ್ಚು ಬಲಿಷ್ಠಪಂಜಾಬ್ ತಂಡಕ್ಕೂ ಕೆಲವು ಸ್ಟಾರ್ ಆಟಗಾರರ ಕೊರತೆ ಕಾಡುತ್ತಿದೆ. ಜಾನಿ ಬೇರ್‌ಸ್ಟೊ, ಕಾಗಿಸೊ ರಬಾಡ ಇವರಲ್ಲಿ ಪ್ರಮುಖರು. ಇದರ ಹೊರತಾಗಿಯೂ ಪಂಜಾಬ್ ಪ್ರಚಂಡ ಪಡೆಯನ್ನೇ ಹೊಂದಿದೆ. ಧವನ್, ಆರ್ಷದೀಪ್, ಶಾರೂಖ್ ಖಾನ್, ಲಿವಿಂಗ್‌ಸ್ಟೋನ್, ರಾಜ್ ಭಾವ, ಸಂದೀಪ್ ಶರ್ಮ, ರಾಹುಲ್ ಚಹರ್ ಅವರನ್ನಿಲ್ಲಿ ಹೆಸರಿ ಸಬಹುದು. ತಂಡದ ಬೌಲಿಂಗ್ ವಿಭಾಗವೂ ಹೆಚ್ಚು ಘಾತಕ ಹಾಗೂ ವೈವಿಧ್ಯಮಯ. ರವಿ ಬಿಷ್ಣೋಯಿ ಲಕ್ನೋ ಪಾಲಾದುದೊಂದೇ ಕೊರತೆ. ಇಂದಿನ ಪಂದ್ಯಗಳು ಮುಂಬೈ vs ಡೆಲ್ಲಿ
ಆರಂಭ: 3.30 ಸ್ಥಳ: ಮುಂಬಯಿ ಆರ್‌ಸಿಬಿ vs ಪಂಜಾಬ್
ಆರಂಭ: 7.30 ಸ್ಥಳ: ಮುಂಬಯಿ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್