Advertisement

ಶೇನ್‌ ವ್ಯಾಟ್ಸನ್‌ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಸಹಾಯಕ ಕೋಚ್‌ ಆಗಿ ಆಯ್ಕೆ

11:19 PM Mar 15, 2022 | Team Udayavani |

ಮುಂಬಯಿ: ಆಸ್ಟ್ರೇಲಿಯ ಕ್ರಿಕೆಟ್‌ ತಂಡದ ಮಾಜಿ ಆಲ್‌ರೌಂಡರ್‌ ಶೇನ್‌ ವ್ಯಾಟ್ಸನ್‌ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಸಹಾಯಕ ಕೋಚ್‌ ಆಗಿ ಆಯ್ಕೆಯಾಗಿದ್ದಾರೆ.

Advertisement

“ವಿಶ್ವದ ಅತ್ಯತ್ತಮ ಟಿ20 ಪಂದ್ಯಾವಳಿಯ ಆಟಗಾರನಾಗಿದ್ದ ನಾನು ಈ ಟೂರ್ನಿಯಲ್ಲಿ ಅದ್ಭುತ ನೆನಪುಗಳನ್ನು ಹೊಂದಿದ್ದೇನೆ. 2008ರಲ್ಲಿ ಶೇನ್‌ ವಾರ್ನ್ ಸಾರಥ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಟ್ರೋಫಿ ಗೆದ್ದಿರುವುದು ಮೊದಲ ನೆನಪಾದರೆ, ಬಳಿಕ ಆರ್‌ಸಿಬಿ ಮತ್ತು ಸಿಎಸ್‌ಕೆ ತಂಡಗಳ ಪರ ಆಡಿದ ನೆನಪು ಮಧುರ. ಈಗ ಕೋಚಿಂಗ್‌ ಅಭಿಯಾನ ಆರಂಭಿಸುತ್ತಿದ್ದೇನೆ. ರಿಕಿ ಪಾಂಟಿಂಗ್‌ ಅವರಂತಹ ದಿಗ್ಗಜರ ಜತೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಅವರು ವಿಶ್ವ ಕ್ರಿಕೆಟ್‌ನ ಅತ್ಯುತ್ತಮ ಕೋಚ್‌. ಅವರ ಜತೆ ಕೆಲಸ ಕಲಿಯುವುದನ್ನು ಎದುರು ನೋಡುತ್ತಿದ್ದೇನೆ’ ಎಂದು ಕೋಚಿಂಗ್‌ ಅಭಿಯಾನದ ಬಗ್ಗೆ ಶೇನ್‌ ವ್ಯಾಟ್ಸನ್‌ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:ಐಪಿಎಲ್‌ ಆರಂಭಿಕ ಪಂದ್ಯಕ್ಕೆ ಸೂರ್ಯಕುಮಾರ್‌ ಅನುಮಾನ

ಟ್ರೋಫಿ ಗೆಲ್ಲುವ ಸಮಯ
“ಡೆಲ್ಲಿ ತಂಡದ ಸಹಾಯಕ ಕೋಚ್‌ ಆಗಿ ಮತ್ತೆ ಐಪಿಎಲ್‌ ಭಾಗವಾಗಿದ್ದೇನೆ. ಈ ಅವಕಾಶ ನೀಡಿದ್ದಕ್ಕೆ ಫ್ರಾಂಚೈಸಿಗೆ ಧನ್ಯವಾದಗಳು. ಡೆಲ್ಲಿ ಕ್ಯಾಪಿಟಲ್ಸ್‌ ಅತ್ಯುತ್ತಮ ತಂಡವನ್ನು ಹೊಂದಿದ್ದು, ಚೊಚ್ಚಲ ಟ್ರೋಫಿ ಗೆಲ್ಲುವ ಸಮಯವನ್ನು ಎದುರು ನೋಡುತ್ತಿದೆ. ಆಟಗಾರರ ಜತೆಗೆ ಕೆಲಸ ಮಾಡಲು ಬಹಳ ಉತ್ಸುಕನಾಗಿದ್ದೇನೆ. ಟ್ರೋಫಿ ಗೆಲುವಿಗಾಗಿ ನನ್ನ ಕೈಲಾದ ಸಂಪೂರ್ಣ ಶ್ರಮ ವಹಿಸಲಿದ್ದೇನೆ’ ಎಂದು ವ್ಯಾಟ್ಸನ್‌ ಹೇಳಿದರು.

ಶೇನ್‌ ವ್ಯಾಟ್ಸನ್‌ ಐಪಿಎಲ್‌ನಲ್ಲಿ 145 ಪಂದ್ಯಗಳನ್ನಾಡಿದ್ದು 3,874 ರನ್‌ ಮತ್ತು 92 ವಿಕೆಟ್‌ ಪಡೆದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next