ಇದು ಇನ್ನೂ ಅಧಿಕೃತವಾಗಿಲ್ಲ. ಈ ಬಾರಿಯ ಐಪಿಎಲ್ ಭಾರತದಲ್ಲೇ ನಡೆಯುವುದು ಬಹುತೇಕ ಖಚಿತ.
Advertisement
ವರದಿ ಪ್ರಕಾರ ಬಿಸಿಸಿಐ ಈ ಬಾರಿಯ ಐಪಿಎಲ್‌ಗಾಗಿ 6 ತಾಣಗಳನ್ನು ಅಂತಿಮಗೊಳಿಸಿದೆ. ಮುಂಬಯಿ, ಹೊಸದಿಲ್ಲಿ, ಕೋಲ್ಕತಾ, ಚೆನ್ನೈ, ಬೆಂಗಳೂರು ಮತ್ತು ಅಹ್ಮದಾಬಾದ್ ಆತಿಥ್ಯ ವಹಿಸಲಿವೆ. 52 ದಿನಗಳ ಟೂರ್ನಿ ಇದಾಗಲಿದ್ದು, ಒಟ್ಟು 60 ಪಂದ್ಯಗಳು ನಡೆಯಲಿವೆ ಎಂದು ವರದಿ ತಿಳಿಸಿದೆ.
ಸಾಮಾನ್ಯವಾಗಿ ಐಪಿಎಲ್ ಫೈನಲ್ ಆತಿಥ್ಯ ವಹಿಸುತ್ತಿದ್ದ ಮುಂಬಯಿಯ ವಾಂಖೇಡೆ ಸ್ಟೇಡಿಯಂಗೆ ಈ ಬಾರಿ ಅವಕಾಶ ಕೈತಪ್ಪುವ ಸಾಧ್ಯತೆ ಇದೆ. ವಿಶ್ವದ ದೊಡ್ಡ ಸ್ಟೇಡಿಯಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಅಹ್ಮದಾಬಾದ್ “ನರೇಂದ್ರ ಮೋದಿ ಸ್ಟೇಡಿಯಂ’ಗೆ ಈ ಆತಿಥ್ಯ ಒಲಿಯಲಿದೆ ಎನ್ನಲಾಗಿದೆ.