Advertisement

ಯುಎಇನಲ್ಲೇ ನಡೆಯಲಿದೆ ಐಪಿಎಲ್: ವೇಳಾಪಟ್ಟಿ ಶೀಘ್ರದಲ್ಲಿ ಬಿಡುಗಡೆ: ಬ್ರಿಜೇಶ್ ಪಟೇಲ್

04:16 PM Jul 21, 2020 | keerthan |

ಮುಂಬೈ: ಕೋವಿಡ್-19 ಕಾರಣದಿಂದ ಮುಂದಿನ ಅಕ್ಟೋಬರ್ ನಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್ ಮುಂದೂಡಿಕೆಯಾಗಿದೆ. ಈ ಕಾರಣದಿಂದ ಈ ಬಾರಿಯ ಐಪಿಎಲ್ ಹಾದಿ ಸುಗಮವಾಗಿದೆ.

Advertisement

ಈ ಬಗ್ಗೆ ಮಾತನಾಡಿರುವ ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್, ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಯುಎಇನಲ್ಲಿ ನಡೆಯಲಿದೆ. 60 ಪಂದ್ಯಗಳ ಕೂಟ ನಡೆಯಲಿದೆ. ದಿನಾಂಕ ಮತ್ತು ವೇಳಾಪಟ್ಟಿಯನ್ನು ಕೆಲವೇ ದಿನಗಳಲ್ಲಿ ಹೊರಬೀಳಲಿದೆ ಎಂದಿದ್ದಾರೆ.

ಸಪ್ಟೆಂಬರ್ ಅಂತ್ಯದಲ್ಲಿ ಐಪಿಎಲ್ ಆರಂಭವಾಗಲಿದೆ ಎನ್ನಲಾಗುತ್ತಿದೆ. ಪೂರ್ಣ ಕೂಟ ಬಹುತೇಕ ಮುಚ್ಚಿದ ಕ್ರೀಡಾಂಗಣದಲ್ಲಿ ಪ್ರೇಕ್ಷಕರಿಲ್ಲದೆ ನಡೆಯುವುದು ಖಚಿತವಾಗಿದೆ. ಭಾರತದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಕಾರಣ ಯುಎಇ ನಲ್ಲಿ ಕೂಟ ನಡೆಸಲಾಗುತ್ತದೆ ಎನ್ನಲಾಗಿದೆ.

ಯುಎಇ ನ ಅಬುಧಾಬಿ, ದುಬೈ, ಶಾರ್ಜಾ, ಮುಂತಾದ ಕಡೆಯ ಕ್ರಿಕೆಟ್ ಮೈದಾನಗಳಲ್ಲಿ ಐಪಿಎಲ್ ನಡೆಯಲಿದೆ. ಈ ಹಿಂದೆ 2014ರಲ್ಲಿ ಮೊದಲಾರ್ಧದ ಐಪಿಎಲ್ ಯುಎಇಯಲ್ಲಿ ನಡೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next