Advertisement
ಸೆ. 19ರಿಂದ ನ. 10ರ ತನಕ ಯುಎಇಯಲ್ಲಿ ಐಪಿಎಲ್ ನಡೆಯುವುದು ಖಾತ್ರಿಯಾಗಿ ಬಹಳ ದಿನ ಉರುಳಿದರೂ ವೇಳಾಪಟ್ಟಿ ಮಾತ್ರ ಪ್ರಕಟಗೊಂಡಿರಲಿಲ್ಲ. ಇಂದು ಬಿಡುಗಡೆಯಾಗಲಿದೆ, ನಾಳೆ ಬಿಡುಗಡೆಯಾಗಲಿದೆ ಎಂದು ಸುದ್ದಿಯಾಗುತ್ತಲೇ ಇತ್ತು. ಇದೀಗ ಐಪಿಎಲ್ ಚೇರ್ಮನ್ ಅವರೇ ಪ್ರಕಟನೆ ನೀಡಿರುವುದರಿಂದ ರವಿವಾರ ವೇಳಾಪಟ್ಟಿ ಪ್ರಕಟಗೊಳ್ಳುವುದು ಖಚಿತವಾಗಿದೆ.
ಚೆನ್ನೈ ತಂಡದ ಹಲವರಿಗೆ ಕೊರೊನಾ ಸೋಂಕು ತಗಲಿದ್ದು ವೇಳಾಪಟ್ಟಿ ವಿಳಂಬಕ್ಕೆ ಮುಖ್ಯ ಕಾರಣ. ಮೂಲ ವೇಳಾಪಟ್ಟಿಯಂತೆ ಸೆ. 19ರ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಮತ್ತು ಚೆನ್ನೈ ಮುಖಾಮುಖೀ ಆಗಬೇಕಿತ್ತು. ಆದರೀಗ ಚೆನ್ನೈ ಉದ್ಘಾಟನಾ ಪಂದ್ಯದಲ್ಲಿ ಆಡುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಹೀಗಾಗಿ ಮುಂಬೈ ಎದುರಾಳಿ ಯಾರೆಂಬುದು ಎಲ್ಲರ ಕುತೂಹಲವಾಗಿದೆ. ಅರ್ಧ ಗಂಟೆ ಬೇಗ ಆರಂಭ
ರಾತ್ರಿ ಪಂದ್ಯಗಳು 8 ಗಂಟೆ ಬದಲು ಭಾರತೀಯ ಕಾಲಮಾನದಂತೆ 7.30ಕ್ಕೆ ಆರಂಭವಾಗುವುದು ಈ ಕೂಟದ ಪ್ರಮುಖ ಬದಲಾವಣೆ. ಆಗ ಯುಎಇಯಲ್ಲಿ ಸಂಜೆ 6 ಗಂಟೆ ಆಗಿರುತ್ತದೆ. ಕೂಟದ ವೇಳೆ 10 ಹಗಲು ಪಂದ್ಯಗಳೂ ನಡೆಯುತ್ತವೆ. ಇವು ಭಾರತದ ಸಮಯದಂತೆ ಅಪರಾಹ್ನ 3.30ಕ್ಕೆ ಆರಂಭವಾಗುವ ಸಾಧ್ಯತೆ ಇದೆ. ಆಗ ಅಲ್ಲಿ ಅಪರಾಹ್ನ 2 ಗಂಟೆ ಆಗಿರುತ್ತದೆ.
Related Articles
ಈ ಕೂಟದ ವೇಳೆಯಲ್ಲೇ ವನಿತಾ ಟಿ20 ಚಾಲೆಂಜರ್ ಟೂರ್ನಿಯೂ ನಡೆಯಲಿದೆ. 3 ತಂಡಗಳ ನಡುವೆ ಒಟ್ಟು 4 ಪಂದ್ಯಗಳನ್ನು ಆಡಲಾಗುವುದು. ಇದು ಐಪಿಎಲ್ ಪ್ಲೇ- ಆಫ್ ವಾರದಲ್ಲಿ ಸಾಗಲಿದೆ ಎಂಬುದಾಗಿ ಬ್ರಿಜೇಶ್ ಪಟೇಲ್ ತಿಳಿಸಿದರು. ಇದರ ವೇಳಾಪಟ್ಟಿ ಕೂಡ ರವಿವಾರ ಪ್ರಕಟಗೊಳ್ಳುವ ಸಾಧ್ಯತೆ ಇದೆ.
Advertisement